Karnataka Times
Trending Stories, Viral News, Gossips & Everything in Kannada

Loan: ಸಾಲ ಪಡೆದು ಪಾವತಿ ಮಾಡಲು ಸಾಧ್ಯವಾಗದೆ ಇರುವವರಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

advertisement

ಅದೆಷ್ಟೋ ಸಮಯದಲ್ಲಿ ನಾವು ಸಾಲ (Loan) ಮಾಡಬೇಕಾದ ಅನಿವಾರ್ಯತೆ ಬರಬಹುದು. ಆದರೆ ಹಲವರಿಗೆ ಸಾಲ ತೀರಿಸುವ ಸಂದರ್ಭದಲ್ಲಿ ಒಂದಲ್ಲ ಒಂದು ಇತರ ಆರ್ಥಿಕ ಸಮಸ್ಯೆಯಿಂದಾಗಿ ಸಾಲ ತೀರಿಸಲು ಸಾಧ್ಯವಾಗದೆ ಇರಬಹುದು. ಯಾರಿಗೆ ಬ್ಯಾಂಕ್ ನಲ್ಲಿ ಸಾಲ ತೀರಿಸಲು ಸಾಧ್ಯವಾಗುವುದಿಲ್ಲವೋ ಅವರನ್ನು ಡೀಫಾಲ್ಟರ್ ಅಥವಾ ಸಾಲ ಸುಸ್ತಿದಾರ ಎಂದು ಘೋಷಿಸಲಾಗುತ್ತದೆ.

ಒಂದು ವೇಳೆ ಸಾಲ ತೀರಿಸಿದೆ ಇರುವವರನ್ನು ಡೀಫಾಲ್ಟರ್ ಎಂದು ಘೋಷಿಸಿದ ನಂತರ ಅವರ ಖಾತೆಯನ್ನು ಮೋಸದ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಮಾನ ಒಂದನ್ನು ನೀಡಿದ್ದು, ಬ್ಯಾಂಕ್ ಸಾಲ (Bank Loan) ತೀರಿಸದೆ ಇರುವವರ ಖಾತೆಯನ್ನು ವಂಚನೆ ಅಥವಾ ಮೋಸದ ಖಾತೆ ಎಂದು ಪರಿಗಣಿಸುವುದಕ್ಕೂ ಮೊದಲು ಸಾಲಗಾರರ ದೃಷ್ಟಿಕೋನದಲ್ಲಿ ವಿಚಾರ ಮಾಡಬೇಕು ಎಂದು ತಿಳಿಸಿದೆ.

ಸಾಲ ಸುಸ್ತಿದಾರರಿಗೆ ಸಿಗಲಿದೆ ರಕ್ಷಣೆ!

 

 

ತೆಲಂಗಾಣ ಹೈಕೋರ್ಟ್ (High Court) ತೀರ್ಪನ್ನು, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಎಲ್ಲಾ ಸಂದರ್ಭದಲ್ಲಿಯೂ ಸಾಲಗಾರರ ಮಾತುಗಳನ್ನು ಕೂಡ ಕೇಳಿಸಿಕೊಳ್ಳುವುದು ಮುಖ್ಯ ಎಂಬುದನ್ನು ತಿಳಿಸಿದೆ.

ಖಾತೆದಾರರನ್ನು ಕೇಳದೆ ಅವರ ಖಾತೆಯನ್ನು ವಂಚನೆ ಎಂದು ಘೋಷಿಸಿದ್ರೆ, ಅದರಿಂದ ಸಾಲಗಾರರ ಕ್ರೆಡಿಟ್ ಸ್ಕೋರ್ (Credit Score) ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ನ್ಯಾಯೋಚಿತವಾಗಿ ಅವರ ಬಗ್ಗೆಯೂ ಕೂಡ ಕೇಳುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ನೀಡಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂಕೋರ್ಟ್ ಈ ತೀರ್ಮಾನವನ್ನು ತಿಳಿಸಿದೆ. ನ್ಯಾಯಯುತವಾಗಿ, ತರ್ಕಬದ್ಧವಾಗಿ ಸಾಲಗಾರನ ಖಾತೆಯನ್ನು ವಂಚನೆ ಖಾತೆ ಹೌದೋ ಅಲ್ಲವೋ ಎನ್ನುವುದನ್ನು ನಿರ್ಧಾರ ಮಾಡಿ ವರ್ಗೀಕರಿಸಬೇಕು ಎಂದು ಒತ್ತಿ ಹೇಳಿದೆ. Audi Alteram Partem ತತ್ವವನ್ನು ಗಮನದಲ್ಲಿ ಇಟ್ಟುಕೊಂಡು ನ್ಯಾಯಯುತವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

CIBIL Score ಬಗ್ಗೆ ಹೈಕೋರ್ಟ್ ತೀರ್ಪು!

 

 

ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ (Credit Score) ಕಡಿಮೆ ಇದೆ ಎನ್ನುವ ಕಾರಣಕ್ಕೆ ಅವರ ಸಾಲದ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ ಅದರಲ್ಲೂ ವಿಶೇಷವಾಗಿ SBI ಗೆ ಎಚ್ಚರಿಕೆಯ ರೀತಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.

ದೇಶದಲ್ಲಿ ಹೆಚ್ಚುತ್ತಿದೆ ವೈಯಕ್ತಿಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ!

2022 – 23ನೇ ಸಾಲಿನ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 43% ನಷ್ಟು ಸಾಲಗಾರರು 18ರಿಂದ 45 ವರ್ಷದ ವಯಸ್ಸಿನವರಾಗಿದ್ದು, ಹೆಚ್ಚಾಗಿ ವೈಯಕ್ತಿಕ ಸಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಸಾಲಗಾರರಿಗೆ ರಕ್ಷಣೆ ನೀಡುವ ಸಲುವಾಗಿ ಈ ಮಹತ್ವದ ಆದೇಶವನ್ನು ಹೊರಡಿಸಿದ್ದು, ಸಾಲಗಾರರ ಮಾತುಗಳನ್ನು ಕೇಳಿಸಿಕೊಳ್ಳದೆ ಅವರ ದೃಷ್ಟಿಕೋನವನ್ನು ಆಲಿಸದೆ ಅವರನ್ನು ಡಿಫಾಲ್ಟರ್ ಎಂದು ಘೋಷಣೆ ಮಾಡುವಂತಿಲ್ಲ ಎಂದು ತಿಳಿಸಿದೆ. ಈ ಮೂಲಕ ಕೋರ್ಟ್, ಬ್ಯಾಂಕ್ ಗಳು ತಮ್ಮ ಗ್ರಾಹಕರು ಸಾಲ ತೀರಿಸಲು ಇದ್ದಾಗ ಅವರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದೆ.

advertisement

Leave A Reply

Your email address will not be published.