Karnataka Times
Trending Stories, Viral News, Gossips & Everything in Kannada

7th Pay Commission: ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳ, ಈ ತಿಂಗಳಲ್ಲಿ ಘೋಷಣೆ ಸಾಧ್ಯತೆ!

advertisement

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಬಗ್ಗೆ ಗುಡ್ ನ್ಯೂಸ್ ನೀಡಿದೆ. ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಮಾರ್ಚ್ ತಿಂಗಳಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದ್ದು, ಬಹು ದಿನಗಳಿಂದ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಕೊನೆಗೂ ಸಿಹಿ ಸುದ್ದಿ ಕೊಟ್ಟಿದೆ.

ತುಟ್ಟಿ ಭತ್ಯೆ ಎಂದರೇನು?

ಇಂದು ದಿನ‌ನಿತ್ಯದ ವಸ್ತುಗಳ ಬೆಲೆ ಏರಿಕೆ ಜೊತೆಗೆ ಜೀವನ ಶೈಲಿಯ ಖರ್ಚು ವೆಚ್ಚಗಳು ಕೂಡ ಹೆಚ್ಚಾಗಿವೆ. ಈ ವೆಚ್ಚಗಳನ್ನು ಸರಿದೂಗಿಸಲು ನೌಕರರ ವೇತನ ಕೂಡ ಹೆಚ್ಚಳ ಮಾಡಬೇಕಾಗುತ್ತದೆ. ಪ್ರತೀ ವರ್ಷ ಭಾರತದಲ್ಲಿ ಸರಾಸರಿಯಾಗಿ ಶೇ. 4ರಿಂದ 8ರಷ್ಟು ಅಗತ್ಯವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಇದರಿಂದ ನೌಕರರಿಗೆ ಹೊರೆಯಾಗುತ್ತದೆ. ಹೀಗಾಗಿ, ವೇತನ ಆಯೋಗವು ಸಂಬಳ ಹೆಚ್ಚಳದ ಜೊತೆಗೆ ತುಟ್ಟಿಭತ್ಯೆ ಸಹ ಹೆಚ್ಚಳ ಮಾಡಲಾಗುತ್ತದೆ.

ಪರಿಷ್ಕರಣೆ

ಪ್ರತೀ ವರ್ಷ ಜನವರಿ ಮತ್ತು ಜುಲೈನಲ್ಲಿ, ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ. ನೌಕರರಿಗೆ ಡಿಎ (DA) ನೀಡಲಾಗುತ್ತದೆ. ಪಿಂಚಣಿದಾರರಿಗೆ ಡಿಆರ್ ದೊರೆಯುತ್ತದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 47 ಲಕ್ಷ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 68 ಲಕ್ಷ ಪಿಂಚಣಿದಾರರು ‌ಇದ್ದು ಇವರೆಲ್ಲರಿಗೂ ಈಗ ಶೇ. 46ರಷ್ಟು ಡಿಎ ಮತ್ತು ಡಿಆರ್ ಹೆಚ್ಚಾಗಲಿದೆ

advertisement

ಇಷ್ಟು ಹೆಚ್ಚಳ

ಪ್ರಸ್ತುತ ಸರ್ಕಾರದಿಂದ ನೌಕರರಿಗೆ ಶೇ.46 ತುಟ್ಟಿಭತ್ಯೆ ನೀಡಲಾಗುತ್ತಿದೆ. ಕೇಂದ್ರ ನೌಕರರ ವೇತನದಲ್ಲಿ 9000 ರೂ. ಏರಿಕೆಯಾಗಲಿದ್ದು , ಉದ್ಯೋಗಿಯ ಮೂಲ ವೇತನ 18000 ರೂ.ಆಗಿದ್ದರೆ, 50% ಡಿಎಯ ಆಧಾರದಲ್ಲಿ ಅವರು 9000 ರೂ. ಪಡೆಯಬಹುದು. ಆದರೆ, ಡಿಎ 50% ಆದ ಬಳಿಕ ಅದನ್ನು ಮೂಲ ವೇತನಕ್ಕೆ ಆ್ಯಡ್ ಮಾಡಲಾಗುತ್ತದೆ.‌ ಇದಾದ ಬಳಿಕ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಆ ನಂತರ ಮತ್ತೆ ಮೊದಲಿನ ನಿಯಮ ಅನ್ವಯವಾಗುತ್ತದೆ ಎನ್ನಲಾಗಿದೆ.

ಕಳೆದ ಎಪ್ರಿಲ್ ನಲ್ಲಿ ಹೆಚ್ಚಳ ಮಾಡಿತ್ತು

ಏಪ್ರಿಲ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಕೇಂದ್ರ ಸರ್ಕಾರ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಹೆಚ್ಚಳ ಮಾಡಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ರಾಜ್ಯ ಸರ್ಕಾರವು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಇದೀಗ ಕೇಂದ್ರ ಸರಕಾರ ಮಾರ್ಚ್ ನಲ್ಲಿ ಮತ್ತೆ ಘೋಷಣೆ ಮಾಡಲಿದೆ

advertisement

Leave A Reply

Your email address will not be published.