Karnataka Times
Trending Stories, Viral News, Gossips & Everything in Kannada

PM Kisan: ರೈತರಿಗೆ ಮಾತ್ರವಲ್ಲ ರೈತ ಮಹಿಳೆಯರಿಗೂ ಕೂಡ ಗುಡ್‌ ನ್ಯೂಸ್‌, ಸಿಗಲಿದೆ 12,000ರೂ. ಹಣ!

advertisement

ಕೇಂದ್ರ ಸರ್ಕಾರದಿಂದ ರೈತರಿಗೆ ಮಾತ್ರವಲ್ಲ ರೈತ ಮಹಿಳೆಯರಿಗೆ ಕೂಡ ಸುವರ್ಣಾವಾಕಾಶ ನೀಡುತ್ತಿದೆ. ಹಾಗಾಗಿ ಮಹಿಳೆಯರಿಗೆ ಇನ್ಮುಂದೆ ಡಬಲ್‌ ಲಾಭ ಸಿಗೋದ್ರಲ್ಲಿ ಡೌಟೇ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಗೊತ್ತೇ ಇದೆ. ಕೇಂದ್ರವು ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ (PM Kisan) ಯೋಜನೆ ಯೋಜನೆಯು ಜನಪ್ರಿಯವಾಗಿದೆ. ಈ ಯೋಜನೆಯಡಿ ಅರ್ಹ ರೈತರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ.

ಪ್ರಧಾನಮಂತ್ರಿ ಕಿಸಾನ್ ಯೋಜನೆ ಆರಂಭವಾದದ್ದು

ಕೇಂದ್ರ ಸರ್ಕಾರವು 2019 ರ ಫೆಬ್ರವರಿ ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಭಾಗವಾಗಿ ರೈತರಿಗೆ ವಾರ್ಷಿಕ 6000 ರೂ ಬೆಳೆ ಸಹಾಯವನ್ನು ನೀಡಲಾಗುತ್ತಿದೆ. ಈ ನೆರವನ್ನು ಮೂರು ಕಂತುಗಳಲ್ಲಿ ಪಡೆಯಲಾಗುತ್ತಿದೆ. ಪ್ರತಿ ಕಂತಿನಲ್ಲಿ 2 ಸಾವಿರ ರೂಪಾಯಿಯಂತೆ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಆದರೆ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತರ ಹಿತಕ್ಕೆ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಪ್ರಧಾನಿ ಕಿಸಾನ್ (PM Kisan) ನೆರವನ್ನು ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಆದ ಬದಲಾವಣೆ

advertisement

ದೇಶಾದ್ಯಂತ 11 ಕೋಟಿ ರೈತರಿಗೆ ವರ್ಷಕ್ಕೆ ರೂ.6 ಸಾವಿರ ನೀಡುತ್ತಿರುವ ಕೇಂದ್ರ ಸರ್ಕಾರ.. ಈಗ ಆ ಮೊತ್ತವನ್ನು ರೂ.10 ಸಾವಿರದಿಂದ 12 ಸಾವಿರಕ್ಕೆ ನೀಡಲು ಮುಂದಾಗಿದೆ. ಆದರೆ ಈ ದುಪ್ಪಟ್ಟು ರೈತ ಮಹಿಳೆಯರಿಗೆ ಮಾತ್ರ ಸಿಗಲು ಸಿದ್ಧತೆ ನಡೆಸಲಾಗುತ್ತಿದೆ.ಉಳಿದ ರೈತರಿಗೆ ನೀಡುತ್ತಿರುವ 6 ಸಾವಿರ ರೂ.ಗಳ ಸಹಾಯಧನವನ್ನು 8 ಸಾವಿರ ರೂ.ಗೆ ಏರಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ 1ರಂದು ಮಂಡಿಸಲಿರುವ ಮಧ್ಯಂತರ ಬಜೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಈಗಾಗಲೇ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಕೇಂದ್ರದಿಂದ ಈ ಆರ್ಥಿಕ ನೆರವು ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್ 15 ನೇ ಕಂತಿನ ಹಣವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈಗ ರೈತರೆಲ್ಲರೂ ಪಿಎಂ ಕಿಸಾನ್ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ಕ್ರಮದಲ್ಲಿ ಈ 16ನೇ ಕಂತಿನ ಹಣ ಹಂಚಿಕೆ ಕುರಿತು ಹಲವು ಮಹತ್ವದ ಮಾಹಿತಿಗಳು ಹರಿದಾಡುತ್ತಿವೆ. ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ಈ ಹಣ ರವಾನೆಯಾಗುವ ಸಾಧ್ಯತೆ ಇದೆ.

ಈ ಯೋಜನೆಯ ಪಲಾನುಭವಿಗಳಾಗಲು ಹೀಗೇ ಮಾಡಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಕೆಲವು ಕೆಲಸಗಳನ್ನು ಮಾಡಬೇಕು. ಪ್ರತಿಯೊಬ್ಬ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಇ-ಕೆವೈಸಿ ಪೂರ್ಣಗೊಳಿಸಿದ ರೈತರಿಗೆ ಮಾತ್ರ ಲಭ್ಯವಿದೆ.ಆದ್ದರಿಂದ ಪ್ರತಿಯೊಬ್ಬ ರೈತರು ಫೆಬ್ರವರಿಯೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು. ನಿಮ್ಮ ಇ-ಕೆವೈಸಿಯನ್ನು ನೀವು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು. ಅಂತೆಯೇ, ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಸಹ ಮುಖ್ಯವಾಗಿದೆ ಎಂದು ಕೇಂದ್ರ ಹೇಳುತ್ತದೆ. ಇದನ್ನು ಮಾಡಿದವರಿಗೆ ಮಾತ್ರ ಅವರ ಖಾತೆಗೆ ಹಣ ಬರುತ್ತದೆ

advertisement

Leave A Reply

Your email address will not be published.