Karnataka Times
Trending Stories, Viral News, Gossips & Everything in Kannada

CNG Kit: ನೀವು ಬಳಸುವ ವಾಹನಕ್ಕೆ ಅಳವಡಿಸಿ ಸಿಎನ್ ಜಿ ಕಿಟ್; ಪ್ರತಿ ಕಿಲೋಮೀಟರ್ ಗೆ ಕೇವಲ 70 ಪೈಸೆ ಖರ್ಚು!

advertisement

ಪ್ರತಿದಿನ ವಾಹನ ಬಳಸುವವರಿಗೆ, ವಾಹನ ವೆಚ್ಚ ಹೆಚ್ಚಾಗುತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿದಿನ ವಾಹನ ಓಡಿಸುವುದು ಕಷ್ಟವಾಗುತ್ತಿದೆ. ಇದಕ್ಕೆಲ್ಲ ಪರಿಹಾರಾರ್ಥವಾಗಿ, ಪೆಟ್ರೋಲ್ ಹಾಗೂ ಡೀಸೆಲ್ ವಾಹನದ ಬದಲಿಗೆ ಸಿ ಎನ್ ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದೆ. ಆದರೆ ನಮ್ಮ ಬಳಿ ಈಗಾಗಲೇ ವಾಹನ ಇದೆ, ಹೊಸ ವಾಹನ ಖರೀದಿಸಲು ಸಾಧ್ಯವಿಲ್ಲ ಆದರೆ ವೆಚ್ಚವನ್ನು ಕೂಡ ಕಡಿಮೆ ಮಾಡಿಕೊಳ್ಳಬೇಕು. ಹೇಗೆ ಎಂದು ನೀವು ತಲೆಕೆಡಿಸಿಕೊಂಡಿದ್ದರೆ ಅದಕ್ಕೆ ಇಲ್ಲಿದೆ ಒಂದು ಸಿಂಪಲ್ ಉಪಾಯ!

ಇರುವ ವಾಹನಕ್ಕೆ ಸಿ ಎನ್ ಜಿ ಕಿಟ್ ಅಳವಡಿಸಿ! (CNG Kit)

ಇಂದಿನ ದುಬಾರಿ ದುನಿಯಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಇದನ್ನು ಪೂರೈಸಲು ಗ್ರಾಹಕರಿಗೆ ಕಷ್ಟವಾಗುತ್ತಿದೆ. ಇದಕ್ಕಾಗಿ ಒಂದು ಬೆಸ್ಟ್ ಪ್ಲಾನ್  ಅಂದ್ರೆ ನೀವು ಬಳಸುತ್ತಿರುವ ದ್ವಿಚಕ್ರ ವಾಹನಕ್ಕೂ ಕೂಡ ಸಿ ಎನ್ ಜಿ (CNG)ಕಿಟ್ ಅಳವಡಿಸಬಹುದಾಗಿದೆ. ಇದರಿಂದ ಅತಿ ಕಡಿಮೆ ಬೆಲೆಗೆ ನೀವು ಪ್ರತಿದಿನ ವಾಹನ ಓಡಿಸಬಹುದು.

ಒಂದು ಲೀಟರ್ ಪೆಟ್ರೋಲ್ ನಲ್ಲಿ 50 ರಿಂದ 60 ಕಿಲೋಮೀಟರ್ ವರೆಗೆ ಮಾತ್ರ ಈಗ ಸ್ಕೂಟರ್ ನಲ್ಲಿ ಓಡಿಸಬಹುದು. ಇದರಿಂದ ಖರ್ಚು ಕೂಡ ಹೆಚ್ಚು. ಆದರೆ ನೀವು ಇದೇ ಸ್ಕೂಟರ್ ಗೆ ಸಿಎನ್ ಜಿ ಕಿಟ್ ಅಳವಡಿಸಿಕೊಂಡರೆ, ಒಂದು ಕಿಲೋಮೀಟರ್ ಗೆ ಕೇವಲ 70 ಪೈಸೆ ವೆಚ್ಚ ಭರಿಸಿದರೆ ಸಾಕು.

advertisement

ಸ್ಕೂಟರ್ ನಲ್ಲಿ ಸಿ ಎನ್ ಜಿ ಕಿಟ್ ಅಳವಡಿಸುವುದು ಹೇಗೆ?

ನಿಮ್ಮ ದೈನಂದಿನ ವಾಹನದ ಖರ್ಚನ್ನು ಕಡಿಮೆ ಮಾಡಲು, ಹೋಂಡಾ ಆಕ್ಟಿವಾ, ಹೀರೋ, ಟಿವಿಎಸ್, ಸುಜುಕಿ ಸ್ಕೂಟರ್ ಗಳಲ್ಲಿ ಸುಲಭವಾಗಿ ಸಿ ಎನ್ ಜಿ ಕಿಟ್ ಅಳವಡಿಸಬಹುದು.

ಸಿ ಎನ್ ಜಿ ಕಿಟ್ ಅಳವಡಿಸಲು ಎಷ್ಟು ಖರ್ಚಾಗುತ್ತೆ?

ನೀವು ನಿಮ್ಮ ಸ್ಕೂಟರ್ ನಲ್ಲಿ ಸಿ ಎನ್ ಜಿ ಕಿಟ್ ಅಳವಡಿಸುವುದಾದರೆ ಕನಿಷ್ಠ ರೂ.18,000 ಬೇಕು. ಸಿ ಎನ್ ಜಿ ಕಿಟ್ ಅಳವಡಿಸಿದ ಕಂಪನಿ ಒಂದು ವರ್ಷದ ಪರಿಹಾರವನ್ನು ಕೂಡ ಕೊಡುತ್ತದೆ. ಪ್ರಸ್ತುತ ಅವಧಿಯಲ್ಲಿ ಸಿ ಎನ್ ಜಿ ಹಾಗೂ ಪೆಟ್ರೋಲ್ ನಡುವಿನ ವೆಚ್ಚದ ಅಂತರ 40 ರಿಂದ 45 ರೂಪಾಯಿಗಳು. ನೀವು ಒಂದು ಕಿಲೋಮೀಟರ್ ಅನ್ನು ಸಿ ಎನ್ ಜಿ ಮೂಲಕ ಪ್ರಯಾಣ ಮಾಡಿದರೆ ಕೇವಲ 70 ಪೈಸೆ ವೆಚ್ಚವಾಗುತ್ತದೆ ಎಂದು ಮಾಹಿತಿ ಇದೆ. ಹೀಗಾಗಿ ನೀವು ಸೂಕ್ತ ಕಂಪನಿಯ ಸಿ ಎನ್ ಜಿ ಕಿಟ್ ಅಳವಡಿಕೆ ಮಾಡಿ ತಿಂಗಳ ಖರ್ಚಿನಲ್ಲಿ ಭಾರಿ ದೊಡ್ಡ ಮೊತ್ತದ ಉಳಿತಾಯವನ್ನೇ ಮಾಡಬಹುದು.

advertisement

Leave A Reply

Your email address will not be published.