Karnataka Times
Trending Stories, Viral News, Gossips & Everything in Kannada

Mobile Recharge: ಮೊಬೈಲ್ ಬಳಕೆದಾರರಿಗೆ ಆಘಾತ; ಕರೆ ಡೇಟಾ ಪ್ಯಾಕ್ ದರದಲ್ಲಿ 20% ನಷ್ಟು ಹೆಚ್ಚಳ!

advertisement

ನಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ರೆ ಯಾವುದೇ ಸ್ಥಳದಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಫೋನ್ ಕರೆ ಮಾಡಬಹುದು ಅಥವಾ ಇಂಟರ್ನೆಟ್ ಬಳಸಿಕೊಂಡು ಕರೆ ಮಾಡುವುದು ಮಾತ್ರವಲ್ಲದೆ ಹಣಕಾಸಿನ ವ್ಯವಹಾರವನ್ನು ಕೂಡ ಮಾಡಬಹುದು.

ಹೀಗೆ ಇಂಟರ್ನೆಟ್ ಬಳಸುವವರಿಗೆ ದೇಶದ ದೈತ್ಯ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel), ವಿ ಐ (Vi) ಮೊದಲಾದ ಕಂಪನಿಗಳು ಬೇರೆ ಬೇರೆ ಪ್ರಿ ಪೇಯ್ಡ್ (Prepaid) ಹಾಗೂ ಪೋಸ್ಟ್ ಪೇಯ್ಡ್ (Postpaid) ಯೋಜನೆಗಳನ್ನು ನೀಡುತ್ತವೆ. ಟೆಲಿಕಾಂ ಕಂಪನಿಗಳು ಆಘಾತ ನೀಡಿದ್ದು ಮೊಬೈಲ್ ಕರೆ ಹಾಗೂ ಡಾಟಾ ಪ್ಯಾಕ್ ನ ಬೆಲೆ ಹೆಚ್ಚಿಸುವುದಾಗಿ ತಿಳಿಸಿದೆ.

ಭಾರತೀಯ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರದಲ್ಲಿ ಹೆಚ್ಚಳ!

 

 

advertisement

ಭಾರತೀಯ ಟೆಲಿಕಾಂ ಕಂಪನಿಗಳು (Telecom Companies) ಗ್ರಾಹಕರಿಗೆ ನೀಡುತ್ತಿರುವ ಸೇವೆಯ ದರವನ್ನು ಹೆಚ್ಚಿಸಲು ನಿರ್ಧರಿಸುವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೊಬೈಲ್ ನಿಂದ ಮಾಡಬಹುದಾದ ಎಲ್ಲಾ ರೀತಿಯ ಕರೆ ಹಾಗೂ ಇಂಟರ್ನೆಟ್ ಡೇಟಾ ದರವನ್ನು ಹೆಚ್ಚಿಸಲಾಗುವುದು. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದ್ದು, ಜನರಿಗೆ ರಿಚಾರ್ಜ್ ಗಳು ಇನ್ನಷ್ಟು ದುಬಾರಿ ಆಗಲಿದೆ.

ಭಾರತೀಯ ಟೆಲಿಕಾಂ ಕಂಪನಿಗಳು 20ರ ಷ್ಟು ಮೊಬೈಲ್ ಕರೆ ಹಾಗೂ ಡಾಟಾ ಪ್ಯಾಕ್ ನ ದರವನ್ನು ಹೆಚ್ಚಿಸಲು ನಿರ್ಧರಿಸುವೆ ಎನ್ನುವ ವರದಿ ಇದೆ. ಹಾಗಾದ್ರೆ ಈ 20 % ನಷ್ಟು ದರವನ್ನು ಹೆಚ್ಚಳ ಮಾಡುವ ಪ್ರಕ್ರಿಯೆ ಎಂದೆನಿಂದ ಆರಂಭವಾಗಬಹುದು ಎನ್ನುವ ಬಗ್ಗೆ ಗ್ರಾಹಕರು ತಲೆ ಕೆಡಿಸಿಕೊಂಡಿದ್ದಾರೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಟೆಲಿಕಾಂ ಕಂಪನಿಗಳು ಎರಡು ವರ್ಷಗಳ ಬಳಿಕ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಟೆಲಿಕಾಂ ಉದ್ಯಮದಲ್ಲಿಯೂ ಕೂಡ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ವೊಡಾಫೋನ್ ಐಡಿಯಾ (Vi), ರಿಲಯನ್ಸ್ ಜಿಯೋ (Reliance Jio), ಭಾರ್ತಿ ಏರ್ಟೆಲ್ (Airtel) ಮೊದಲಾದ ಟೆಲಿಕಾಂ ಕಂಪನಿಗಳು ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು ಇದರಿಂದ ಟೆಲಿಕಾಂ ಕಂಪನಿಗಳಿಗೆ ಹಣಕಾಸಿನ ಹೊರೆ ಕಡಿಮೆ ಆಗಲಿದೆ.

ಆದರೆ ಈ ರೀತಿ ದರ ಏರಿಕೆ ಜನರ ಮೇಲೆ ಮಾತ್ರ ದೊಡ್ಡ ಪರಿಣಾಮ ಬೀರಲಿದೆ. ಇದಕ್ಕೆ ಕಾರಣ ಈಗಾಗಲೇ ನಾವು ಹಣದುಬ್ಬರದ ಸಮಸ್ಯೆಯನ್ನು ಅನುಭವಿಸುತ್ತಿದ್ದೇವೆ. ದುಬಾರಿ ದುನಿಯಾದಲ್ಲಿ ಪ್ರತಿಯೊಂದರ ಬೆಲೆಯೂ ಕೂಡ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಟೆಲಿಕಾಂ ಕಂಪನಿಗಳು ಕೂಡ ದರ ಹೆಚ್ಚಳ ಮಾಡಿದರೆ ಗ್ರಾಹಕರಿಗೆ ಆರ್ಥಿಕವಾಗಿ ಬಹಳ ದೊಡ್ಡ ಹೊರೆ ಆಗಲಿದೆ. ಆದರೆ ವರದಿಯ ಪ್ರಕಾರ ಟೆಲಿಕಾಂ ಕಂಪನಿಗಳು ಇನ್ನು ಎರಡು ವರ್ಷಗಳ ಬಳಿಕ 20 % ನಷ್ಟು ಏರಿಕೆ ಮಾಡಲು ನಿರ್ಧರಿಸುವುದರಿಂದ ಈ ಅವಧಿಯಲ್ಲಿ ಯಾವ ಬದಲಾವಣೆಗಳು ಬೇಕಾದರೂ ಆಗಬಹುದು. ಹಾಗಾಗಿ ಗ್ರಾಹಕರು ಈಗಿಂದಲೇ ಆತಂಕ ಪಟ್ಟುಕೊಳ್ಳುವ ಅಗತ್ಯ ಇಲ್ಲ.

advertisement

Leave A Reply

Your email address will not be published.