Karnataka Times
Trending Stories, Viral News, Gossips & Everything in Kannada

PMSBY: ಕೇವಲ 2 ರೂ. ಪಾವತಿ ಮಾಡಿದ್ರೆ ಸಿಗುತ್ತೆ 2 ಲಕ್ಷ ರೂ. ವಿಮೆ; ಕೇಂದ್ರ ಸರ್ಕಾರದ ಬಂಪರ್ ಯೋಜನೆ!

advertisement

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆರೋಗ್ಯ ವಿಮೆ, ಲೈಫ್ ಇನ್ಸೂರೆನ್ಸ್ ಗಳು ಇರುವುದು ಬಹಳ ಮುಖ್ಯ. ಎಷ್ಟೋ ಜನ ದುಬಾರಿ ಬೆಲೆ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಬಡ ವರ್ಗದ ಜನರಿಗೆ ಅಷ್ಟು ದುಬಾರಿ ಪಾಲಿಸಿ ತೆಗೆದುಕೊಳ್ಳುವುದು ಅಥವಾ ಇನ್ಸೂರೆನ್ಸ್ ಮಾಡಿಸುವುದು ಬಹಳ ಕಷ್ಟದ ವಿಚಾರ.

ಇದಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ಬಡ ವರ್ಗದವರು ಕೂಡ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು. ಈ ವಿಮೆ ಸೌಲಭ್ಯದ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)!

ಯಾವುದೇ ಬಡವರ್ಗದ ಜನರು ಅಪಘಾತದ ಸಂದರ್ಭದಲ್ಲಿ ಮರಣ ಹೊಂದಿದರೆ ಕುಟುಂಬಕ್ಕೆ ನೆರವು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಬಡ ನಾಗರಿಕರು ವರ್ಷಕ್ಕೆ ಕೇವಲ 20 ರೂಪಾಯಿ ಹೂಡಿಕೆ ಮಾಡಿ ಎರಡು ಲಕ್ಷ ರೂಪಾಯಿಗಳ ವಿಮೆ ಸೌಲಭ್ಯ ಪಡೆಯಬಹುದು.

ಯಾರು ಅರ್ಜಿ ಸಲ್ಲಿಸಬಹುದು?

advertisement

18ರಿಂದ 70 ವರ್ಷ ವಯಸ್ಸಿನವರು ಈ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಎರಡು ರೂಪಾಯಿನಂತೆ ಒಂದು ವರ್ಷಕ್ಕೆ 20 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಅಪಘಾತದ ಸಂದರ್ಭದಲ್ಲಿ ಮರಣ ಹೊಂದಿದ ಕುಟುಂಬಕ್ಕೆ ಅಥವಾ ನಾಮಿನಿಗೆ ಎರಡು ಲಕ್ಷ ರೂಪಾಯಿಗಳು, ಅಪಘಾತದ ಸಂದರ್ಭದಲ್ಲಿ ಶಾಶ್ವತ ಅಂಗವೈಕಲ್ಯ ಹೊಂದಿದರೆ ಅಂತವರಿಗೆ ಒಂದು ಲಕ್ಷ ರೂಪಾಯಿಗಳವರೆಗೆ ವಿಮಾ ಸೌಲಭ್ಯ ಸಿಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಬಿಮಾ ಯೋಜನೆಯಲ್ಲಿ ವಿಮೆಯ ಪ್ರಯೋಜನ ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ https://www.jansuraksha.gov.in/ ಗೆ ಭೇಟಿ ನೀಡಿ, ಜನ ಸುರಕ್ಷಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ. ನೀವು ಒಂದು ಬಾರಿ ಈ ವಿಮೆ ಆರಂಭಿಸಿದರೆ ರಿಜಿಸ್ಟರ್ಡ್ ಆಗಿರುವ ಬ್ಯಾಂಕ್ ಖಾತೆಯಿಂದ ಪ್ರತಿ ವರ್ಷ ವಿಮಾ ಹಣ ನೇರವಾಗಿ ಕಡಿತಗೊಳಿಸಲಾಗುತ್ತದೆ. ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು ಬ್ಯಾಂಕ್ ನಲ್ಲಿ ಹೋಗಿ ವಿಮೆ ಆರಂಭಿಸಬಹುದು.

ಈ ಮುಖ್ಯ ವಿಚಾರಗಳನ್ನು ಗಮನಿಸಿ!

ಬ್ಯಾಂಕ್ಗಳಲ್ಲಿ ಸಕ್ರಿಯ ಉಳಿತಾಯ ಖಾತೆ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ವಿಮೆ ಆರಂಭಿಸಿ ಒಂದು ವರ್ಷದವರೆಗೆ ಆ ಬ್ಯಾಂಕ್ ಖಾತೆಯನ್ನು ಬಳಸದೆ ಇದ್ದಲ್ಲಿ, ಬ್ಯಾಂಕ್ ಖಾತೆಯನ್ನು ಕಳೆದುಕೊಂಡರೆ, ವಿಮೆ ಕೂಡ ನಿಷ್ಕ್ರಿಯಗೊಳ್ಳುತ್ತದೆ. ಮತ್ತೆ ಹೊಸದಾಗಿ ವಿಮೆಗೆ ಅರ್ಜಿ ಸಲ್ಲಿಸಿ ವಿಮೆ ಆರಂಭಿಸಬೇಕು. ಸ್ವಯಂ ಡೆಬಿಟ್ ಆಗಲು, ಅಂದರೆ ವಿಮಾ ಮೊತ್ತ ಪ್ರತಿ ಬಾರಿ ಸ್ವಯಂ ಚಾಲಿತವಾಗಿ ಕಡಿತಗೊಳಿಸಲು ವಿಮಾದಾರರು ಒಪ್ಪಂದಕ್ಕೆ ಸಹಿ ಹಾಕಬೇಕು. ಈ ರೀತಿ ಅತಿ ಕಡಿಮೆ ಹಣ ವಿಮೆಗಾಗಿ ನೀವು ಮೀಸಲಿಟ್ಟರೆ, ಎರಡು ಲಕ್ಷ ರೂಪಾಯಿಗಳನ್ನು ಸರ್ಕಾರ ಅಗತ್ಯ ಇರುವ ಸಂದರ್ಭದಲ್ಲಿ ಒದಗಿಸುತ್ತದೆ.

advertisement

Leave A Reply

Your email address will not be published.