Karnataka Times
Trending Stories, Viral News, Gossips & Everything in Kannada

SIP: ಎಸ್ ಐ ಪಿ ಯೋಜನೆ, ಕೇವಲ 500 ರೂಪಾಯಿಗಳೊಂದಿಗೆ ಹೂಡಿಕೆ ಮಾಡಿದ್ರೆ , 21 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಡೆಯಬಹುದು

advertisement

ಇಂದು‌ಹೂಡಿಕೆ ಮಾಡಿದ ಹಣವು ಮುಂದಿನ ದಿನಗಳಲ್ಲಿ‌ ಅಗತ್ಯವಾಗಿ ಬೇಕಾಗುತ್ತದೆ. ಯಾಕಂದ್ರೆ ನಮಗೆ ಕಷ್ಟ ಕಾಲದಲ್ಲಿ ಸಹಾಯಕ ವಾಗುವುದೇ ಈ ಹೂಡಿಕೆಯ ಹಣ. ಇಂದು ಉಳಿತಾಯದ ಹವ್ಯಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸುರಕ್ಷಿತ ಭವಿಷ್ಯವನ್ನು ಗ್ರಾಹಕರಿಗೆ ನೀಡಲು, ಸರ್ಕಾರವು ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ Post Office ಮೂಲಕ ಹೂಡಿಕೆ ಮಾಡುವ ಯೋಜನೆಗಳನ್ನು ಹೆಚ್ಚು ಜಾರಿ ಮಾಡಿದೆ.ಇಂದು ನಿಮ್ಮ ಬಳಿ ಹೂಡಿಕೆಗೆ ಸಾಕಷ್ಟು ಆಯ್ಕೆಗಳಿದ್ದು, ಅವುಗಳಲ್ಲಿ ಹೂಡಿಕೆ ಮಾಡಿದರೆ, ನೀವು ಎಫ್‌ಡಿಗಿಂತ ಹೆಚ್ಚಿನ ಲಾಭದ ಆದಾಯವನ್ನು ಪಡೆಯಲು ಸಹ ಅರ್ಹರಾಗುತ್ತೀರಿ.

ನೀವು ದೀರ್ಘಕಾಲದವರೆಗೆ ಹೂಡಿಕೆ ಮಾಡಬೇಕು ಎಂದು ಇದ್ದರೆ SIP ಮೂಲಕ ಹೂಡಿಕೆ ಮಾಡಲು ಉತ್ತಮ ಅವಕಾಶ ನಿಮಗಿದೆ. ಇಲ್ಲಿ ನೀವು ಕನಿಷ್ಠ ಮೊತ್ತ ಅಂದರೆ SIP ಯಲ್ಲಿ 500 ರೂಗಳ ಹೂಡಿಕೆಯನ್ನು ಸಹ ಪ್ರಾರಂಭಿ ಸಬಹುದು.

 

ಕನಿಷ್ಟ 500 ರೂ ಹೂಡಿಕೆ:

advertisement

ನೀವು ಕನಿಷ್ಟ 500 ರೂ ಹೂಡಿಕೆ ಮಾಡಿದ್ರೆ 25 ವರ್ಷಗಳಲ್ಲಿ 21 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯಲು ಅರ್ಹ ರಾಗುತ್ತೀರಿ. ನಿಮ್ಮ ಆದಾಯ ಗಳಿಕೆ ಹೆಚ್ಚಾದಂತೆ, ನೀವು ಹೂಡಿಕೆ ಮಾಡುವ ಮೊತ್ತ ಹೆಚ್ಚು ಮಾಡುವ ಆಯ್ಕೆಯು ಸಹ ಇಲ್ಲಿದೆಮ ನೀವು 500 ರೂಪಾಯಿಗಳೊಂದಿಗೆ SIP ನಲ್ಲಿ ಹೂಡಿಕೆ ಮಾಡಿದ್ರೆ , ನೀವು ಕನಿಷ್ಟ 25 ರಿಂದ 30 ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ‌ ಅಲ್ಲದೆ, ನೀವು ಪ್ರತಿ ವರ್ಷ ಕನಿಷ್ಠ 10 ಪ್ರತಿಶತದಷ್ಟು ಈ ಹೂಡಿಕೆಯಲ್ಲಿ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ.

 

 

ಅದೇ ರೀತಿ ನೀವು ಪ್ರತಿ ವರ್ಷ 10 ಪ್ರತಿಶತ ಮೊತ್ತವನ್ನು ಸೇರಿಸುವ ಮೂಲಕ 25 ವರ್ಷಗಳಲ್ಲಿ ನಿಮ್ಮ ಒಟ್ಟು ಹೂಡಿಕೆಯು 5,90,082 ರೂ ಆಗಿರುತ್ತದೆ, ಆದರೆ ನೀವು 12 ಪ್ರತಿಶತದಷ್ಟು ಆದಾಯವನ್ನು ಲೆಕ್ಕ ಹಾಕಿದರೆ, ನೀವು ಬಡ್ಡಿಯಿಂದ 15,47,691 ರೂ ಪಡೆಯಬಹುದು. ಈ ರೀತಿ 21 ವರ್ಷಗಳ ನಂತರ ನಿಮಗೆ ಒಟ್ಟು 21,37,773 ರೂ.ದೊರೆಯುತ್ತದೆ.

ಈ ವಿಧಾನ ಅನುಸರಿಸಿ:

ಕೆಲವು ಹೂಡಿಕೆದಾರರು ಈ ಹೂಡಿಕೆಯ ‌ಗಳಿಕೆ ಕಾಣದೇ ಇದ್ದಾಗ ಕೆಲವರು ಎಸ್ಐಪಿ ಸ್ಥಗಿತಗೊಳಿಸಿ ಮೊತ್ತ ಹಿಂಪಡೆಯಲು ಮುಂದಾಗುತ್ತಾರೆ. ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಇನ್ನು ಸಿಗುವ ವೇತನ, ಆದಾಯ ಹೆಚ್ಚಳದ ಮೂಲಕ ಪ್ರತಿ ವರ್ಷ ಎಸ್ಐಪಿ ಮೊತ್ತವನ್ನೂ ಹೆಚ್ಚಿಸುವುದೂ ಕೂಡ ಉತ್ತಮ ವಿಧಾನವಾಗಿದೆ.

advertisement

Leave A Reply

Your email address will not be published.