Karnataka Times
Trending Stories, Viral News, Gossips & Everything in Kannada

Loan: ರೈತರಿಗಾಗಿ ರಾಜ್ಯ ಸರ್ಕಾರ ನೀಡಲಿದೆ ಬಡ್ಡಿಯಿಲ್ಲದ ಸಾಲ ಸೌಲಭ್ಯ!

advertisement

ಈ ದೇಶದ ಮುಖ್ಯ ಭಾಗ ನಮ್ಮ ರೈತರು. ರೈತರು ಅಭಿವೃದ್ಧಿ ಯಾದರೆ ಮಾತ್ರ ದೇಶವು ಪ್ರಗತಿಯಲ್ಲಿರುತ್ತದೆ. ಇಂದು ರೈತರಿಗಾಗಿ ಸರಕಾರ ಹಲವು ರೀತಿಯ ಸೌಲಭ್ಯ ಒದಗಿಸುತ್ತಿದ್ದು ಬೆಳೆ ಪರಿಹಾರ, ಯಂತ್ರೋಪಕರಣ, ಸಾಲ (Loan) ಸೌಲಭ್ಯ ಇತ್ಯಾದಿಗಳನ್ನು ಒದಗಿಸುತ್ತಿದೆ. ಅದೇ ರೀತಿ ರಾಜ್ಯ ಸರ್ಕಾರವು ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಆಯ್ಕೆಮಾಡಿ ಬಡ್ಡಿ ಇಲ್ಲದೆ ಸಾಲ ನೀಡಲು ಮುಂದಾಗಿದೆ.

ಎಷ್ಟು ಸಾಲ ಸೌಲಭ್ಯ?

ಬಡ್ಡಿ ಸಹಾಯಧನ ಯೋಜನೆ (Interest Subsidy Scheme) ಮೂಲಕ ರಾಜ್ಯ ಸರ್ಕಾರ 1 ಲಕ್ಷ ರೂ.ವರೆಗೆ ಬಡ್ಡಿಯಿಲ್ಲದೆ ಸಾಲ ಸೌಲಭ್ಯ ನೀಡಲಿದೆ. ಇದರಿಂದ ರೈತರು ಬಡ್ಡಿ ಇಲ್ಲದೆ ಸಾಲ ಪಡೆಯಬಹುದಾಗಿದ್ದು ಕೃಷಿ ಪರಿಕರಗಳನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆ ಅನುಷ್ಠಾನಕ್ಕೆ 5700 ಕೋಟಿ ರೂ.ಗಳ ಬಜೆಟ್ ಬಿಡುಗಡೆ ಮಾಡಿದ್ದು ರೈತರಿಗೆ ಈ ವಿಚಾರ ಖುಷಿ ಸಿಕ್ಕಿದಂತಾಗಿದೆ.ಈ ಯೋಜನೆಯು 2023-24 ರಿಂದ 2027-28 ರವರೆಗೆ ಸಂಪೂರ್ಣ ಐದು ವರ್ಷಗಳವರೆಗೆ ಸಹಕಾರಿ ಬ್ಯಾಂಕ್‌ಗಳು ಅಥವಾ PACS ಗೆ ಬಡ್ಡಿ ಸಹಾಯಧನ (Subsidy) ಸಾಲ ಸೌಲಭ್ಯ ನೀಡುತ್ತದೆ.

ಅವಧಿಯೊಳಗೆ ಪಾವತಿ:

ರೈತರು ಪಡೆದುಕೊಂಡ ಸಾಲವನ್ನು ತಮ್ಮ ಅವಧಿ ಯೊಳಗೆ ಮರುಪಾವತಿ ಮಾಡಬೇಕು. ಇದಕ್ಕೆ ಯಾವುದೇ ರೀತಿಯಲ್ಲಿ ಸಾಲ (Loan) ಕ್ಕೆ ಬಡ್ಡಿ ಇರುವುದಿಲ್ಲ. ಆದರೆ ಅವಧಿ ಮೀರಿದ ನಂತರ ಸಾಲಕ್ಕೆ ಬಡ್ಡಿ ವಿಧಿಸಲಾಗುತ್ತದೆ.

advertisement

ಸರಕಾರದ ಸಬ್ಸಿಡಿ:

 

 

ರೈತರಿಗಾಗಿ ಸರಕಾರ ಅವಧಿ ಸಾಲ, ನಗದು ಸಾಲ (Cash Loan), ಅಲ್ಪಾವಧಿ, ದೀರ್ಘಾವಧಿ, ಹೀಗೆ ಬೇರೆ ಬೇರೆ ರೀತಿಯ ಸಾಲಗಳನ್ನು ಒದಗಿಸಲಾಗುತ್ತದೆ. ಹೈನುಗಾರಿಕೆ (Dairying), ಹಂದಿ (Swine), ಕೋಳಿ ಸಾಕಾಣಿಕೆ (Poultry), ರೇಷ್ಮೆ (Sericulture), ಪುಷ್ಪೋದ್ಯಮ (Floriculture), ಮೀನುಗಾರಿಕೆ (Fisheries), ಗೋಬರ್ ಗ್ಯಾಸ್ (Dung Gas) ಇತ್ಯಾದಿ ಚಟುವಟಿಕೆ ಗಳಿಗೂ ಸರಕಾರದಿಂದ ಸಬ್ಸಿಡಿ ಮೊತ್ತ ದೊರೆಯುತ್ತದೆ. ಅದೇ ರೀತಿ ರೈತರ ಮತ್ತು ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.7ರ ಬಡ್ಡಿ ದರ ದಲ್ಲಿ ಸಾಲ ಸೌಲಭ್ಯ ನೀಡುತ್ತದೆ.

ರೈತರ ನೆರವು ಯೋಜನೆ:

ರೈತರ ನೆರವು ಯೋಜನೆ ಅಡಿಯಲ್ಲಿ ರಾಜ್ಯದ ರೈತರಿಗಾಗಿ ರೂ 50,000 ರಷ್ಟು ಬಡ್ಡಿ ರಹಿತ ಬೆಳೆ ಸಾಲವನ್ನು ನೀಡಲಾಗುತ್ತಿದ್ದು ರಾಜ್ಯದ ರೈತರು ಈಗಾಗಲೇ ಇದರ ಪ್ರಯೋಜನ ಪಡೆದಿದ್ದಾರೆ.ಸಣ್ಣ ಮತ್ತು ಅತಿ ಸಣ್ಣ ರೈತರ ಏಳಿಗೆಗಾಗಿ ಪ್ರಾರಂಭಿದ ಯೋಜನೆ ಇದಾಗಿದೆ.

advertisement

Leave A Reply

Your email address will not be published.