Karnataka Times
Trending Stories, Viral News, Gossips & Everything in Kannada

KSRTC: ಹಣವಿಲ್ಲದಿದ್ದರೂ ಇನ್ಮುಂದೆ KSRTC ಬಸ್ ಗಳಲ್ಲಿ ಪ್ರಯಾಣಿಸಬಹುದು, ಹೊಸ ಅಪ್ಡೇಟ್!

advertisement

ಈಗಾಗಲೇ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಹೊಸ ಸೌಲಭ್ಯವೊಂದನ್ನು ಒದಗಿಸಿದೆ. ಜನವರಿ 15 ರಿಂದ ಈ ಹೊಸ ಸೌಲಭ್ಯ ಜಾರಿಗೆ ಬರಲಿದೆ. ಜನವರಿ 15ರಿಂದ ಮೆಜೆಸ್ಟಿಕ್ ಮತ್ತು ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ ನಡುವಿನ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ಬೆಂಗಳೂರಿಗರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.ಇದರ ಬೆನ್ನಲ್ಲೇ KSRTC ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಅತಿ ಶೀಘ್ರದಲ್ಲಿ ಪ್ರಯಾಣಿಕರಿಗೆ ಹೊಸ ಸೌಲಭ್ಯವೊಂದು ದೊರೆಯಲಿದೆ. ಈ ಕುರಿತು ನಿಮಗೆಂದೇ ಮಾಹಿತಿ ಇಲ್ಲಿದೆ.

ಇಟಿಎಂ ಎಂದರೇನು?

KSRTC ಬಸ್ ಗಳಲ್ಲಿ ಟಿಕೆಟ್ ಪಡೆಯಲು ಎಟಿಎಂ ಮಾದರಿಯ ಇಟಿಎಂ ಮಷಿನ್ ಇರಲಿದೆ. ಅಲ್ಲದೇ ಯಪಿಐ, ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಟಿಕೆಟ್ ಖರೀದಿಸುವ ಅವಕಾಶ ಇದೆ.ಎಲ್ಲಿಂದ ಎಲ್ಲಿಗೆ ಎಂದು ಟಚ್ ಸ್ಕ್ರೀನ್ ಮೇಲೆ ನಮೂದಿಸಿ ಟಿಕೆಟ್ ಖರೀದಿಗೆ ಅವಕಾಶವಿದೆ. ಈಗಾಗಲೇ BMTCಯಲ್ಲಿ ಜಾರಿಯಾಗಿರೋ ಇಟಿಎಂ KSRTCಯಲ್ಲೂ ಜಾರಿಯಾಗಲಿದೆ. ಎಲ್ಲಾ KSRTC ಬಸ್‌ಗಳಲ್ಲಿ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಮೂಲಕ ಪಾವತಿಗಳನ್ನು ಮಾಡುವ ಸೌಲಭ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ವರದಿಯಾಗಿದೆ. ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರವು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಆಂಡ್ರಾಯ್ಡ್ ಆಧಾರಿತ ಸಾಧನವಾಗಿದೆ. ಈ ಯಂತ್ರವು ಟಿಕೆಟ್‌ಗಳನ್ನು ಮುದ್ರಿಸುತ್ತದೆ. 4G/Wi-Fi ಇಂಟರ್ಫೇಸ್ ಮೂಲಕ ಕೇಂದ್ರ ಸರ್ವರ್‌ಗೆ ನೈಜ-ಸಮಯದ ಟಿಕೆಟ್ ಡೇಟಾವನ್ನು ವರ್ಗಾಯಿಸುತ್ತದೆ.

advertisement

ಹೊಸ ಯೋಜನೆಯ ಕಾರ್ಯ ವೈಖರಿ

ಮೊದಲ ಹಂತದಲ್ಲಿ 10,500 ಇಟಿಎಂ ಖರೀದಿಗೆ KSRTC ಮುಂದಾಗಿದೆ. ಮೊದಲಿಗೆ 12 ನಗರಗಳಲ್ಲಿ ಇಟಿಎಂ ಅಳವಡಿಸಲು ತೀರ್ಮಾನ ಮಾಡಲಾಗಿದೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮಂಗಳೂರು, ದಾವಣಗೆರೆ, ಶಿವಮೊಗದಲ್ಲಿ ಇಟಿಎಂ ಅನುಷ್ಠಾನವಾಗಲಿದೆ. ಕಂಡಕ್ಟರ್ ಮೇಲಿನ ಹೊರೆ ತಗ್ಗುವ‌ ಜೊತೆಗೆ ಚಿಲ್ಲರೆ ಸಮಸ್ಯೆಯೂ ಪರಿಹಾರ ಆಗಲಿದೆ. KSRTC ಬಸ್ಸು ಎಲ್ಲಿ‌ ಬರ್ತಿವೆ, ಹೋಗ್ತಿವೆ ಮಾಹಿತಿಯೂ ಇಟಿಎಂನಲ್ಲಿ ಲಭ್ಯ ಇರಲಿದೆ. ಇಟಿಎಂಗೆ KSRTC ಬಸ್ಸುಗಳ ಜಿಪಿಆರ್ ಎಸ್ (GPRS) ಜಾಲ ಅಳವಡಿಸಿ ಬಸ್ಸುಗಳ ಮಾಹಿತಿ ಒದಗಿಸಲು ನಿರ್ಧಾರ ಮಾಡಲಾಗಿದೆ. ಇಟಿಎಂ ಖರೀದಿಗಾಗಿ ಟೆಂಡರ್ ಕರೆಯಲು KSRTC ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

advertisement

Leave A Reply

Your email address will not be published.