Karnataka Times
Trending Stories, Viral News, Gossips & Everything in Kannada

Loan: ಸಾಲದ ಮೇಲಿನ ಬಡ್ಡಿ ದರ ಹೆಚ್ಚು ಮಾಡಿ ಈ 4 ಬ್ಯಾಂಕುಗಳು, ಚೆಕ್ ಮಾಡಿಕೊಳ್ಳಿ

advertisement

ಹಣದ ಅವಶ್ಯಕತೆ ಇಂದು ಎಲ್ಲರಿಗೂ ಬಹಳ ಮುಖ್ಯವಾಗುತ್ತದೆ. ಕೆಲವೊಮ್ಮೆ ತುರ್ತು ಸಾಲದ ಅವಶ್ಯಕತೆ ಹೆಚ್ಚು ಇರುತ್ತದೆ. ಆರೋಗ್ಯ ಸಮಸ್ಯೆ ಅಥವಾ ಮನೆ, ಕಾರು ಇತರೆ ವಸ್ತುಗಳ ಖರೀದಿಗೆ ಸಾಲದ ಅವಶ್ಯಕತೆ ಇದ್ದೆ ಇರುತ್ತದೆ.ಈ ಸಂದರ್ಭದಲ್ಲಿ ಎಲ್ಲರಲ್ಲಿ ಬರುವ ಆಲೋಚನೆಯೇ ಸಾಲ ಪಡೆದು ಕೊಳ್ಳುವುದು ಆಗಿರುತ್ತದೆ. ಆದರೆ, ಸಾಲ (Loan) ಪಡೆಯುವ ಮುನ್ನ ಯಾರ ಬಳಿ ಸಾಲ ಪಡೆಯುತ್ತಿದ್ದೇವೆ, ಬ್ಯಾಂಕ್ ಆಯ್ಕೆ, ರಿಟರ್ನ್ ಇತ್ಯಾದಿ ಬಗ್ಗೆ ತಿಳಿದುಕೊಂಡಿರಬೇಕು.ನೀವು ಸಾಲವನ್ನು ಪಡೆದು ಕೊಂಡಿದ್ದರೂ ಅದನ್ನು ಸರಿಯಾಗಿ ಮರುಪಾವತಿ ಮಾಡುವುದು ಸಹ ಬಹಳ ಮುಖ್ಯ

ಬಡ್ಡಿದರ ಏರಿಕೆ

ಸಾಲ (Loan) ಅಂತ ಬಂದಾಗ ಹೆಚ್ಚಿನವರು ಆಯ್ಕೆ ಮಾಡಿಕೊಳ್ಳುವುದೇ ಈ ಬ್ಯಾಂಕ್ ಸಾಲ. ಇಂದು ಬ್ಯಾಂಕುಗಳ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಹಾಗೇ ಬಡ್ಡಿ ದರ ಸಹ ಏರಿಕೆ ಯಾಗುತ್ತಿದೆ.ಹಲವು ಬ್ಯಾಂಕುಗಳು ಕೆಲವು ಸಾಲಗಳ ಮೇಲಿನ ವೆಚ್ಚ ಆಧಾರಿತ ಬಡ್ಡಿ ದರ ಏರಿಕೆ ಮಾಡಿದ್ದು ಯಾವೆಲ್ಲ ಬ್ಯಾಂಕ್ ಎಂಬ ಮಾಹಿತಿ ಇಲ್ಲಿದೆ.

advertisement

ಈ ಬ್ಯಾಂಕ್ ಗಳು ಹೆಚ್ಚಳ ಮಾಡಿದೆ

  • ಜನವರಿ 2024 ರಲ್ಲಿ ತಮ್ಮ ಸಾಲದ ದರಗಳನ್ನು ಬ್ಯಾಂಕ್ ಗಳು ಪರಿಷ್ಕರಣೆ ಮಾಡಿದ್ದು ICICI ಬ್ಯಾಂಕ್  ತನ್ನ MCLR ಅನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ, ಎನ್ನಲಾಗಿದೆ.
  • ಅದೇ ರೀತಿ PNB ಬ್ಯಾಂಕ್ ಕೂಡ ಸಾಲದ ದರಗಳನ್ನು ಸ್ವಲ್ಪ ಹೆಚ್ಚಿಸಿದೆ. ಒಂದು ತಿಂಗಳ ದರವು 8.30% ಮೂರು ತಿಂಗಳ ದರವು 8.40% ಆರು ತಿಂಗಳ ದರ 8.60% ಆಗಿದೆ.
  • ಬ್ಯಾಂಕ್ ಆಫ್ ಇಂಡಿಯಾ 5 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ. ಒಂದು ತಿಂಗಳಿಗೆ MCLR ಆಧಾರಿತ ಸಾಲದ ದರವು 8.25% ಆಗಿದೆ, ಮೂರು ತಿಂಗಳ ದರವು 8.40% ಆಗಿದೆ, ಆರು ತಿಂಗಳ ದರವು 8.60% ಆಗಿದೆ ಮತ್ತು ಒಂದು ವರ್ಷದ ದರವು 8.80% ಆಗಿದೆ.
  • ಕೆನರಾ ಬ್ಯಾಂಕ್ ತನ್ನ ಸಾಲದ ದರಗಳನ್ನು 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.ಈ ಬ್ಯಾಂಕ್ ನಲ್ಲಿ ಒಂದು ತಿಂಗಳ ದರವು ಈಗ 8.1% ರಿಂದ 8.15% ಆಗಿದೆ ಮತ್ತು ಮೂರು ತಿಂಗಳ ದರವು 8.20% ರಿಂದ 8.25% ಕ್ಕೆ ಏರಿದೆ. ಆರು ತಿಂಗಳ ದರವು 8.55% ರಿಂದ 8.60% ಕ್ಕೆ ಏರಿಕೆ ಯಾಗಿದೆ.

ಈ ರೀತಿ ಹಲವು ಪ್ರತಿಷ್ಠಿತ ಬ್ಯಾಂಕ್ ಗಳು ದರವನ್ನು ಪರಿಷ್ಕರಣೆ ಮಾಡಿದ್ದು ಸಾಲ ಪಡೆಯುವ ಗ್ರಾಹಕರು ಬಡ್ಡಿದರದ ಮಾಹಿತಿ ತಿಳಿದು ಸಾಲ ಪಡೆದುಕೊಳ್ಳುವುದು ಮುಖ್ಯವಾಗುತ್ತದೆ.

advertisement

Leave A Reply

Your email address will not be published.