Karnataka Times
Trending Stories, Viral News, Gossips & Everything in Kannada

UPI: ಇನ್ಮುಂದೆ ಯುಪಿಐ ಪೇಮೆಂಟ್ ಗೂ ಶುಲ್ಕ ವಿಧಿಸಬೇಕು, ದಿನದ ಮಿತಿ ಎಷ್ಟು?

advertisement

ಇತ್ತಿಚಿನ ದಿನಗಳಲ್ಲಿ ಡಿಜಿಟಲ್ ಕ್ಷೇತ್ರ ಬಹಳಷ್ಟು ಪ್ರಗತಿಯಲ್ಲಿ ಸಾಗುತ್ತಿದೆ. ಜನರು ಈ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ಸಹ ನೀಡಿದ್ದಾರೆ. ಕೈಯಲ್ಲಿ ಮೊಬೈಲ್ ಒಂದು ಮೊಬೈಲ್ ಇದ್ದರೆ ಸಾಕು ಇದ್ದ ಸ್ಥಳದಿಂದಲೆ ನಿಮ್ಮ ಕೆಲಸ ಪೂರೈಸಬಹುದಾಗಿದೆ.ಇಂದು ಯುಪಿಐ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ವಿವಿಧ ಸೇವೆಗಳಿಗೆ ಶುಲ್ಕ ವಿಧಿಸಲು ಸಹ ಪ್ರಾರಂಭಿಸಿದೆ.

ಶುಲ್ಕ ಪಾವತಿ ಕಡ್ಡಾಯವಾಗಬಹುದು

ಇನ್ನೂ ಮೂರು ವರ್ಷಗಳಲ್ಲಿ ನೀವು ಯುಪಿಐಯಲ್ಲಿ ಹಣ ಕಳುಹಿಸುವುದಕ್ಕೆ, ಅಥವಾ ಹಣ ಪಡೆದುಕೊಳ್ಳುದಕ್ಕೆ ಶುಲ್ಕ ಕಟ್ಟಬೇಕಾಗದ ಅನಿವಾರ್ಯ ಉಂಟಾಗಬಹುದು ಎನ್ನಲಾಗಿದೆ. ಆದರೆ ಮೊದಲಿಗೆ ದೊಡ್ಡ ಮೊತ್ತದ ಹಣ ಪಾವತಿ ಮಾಡೋರಿಗೆ ಅಥವಾ ದೊಡ್ಡ ಮಟ್ಟದ ವ್ಯಾಪರಸ್ಥರಿಗೆ ಮೊದಲು ಶುಲ್ಕ ವಿಧಿಸಲಾಗುತ್ತದೆ.

ವಹಿವಾಟು ಹೆಚ್ಚಳ

ಇಂದು ಯುಪಿಐ (UPI) ವಹಿವಾಟುಗಳು ಹೆಚ್ಚಾಗಿದ್ದು ಸಣ್ಣ ಮೊತ್ತವಾದರೂ ಹೆಚ್ಚಿನ ಜನ ಈ ವಹಿವಾಟುಗಳಿಗೆ ಹೆಚ್ಚು ಅವಲಂಭಿತ ರಾಗಿದ್ದಾರೆ. ಮುಂದಿನ ದಿನದಲ್ಲಿ ಯುಪಿಐ ವ್ಯವಸ್ಥೆಗೆ ಹೆಚ್ಚು ಹೆಚ್ಚು ಜನರನ್ನು ಸೇರಿಸಬೇಕಾಗಿದ್ದು, ಇದಕ್ಕಾಗಿ ಕ್ಯಾಶ್‌ಬ್ಯಾಕ್ ಇನ್ಸೆಂಟಿವ್‌ಗಳನ್ನೂ ಸಲ್ಲಿಸಬೇಕಾಗುತ್ತದೆ.‌ ಇದೆಲ್ಲದಕ್ಕೂ ಹಣ ಬೇಕಿರುವುದರಿಂದ, ಶುಲ್ಕ ವಿಧಿಸುವ ಸಾಧ್ಯತೆಯಿದೆ.

advertisement

ವಂಚನೆ ಪ್ರಕರಣ ಹೆಚ್ಚಳ

ಇಂದು ಜಿಎಸ್‌ಟಿ ಅಂದರೆ ಸರಕು ಮತ್ತು ಸೇವೆ ತೆರಿಗೆ ಜಾರಿಯಾಗಿ ಕೆಲವು ವರ್ಷಗಳು ಕಳೆದರೂ ತೆರಿಗೆ ವಂಚನೆ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈಗಾಗಲೇ ಜಿಎಸ್‌ಟಿ ನಿರ್ವಾಹಕರು ತೆರಿಗೆ ವಂಚನೆ ಪತ್ತೆ ಮಾಡುವುದಕ್ಕೆ ವಿಶೇಷ ತನಿಖಾ ಅಭಿಯಾನವನ್ನು, ವಿಶೇಷ ತಂಡ ವನ್ನು ಆಯೋಜನೆ ಮಾಡಿದ್ದಾರೆ.

ಎಷ್ಟು ಶುಲ್ಕ ಮಿತಿ?

ಗ್ರಾಹಕರು ತಮ್ಮ ಬ್ಯಾಂಕು ಖಾತೆಯಿಂದ ಯುಪಿಐ ಮೂಲಕ ಯಾವುದೇ ವ್ಯಕ್ತಿಗೂ ಹಣವನ್ನು ನೇರವಾಗಿ ಪಾವತಿಸಬಹುದು. ಅದೇ ರೀತಿ ಬೇಕಾದ ಮೂಲಸೌಕರ್ಯಕ್ಕೆ ಹಣ ಒದಗಿಸಲು ಶೇ.0.3 ರಷ್ಟು ಡಿಜಿಟಲ್‌ ಪಾವತಿ ನಿರ್ವಹಣಾ ಶುಲ್ಕ ಇನ್ಮುಂದೆ ವಿಧಿಸಬಹುದು. ಒಟ್ಟಾರೆಯಾಗಿ ಮುಂದೆ UPI Payment ಮಾಡಲು ಗೂಗಲ್ ಪೇ ಬಳಸುವುದು ಶುಲ್ಕ ಕಟ್ಟುವುದು ನಷ್ಟ ಉಂಟು ಮಾಡಬಹುದು.

ದಿನದ ಮಿತಿ ಎಷ್ಟು?

ಎನ್ಪಿಸಿಐ ಮೂಲಕ ನೀವು ಒಂದು ದಿನಕ್ಕೆ ಯುಪಿಐ ಬಳಕೆ ಮಾಡುದಾದರೆ ಒಂದು ಲಕ್ಷ ರೂ. ವರೆಗೆ ವರ್ಗಾವಣೆ ಮಾಡಲು ಅವಕಾಶ ಇದೆ. ಬ್ಯಾಂಕ್ ನಿಂದ ಬ್ಯಾಂಕ್ ಗೆ ಕಳುಹಿಸುದಾದರೆ 25 ಸಾವಿರ ರೂ. ವರ್ಗಾವಣೆ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.