Karnataka Times
Trending Stories, Viral News, Gossips & Everything in Kannada

School Bus: ದೇಶದಲ್ಲಿ ಎಲ್ಲ ಶಾಲಾ ಬಸ್ಸುಗಳು ಹಳದಿ ಬಣ್ಣದಲ್ಲಿರುತ್ತವೆ ಯಾಕೆ ಗೊತ್ತಾ?

advertisement

ನಾವು ಕಾಮನಬಿಲ್ಲಿನ ಬಣ್ಣ ಎಂದು ಹೇಳುವ 7 ಬಣ್ಣಗಳು ಕೂಡ ಒಂದಲ್ಲ ಒಂದು ಅರ್ಥಗಳನ್ನು ಹೊಂದಿದೆ. ಒಂದೊಂದು ಬಣ್ಣವೂ ಕೂಡ ಒಂದೊಂದು ವಿಷಯದ ಸಂಕೇತವಾಗಿದೆ. ಇದೇ ಕಾರಣಕ್ಕೆ ನಾವು ಬೇರೆ ಬೇರೆ ವಿಷಯಗಳಿಗೆ ಬೇರೆಬೇರೆ ಬಣ್ಣಗಳನ್ನು ಉಪಯೋಗಿಸುವುದರ ಮೂಲಕ ಆ ವಿಷಯಗಳನ್ನು ಗುರುತು ಹಿಡಿಯುತ್ತೇವೆ.

ಉದಾಹರಣೆಗೆ ನೀವು ರಸ್ತೆಯಲ್ಲಿ ಹೋಗುವಾಗ ಸಿಗ್ನಲ್ ನೋಡಿದ್ರೆ ಹಸಿರು (Green) ಮತ್ತು ಕೆಂಪು (Red) ಬಣ್ಣವನ್ನು ಕಾಣಬಹುದು. ಅದೇ ರೀತಿ ರಸ್ತೆಯಲ್ಲಿ ಬೇರೆ ಬೇರೆ ರೀತಿಯ ವಾಹನಗಳು ಕೂಡ ಚಲಿಸುತ್ತವೆ. ಅವುಗಳಲ್ಲಿಯೂ ಕೆಲವು ವಾಹನಗಳು ಒಂದೇ ಪ್ರಮುಖ ಬಣ್ಣದಲ್ಲಿ ಇರುತ್ತವೆ. ನೀವು ಶಾಲಾ ವಾಹನ (School Bus) ವನ್ನು ಗಮನಿಸಿದರೆ ಎಲ್ಲಾ ಶಾಲಾ ವಾಹನಗಳು ಹಳದಿ ಬಣ್ಣದಲ್ಲಿಯೇ (Yellow Color) ಇರುವುದನ್ನು ಕಾಣಬಹುದು.

ಶಾಲಾ ವಾಹನಗಳು (School Buses) ಹಳದಿ ಬಣ್ಣದಲ್ಲಿ ಇರಲು ಕಾರಣ ಏನು ಗೊತ್ತಾ?

 

 

advertisement

ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುವಾಗ ಶಾಲಾ ವಾಹನವನ್ನು ಗಮನಿಸಿ. ಎಲ್ಲಾ ಶಾಲಾ ವಾಹನಗಳು ಕೂಡ ಹಳದಿ ಬಣ್ಣದಲ್ಲಿಯೇ ಇರುತ್ತದೆ. ಇದು ನಮ್ಮ ದೇಶದಲ್ಲಿ ಮಾತ್ರ ಚಾಲ್ತಿಯಲ್ಲಿ ಇರುವುದಿಲ್ಲ. ಪ್ರಪಂಚದ ಹಲವು ದೇಶಗಳಲ್ಲಿ ಶಾಲಾ ವಾಹನದ ಬಣ್ಣ ಹಳದಿಯೇ ಆಗಿರುತ್ತದೆ.

ಹೀಗೆ ಹಳದಿ ಬಣ್ಣದಲ್ಲಿ ಶಾಲಾ ವಾಹನಗಳನ್ನು ಪೇಂಟ್ ಮಾಡಿರುವುದಕ್ಕೂ ಕಾರಣ ಇರುತ್ತೆ. ಕೆಂಪು ಮತ್ತು ಹಳದಿ ಬಹಳ ಬೇಗ ಕಣ್ಣು ಗುರುತಿಸುವಂತಹ ಬಣ್ಣಗಳು ಕೆಂಪು, ಡೇಂಜರ್ (Danger) ಸಂಕೇತ ಸೂಚಿಸುವುದರಿಂದ ಹಳದಿ ಬಣ್ಣ (Yellow Color) ವನ್ನು ಶಾಲಾ ವಾಹನಕ್ಕೆ ಕೊಡಲಾಗುತ್ತದೆ.

ಇನ್ನು ತಜ್ಞರು ಹೇಳುವ ಪ್ರಕಾರ ಇತರ ಬಣ್ಣಗಳಿಗಿಂತಲೂ ಹಳದಿ ಬಣ್ಣ 1.24 ಪಟ್ಟು ಹೆಚ್ಚು ಕಣ್ಣಿನ ದೃಷ್ಟಿಯನ್ನು ಆಕರ್ಷಿಸುತ್ತದೆ. ಅಂದರೆ ಇತರ ಎಲ್ಲಾ ಬಣ್ಣಗಳಿಗಿಂತಲೂ ಹಳದಿ ಬಣ್ಣ ನಮ್ಮನ್ನು ಹೆಚ್ಚು ಗಮನಸೆಳೆಯುತ್ತದೆ. ಹಾಗಾಗಿ ಬೇರೆ ಎಲ್ಲಾ ಬಣ್ಣಗಳಿಗಿಂತಲೂ ಹಳದಿ ಬಣ್ಣವನ್ನು ಬಹಳ ವೇಗವಾಗಿ ಗುರುತಿಸಬಹುದು.

1930ರಲ್ಲಿ ಅಮೆರಿಕ, ಹಳದಿ ಬಣ್ಣ ಅತ್ಯಂತ ಆಕರ್ಷಣೀಯ ಬಣ್ಣವಾಗಿದೆ ಇತರ ಬಣ್ಣಗಳಿಗಿಂತ ಹೆಚ್ಚು ಗಮನ ಸೆಳೆಯುವ ಬಣ್ಣ ಹಳದಿಯಾಗಿದೆ ಎಂದು ಸಂಶೋಧನೆಯ ಮೂಲಕ ದೃಢೀಕರಿಸಿದೆ. ಇನ್ನು ಚಳಿಗಾಲ ಮಳೆಗಾಲ ಬೇಸಿಗೆಕಾಲ, ಮಂಜು, ಹಿಮ ಯಾವುದೇ ಸಂದರ್ಭ ಇರಲಿ ಹಳದಿ ಬಣ್ಣ ಗೋಚರವಾಗುವಷ್ಟು ಸುಲಭವಾಗಿ ಇತರ ಯಾವ ಬಣ್ಣಗಳು ಕೂಡ ಗೋಚರವಾಗುವುದಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ಶಾಲಾ ಮಕ್ಕಳ ವಾಹನಗಳಿಗೆ ಹಳದಿ ಬಣ್ಣವನ್ನು ಬಳಸಲಾಗುತ್ತದೆ. ಮಕ್ಕಳು ಇರುವ ವಾಹನ ವಾಗಿರುವುದರಿಂದ ಯಾವುದೇ ಅಪಘಾತಗಳು ಸಂಭವಿಸಬಾರದು ಎಲ್ಲರಿಗೂ ಶಾಲಾ ವಾಹನ ಬರುತ್ತಿರುವುದು ತಿಳಿಯಬೇಕು ಎನ್ನುವ ಕಾರಣಕ್ಕೆ ಈ ಹಳದಿ ಬಣ್ಣವನ್ನೇ ಶಾಲಾ ವಾಹನಗಳಲ್ಲಿ ಬಳಕೆ ಮಾಡಲಾಗುತ್ತದೆ.

advertisement

Leave A Reply

Your email address will not be published.