Karnataka Times
Trending Stories, Viral News, Gossips & Everything in Kannada

Loan Guarantor: ಒಬ್ಬರ ಸಾಲಕ್ಕೆ ನೀವು ಜಾಮೀನುದಾರರಾಗಿದ್ದು, ಅವರು ಸಾಲ ತೀರಿಸದೆ ಇದ್ದರೆ ಏನಾಗುತ್ತೆ ಗೊತ್ತೆ?

advertisement

ಜೀವನದಲ್ಲಿ ಯಾವ ಸಮಯದಲ್ಲಿ ಸಾಲ ಮಾಡುವಂತಹ ಪರಿಸ್ಥಿತಿ ಬರಬಹುದು ಎಂದು ಹೇಳಲು ಸಾಧ್ಯವಿಲ್ಲ ಅಂತಹ ಸಂದರ್ಭದಲ್ಲಿ ನಾವು ಬ್ಯಾಂಕ್ ಮೊರೆ ಹೋಗುವುದು ಸಹಜ. ಆದರೆ ಬ್ಯಾಂಕ್ ಒಬ್ಬ ವ್ಯಕ್ತಿಗೆ ಸುಖಾ ಸುಮ್ಮನೆ ಸಾಲ ಕೊಡುವುದಿಲ್ಲ. ಯಾವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು, ಸರಿಯಾದ ಜಾಮೀನುದಾರ ತನ್ನ ಗ್ಯಾರಂಟಿ ಕೊಡುವ ಅಗತ್ಯವಿದೆ.

ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಜಾಮೀನುದಾರ ಆಗಬೇಕು ಅಂದ್ರೆ ಆತ ಹತ್ತಿರದ ವ್ಯಕ್ತಿ ಆಗಿರಬೇಕು ಹಾಗೂ ಬ್ಯಾಂಕ್ ನ ನಿಯಮಗಳಿಗೆ ಬದ್ಧರಾಗಿರಬೇಕು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಸಾಲ ತೆಗೆದುಕೊಳ್ಳುವುದಕ್ಕೆ ಜಾಮೀನು ಸಹಿ ಮಾಡಿದ ನಂತರ ಸಾಲ ತೆಗೆದುಕೊಂಡ ವ್ಯಕ್ತಿ ಸಾಲ ತೀರಿಸದೇ ಇದ್ದರೆ ಆಗ ಆ ಹೊಣೆ ಜಾಮೀನುದಾರನದ್ದೇ ಆಗಿರುತ್ತದೆ.

ಸಾಲ (Loan) ತೆಗೆದುಕೊಂಡ ವ್ಯಕ್ತಿ ಸಾಲ ಮರುಪಾವತಿ ಮಾಡದೆ ಇದ್ದರೆ ಜಾಮೀನುದಾರನಿಗೆ ಸಂಕಷ್ಟ! ಗುತ್ತಿಗೆ ಕಾಯ್ದೆ 128ರ ಅಡಿಯಲ್ಲಿ ಜಾಮೀನ್ದಾರ ಕೂಡ ಸಹ ಸಾಲಗಾರನಾಗಿಯೇ ಸಹಿ ಹಾಕಬೇಕಾಗುತ್ತದೆ.

ಯಾವುದೇ ಒಬ್ಬ ಸಾಲಗಾರ ಸಾಲ ಮರುಪಾವತಿ ಮಾಡದೇ ಇದ್ದರೆ ಬಡ್ಡಿ ಹಿಂತಿರುಗಿಸದೆ ಇದ್ದರೆ ಆಗ ಆ ಹೊಣೆ ಅಥವಾ ಜವಾಬ್ದಾರಿ ಖಾತರಿದಾರ (Loan Guarantor) ನದ್ದೆ ಆಗಿರುತ್ತದೆ. ವ್ಯಕ್ತಿಗೆ ಸಾಲಕ್ಕಾಗಿ ಖಾತರಿಗೇ ಸಹಿ ಮಾಡುವಾಗ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕು. ಇಲ್ಲವಾದರೆ ಖಾತರಿ ಕೊಟ್ಟಿದ್ದಕ್ಕೆ ಸಮಸ್ಯೆ ಅನುಭವಿಸಬೇಕಾಗುತ್ತದೆ.

advertisement

ಖಾತ್ರಿದಾರ ಆಗಿದ್ದರೆ ಈ ಕೆಲಸ ಮಾಡಿ!

ನೀವು ನಿಮ್ಮ ಸ್ನೇಹಿತನಿಗೆ ಅಥವಾ ಸಂಬಂಧಿಗೆ ಸಾಲ ತೆಗೆದುಕೊಳ್ಳಲು ಜಾಮೀನು ಅಥವಾ ಖಾತರಿ ನೀಡಿದ್ದರೆ ಅವರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಸಾಲ ಮರುಪಾವತಿ ಸರಿಯಾದ ಅವಧಿಗೆ ಮಾಡದೆ ಇದ್ದರೆ ಸಾಲ ಮರುಪಾವತಿ ಮಾಡುವಂತೆ ನೀವು ಅವರಿಗೆ ಹೇಳಬೇಕು.

ಇನ್ನು ಸಾಲಗಾರ ಸಾಲ ತೀರಿಸದೇ ಇದ್ದರೆ ಆತನಿಗೆ ಯಾರು ಜಾಮೀನು ನೀಡಿರುತ್ತಾರೋ ಅವನ ಸಿಬಿಲ್ ಸ್ಕೋರ್ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅಂದ್ರೆ ಜಾಮೀನು ಕೊಟ್ಟಿರುವ ವ್ಯಕ್ತಿ ಮುಂದಿನ ದಿನಗಳಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಕೂಡ ಕಷ್ಟವಾಗುತ್ತದೆ.

ಸಾಲ ತೆಗೆದುಕೊಂಡ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವುದರ ಮೂಲಕ, ಜಾಮೀನುದಾರ ಗುತ್ತಿಗೆ ಕಾಯ್ದೆ ಅಡಿಯಲ್ಲಿ ತನ್ನ ಹಕ್ಕನ್ನು ಚಲಾಯಿಸಬಹುದು.

advertisement

Leave A Reply

Your email address will not be published.