Karnataka Times
Trending Stories, Viral News, Gossips & Everything in Kannada

Property: ಕಡಿಮೆ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ಇದ್ದರೆ ಈ ರೀತಿಯಾಗಿ ಕೊಂಡುಕೊಳ್ಳಿ.

advertisement

ಇಂದು ಆಸ್ತಿ ಖರೀದಿ (Property Purchase) ಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಹೂಡಿಕೆಯ ಮುಖ್ಯ ಭಾಗ ಇದುವು ಆಗಿದ್ದು ಇಂದು ಆಸ್ತಿ ಖರೀದಿ, ಮಾರಾಟಕ್ಕೆ ಹೆಚ್ಚಿನ ಬೇಡಿಕೆ ಸಹ ಇದೆ. ಇನ್ನು ಲಕ್ಷಾಂತರ ಮೌಲ್ಯದ ಆಸ್ತಿ ಖರೀದಿ ವೇಳೆ ಸೂಕ್ತ ರೀತಿಯಲ್ಲಿ ‌ಪರಿಶೀಲನೆ ಮಾಡಿ ಎಚ್ಚರಿಕೆಯನ್ನು ತೆಗೆದುಕೊಂಡು ಖರೀದಿ ಮಾಡಬೇಕಾಗುತ್ತದೆ. ಆಸ್ತಿಯ ಮೇಲೆ ಯಾವುದಾದ್ರೂ ಆಕ್ಷೇಪಣೆ ಇದೆಯೇ ಎಂಬುದನ್ನು ನೀವು ಖಚಿತ ಪಡಿಸಿಕೊಳ್ಳಿ. ಆದೇ ರೀತಿ ಆಸ್ತಿ ಖರೀದಿ ಯನ್ನು‌ ಸುಲಭವಾಗಿ ಮಾಡಬೇಕಾದರೆ ಸರಳವಾದ‌ ವಿಧಾನ ಹರಾಜಿನಲ್ಲಿ (Auction) ಖರೀದಿ ಮಾಡುವುದು ಆಗಿದೆ.

ಬ್ಯಾಂಕ್ ಗಳು ಹರಾಜಿಗೆ ಆಯ್ಕೆ ಮಾಡುತ್ತವೆ:

 

 

ಕೆಲವೊಮ್ಮೆ ಆಸ್ತಿ (Property) ಮಾಲೀಕರು ತಮ್ಮ EMI ಪಾವತಿಗಳನ್ನು ಕಟ್ಟಲು ಸಾಧ್ಯವಿಲ್ಲದಿದ್ದಾಗ ಬ್ಯಾಂಕುಗಳು ಆಸ್ತಿಗಳನ್ನು ವಶಪಡಿಸಿಕೊಳ್ಳುತ್ತವೆ. ಅದೇ ರೀತಿ ಬ್ಯಾಂಕ್‌ಗಳು ತಮ್ಮ ಬಾಕಿಗಳನ್ನು ಮರುಪಾವತಿಸಲು ಹರಾಜಿನಲ್ಲಿ ಮಾರಾಟಕ್ಕೆ ಇಡುತ್ತವೆ.ಇದನ್ನು ಬೇಕಾದ ಗ್ರಾಹಕರು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದಾಗಿದೆ.

advertisement

ಸುಲಭ ವಿಧಾನ:

  • ಆಸ್ತಿಯನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಸಹ ಮಾಡಲಾಗುತ್ತದೆ.
  • ಅದೇ ರೀತಿ ಈ ಬ್ಯಾಂಕ್ ಹರಾಜುಗಳು ಕಾನೂನುಬದ್ಧವಾಗಿ ಸುರಕ್ಷಿತವಾಗಿದ್ದು ಖರೀದಿ ಮಾಡಲು ಸಹ ಸುಲಭ ಆಯ್ಕೆ ಯಾಗಿದೆ.
  • ಅದೇ ರೀತಿ ಒಂದು ತಿಂಗಳ ಅವಧಿಯಲ್ಲಿ ಮಾಲೀಕತ್ವವನ್ನು ನಿಮ್ಮ ಹೆಸರಿಗೆ ವರ್ಗಾಯಿಸಲಾಗುತ್ತದೆ.
  • ಹರಾಜಿನಲ್ಲಿ ಇರುವ ಆಸ್ತಿಗಳು ಪ್ರಾಜೆಕ್ಟ್ ವಿಳಂಬ ಮತ್ತು ವೆಚ್ಚದ ಹೆಚ್ಚಳದ ಅಪಾಯವನ್ನು ನಿವಾರಣೆ ಮಾಡುತ್ತದೆ.
  • ನೀವು ಶೇ.15-20ರಷ್ಟು ಆರಂಭಿಕ ಮೊತ್ತ ಪಾವತಿ ಮಾಡಿದ ನಂತರ ಖರೀದಿದಾರರು ಹರಾಜು ಮಾಡಿದ ಬ್ಯಾಂಕಿಗೂ ಸಾಲಕ್ಕೆ ಅರ್ಜಿ ಹಾಕಲು ಅವಕಾಶ ಇದೆ.

ಹರಾಜಿನಲ್ಲಿ ಭಾಗವಹಿಸಬೇಕು:

ಆಸ್ತಿಯ ಹರಾಜಿನ ನಿಖರವಾದ ಸಮಯ ಮತ್ತು ದಿನಾಂಕ ತಿಳಿದು‌ಕೊಂಡು ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇದೆ. ಇಂದು ಹೆಚ್ಚಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇತರ ಬ್ಯಾಂಕ್‌ಗಳು ಸಹ ಈ ಹಿಂದೆ ಸಾಲ ಪಾವತಿಸದ ಸಾವಿರಾರು ಆಸ್ತಿಗಳನ್ನು ಹರಾಜು ಹಾಕಿ ಬಾಕಿ ಇದ್ದ ಹಣವನ್ನು ಸರಿಪಡಿಸಿಕೊಂಡಿವೆ.ಹಾಗಾಗಿ ಆಸ್ತಿ ಖರೀದಿ ಮಾಡಲು ಇದು ಕೂಡ ಸೂಕ್ತ ಆಯ್ಕೆ ಯಾಗಿದೆ.

advertisement

Leave A Reply

Your email address will not be published.