Karnataka Times
Trending Stories, Viral News, Gossips & Everything in Kannada

IFSC Code: ಐ ಎಫ್ ಎಸ್ ಸಿ ಕೋಡ್ ಏನಿದರ ಪ್ರಾಮುಖ್ಯತೆ ? ಈ ಕೋಡ್ ಯಾವೆಲ್ಲಾ ಮಾಹಿತಿ ನೀಡುತ್ತದೆ ನಿಮಗೆ ತಿಳಿದಿದೆಯೇ ?

advertisement

ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕಾದರೆ ಕೇಳುವ ಬೇಸಿಕ್ ವಿವರಗಳು ಏನು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಬ್ಯಾಂಕಿನ ಹೆಸರು, ಬ್ರಾಂಚ್ ನ ಹೆಸರು (Branch Name), ಐ ಎಫ್ ಎಸ್ ಸಿ ಕೋಡ್ (IFSC Code), ಅಕೌಂಟ್ ನ ರೀತಿ ಅಂದರೆ ಸೇವಿಂಗ್ಸ್ ಅಥವಾ ಕರೆಂಟ್ ಅಕೌಂಟ್ ಮತ್ತು ಅಕೌಂಟ್ ನಂಬರ್ (Account Number) ಇವಿಷ್ಟು ವಿಚಾರಗಳು ಬೇಕಾಗುತ್ತವೆ.

ಈಗ ಯುಪಿಐ ಐಡಿ (UPI ID) ಬಂದಮೇಲೆ ಹಲವಾರು ಸಣ್ಣಪುಟ್ಟ ಬ್ಯಾಂಕಿಂಗ್ ವೈವಾಟುಗಳು ಯುಪಿಐ ಐಡಿ ಆಧಾರದ ಮೇಲೆ ನಡೆಯುತ್ತವೆ. ಆದರೆ ಇಂದಿಗೂ NEFT ಅಥವಾ RTGS ಮಾಡಬೇಕಾದರೆ ಮೇಲೆ ಹೇಳಿದ ಎಲ್ಲಾ ವಿವರಗಳೂ ಬೇಕಾಗುತ್ತವೆ. ಇದರಲ್ಲಿರುವ ಐಎಫ್ಎಸ್‌ಸಿ (IFSC) ಕೋಡ್ ಎಂದರೆ ಏನು ಎನ್ನುವುದು ನಿಮಗೆ ತಿಳಿದಿದೆಯೇ ?

ಆನ್ ಲೈನ್ ಆಗಿರಲಿ ಅಥವಾ ಆಫ್ ಲೈನ್ ಆಗಿರಲಿ ಯಾವುದೇ ರೀತಿಯ ಕೌಂಟ್ ಹಣ ವರ್ಗಾವಣೆಗೆ ಐಎಫ್ಎಸ್‌ಸಿ ಕೋಡ್ ಬಹಳ ಅಗತ್ಯ. ಇದು ನಮ್ಮ ಬ್ಯಾಂಕ್ ನ ಖಾತೆಯನ್ನು ಅಥವಾ ಬ್ರಾಂಚನ್ನು ಖಚಿತಗೊಳಿಸುತ್ತದೆ. ಸರಿಯಾದ ಐ ಎಫ್ ಎಸ್ ಸಿ ಕೋಡ್ (IFSC Code) ನಮೂದಿಸಿದ ಬಳಿಕ ವರ್ಗಾಯಿಸಿದ ಹಣ ಬ್ಯಾಂಕ್ ನ ಬೇರೆ ಬ್ರಾಂಚ್ ಗಳ ಅಕೌಂಟ್ಗೆ ಹೋಗಲು ಸಾಧ್ಯವಿಲ್ಲ.

ಐಎಫ್ಎಸ್‌ಸಿ ಎಂದರೆ ಇಂಡಿಯನ್ ಫೈನಾನ್ಸಿಯಲ್ ಸಿಸ್ಟಮ್ ಕೋಡ್. ಇದು 11 ಅಂಕೆಗಳ ವಿಶೇಷ ಕೋಡ್ ಆಗಿದ್ದು ಪ್ರತಿ ಬ್ಯಾಂಕಿನ ಬ್ರಾಂಚಿಗೆ ಇದು ವಿಶೇಷ ಕೋಡ್ ಆಗಿರುತ್ತದೆ. ದೇಶದ ಯಾವುದೇ ಎರಡು ಬ್ಯಾಂಕುಗಳು ಅಥವಾ ಒಂದೇ ಬ್ಯಾಂಕಿನ ಎರಡು ಬ್ರಾಂಚ್ ಗಳು ಒಂದೇ ಐಎಫ್‌ಎಸ್‌ಸಿ ಕೋಡ್ ಅನ್ನು ಹೊಂದಿರಲು ಸಾಧ್ಯವೇ ಇಲ್ಲ. ಹೀಗಿರಬೇಕಾದರೆ ಹಣ ಸ್ವೀಕರಿಸುವವರ ಬ್ಯಾಂಕ್ ಅನ್ನು ನಿಖರವಾಗಿ ಗುರುತಿಸುವುದು ಸುಲಭವಾಗುತ್ತದೆ.

11 ಅಂಕೆಗಳು ಏನನ್ನು ಸೂಚಿಸುತ್ತವೆ ?

 

advertisement

 

ಐಎಫ್ಎಸ್‌ಸಿಯಲ್ಲಿರುವ 11 ಅಂಕೆಗಳಲ್ಲಿ ಮೊದಲ ನಾಲ್ಕು ಅಂಕೆಗಳು ಬ್ಯಾಂಕಿನ ಹೆಸರನ್ನು ಸೂಚಿಸುತ್ತವೆ. ಅದರ ಐದನೇ ಅಂಕಿ ಸೊನ್ನೆ (0) ಆಗಿದ್ದು, ಇದು ಮುಂದಿನ ದಿನಗಳಲ್ಲಿ ಅಥವಾ ಭವಿಷ್ಯದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಬದಲಾವಣೆಯಾದಾಗ ಬೇಕಾಗಬಹುದು ಎಂಬ ಊಹೆಯಿಂದ ಕಾಯ್ದಿರಿಸಲಾಗಿದೆ. ಕೊನೆಯ ಆರು ಅಂಕಿಗಳು ಬ್ಯಾಂಕ್‍ನ ಶಾಖೆಯ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

ಇದನ್ನು ಗುರುತಿಸುವುದು ಹೇಗೆ – CNRB0001829

ಇದರಲ್ಲಿ ಮೊದಲ ನಾಲ್ಕು ಅಂಕಿಗಳು ಅಂದರೆ ಸಿಎನ್ಆರ್‌ಬಿ (CNRB) ಕೆನರಾ ಬ್ಯಾಂಕ್ ಎನ್ನುವುದನ್ನು ಸೂಚಿಸುತ್ತದೆ. 5 ನೇ ಅಂಕೆ ಕಾಯ್ದಿಟ್ಟ ಶೂನ್ಯ ಆಗಿದೆ. ಕೊನೆಯ 6 ಅಂಕಿಗಳು ಅಂದರೆ 001829 ಇದು ಬ್ಯಾಂಕಿನ ಬ್ರಾಂಚ್ ಅನ್ನು ಸೂಚಿಸುತ್ತದೆ. ಈ ಉದಾಹರಣೆಯಲ್ಲಿ ಕೆನರಾ ಬ್ಯಾಂಕ್ ನ ಉದ್ಯಮ್ ಬಾಗ್ ಶಾಖೆ ಆಗಿದೆ.

IFSC Code ಎಲ್ಲಿ ಸಿಗುತ್ತದೆ ?

ಬ್ಯಾಂಕ್ ನ ಐಎಫ್‌ಎಸ್‌ಸಿ ಕೋಡ್ ನಿಮ್ಮ ಬಳಿ ಇರುವ ಬ್ಯಾಂಕ್ ನ ಪಾಸ್ ಬುಕ್ ನಲ್ಲಿ ನಮೂದಾಗಿರುತ್ತದೆ. ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗಳಲ್ಲಿಯೂ ಈ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಚೆಕ್ ಬುಕ್ ಮೇಲೆ ಕೂಡ ಈ ಅಂಕೆ ನಮದಾಗಿರುತ್ತದೆ. ಬ್ಯಾಂಕಿಗೆ ಸಂಪರ್ಕಿಸಿದರೂ ಈ ಮಾಹಿತಿ ಸಿಗುತ್ತದೆ ಅಥವಾ ಆನ್ ಲೈನ್ ನಲ್ಲಿ ಕೂಡ ಹಲವಾರು ವೆಬ್ ಸೈಟ್ ಗಳು ಈ ಮಾಹಿತಿಯನ್ನು ಒದಗಿಸುತ್ತವೆ.

advertisement

Leave A Reply

Your email address will not be published.