Karnataka Times
Trending Stories, Viral News, Gossips & Everything in Kannada

Toyota Rumion: ಎರ್ಟಿಗಾ ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ 7 ಸೀಟರ್ ಕಾರು, 26Km ಮೈಲೇಜ್!

advertisement

ಇಂದು ಯುವಕರಿಗೆ ಕಾರು ಖರೀದಿ ಮಾಡುವ ಕ್ರೇಜ್ ಜೋರು.ಅದರಲ್ಲೂ ಹೊಸ ಫೀಚರ್ಸ್ ನ ಕಾರು ಮಾರುಕಟ್ಟೆ ಗೆ ಬಂತು ಎಂದಾಗ ಯುವಕರಂತು ತುದಿಕಾಲಲ್ಲಿ ನಿಂತಿರುತ್ತಾರೆ. ಇಂದು ಕಾರು ಉತ್ಪನ್ನ ಮಾಡುವ ಪ್ರಮಾಣವು ಹೆಚ್ಚಾಗಿದ್ದು ಮಾರುಕಟ್ಟೆಗೂ ನಾನಾ ರೀತಿಯ ಮಾಡೆಲ್ ನ ವಾಹನಗಳು ಜನರನ್ನು ಆಕರ್ಷಣೆ ಮಾಡ್ತಾ ಇದೆ. ಇಂದು ಹಬ್ಬದ ಸೀಸನ್‌ನಲ್ಲಿ ಎಲ್ಲಾ ರೀತಿಯ ಕಾರಿನ ಮಾಡೆಲ್‌ಗಳ ಮೇಲೆ ಉತ್ತಮ ರಿಯಾಯಿತಿಗಳು, ಕಡಿಮೆ ದರ ಮತ್ತು ಆಫರ್‌ಗಳು ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಕಾರು ಖರೀದಿ ಮಾಡಲು ಉತ್ತಮ ಅವಕಾಶ ಎನ್ನಬಹುದು.

ಇದೀಗ ಹೊಸ ಟೊಯೋಟಾ ರೂಮಿಯನ್‌ (Toyota Rumion)ನ ಪ್ರೀಮಿಯಂ ವಾಹನ ಪ್ರೀಯರನ್ನು ಆಕರ್ಷಣೆ ಮಾಡಿದೆ. ಈ ಕಾರಿನ ಆಧುನಿಕ ವಿನ್ಯಾಸ, ವೈಶಿಷ್ಟ್ಯ, ಉತ್ತಮ ಗುಣಮಟ್ಟ ಎಲ್ಲವು ಹೊಂದಿಕೊಳ್ಳುವಂತೆ ಇದೆ.

advertisement

ಹೇಗಿದೆ ವೈಶಿಷ್ಟ್ಯ

  • ಈ ಕಾರು ಸಾಲಿಡ್ ವೈಟ್, ಮೆಟಾಲಿಕ್ ಬ್ಲೂ, ಮೆಟಾಲಿಕ್ ಗ್ರೇ ಮತ್ತು ಪರ್ಲ್ ವೈಟ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು ಆಕರ್ಷಣೆಯ ನೋಟ ಹೊಂದಿದೆ
  • ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಇರಲಿದೆ
  • ಅದೇ ರೀತಿ ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಕರ್ಟನ್ ಏರ್‌ಬ್ಯಾಗ್‌ ಇತ್ಯಾದಿ ಯನ್ನು ಸಹ ಒಳಗೊಂಡಿವೆ.
  • ಹೊಸ 7-ಸ್ಪೋಕ್ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಪಡೆಯುತ್ತವೆ,
  • ಈ ಕಾರಿನ ಇಂಜಿನ್ ಅನ್ನು ಸ್ಮಾರ್ಟ್‌ಫೋನ್‌ನಿಂದಲೂ ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು.
  •  ಅದೇ ರೀತಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕ ಇರಲಿದೆ
  • 103 BHP ಮತ್ತು 137 ಟಾರ್ಕ್ ಅನ್ನು ಉತ್ಪಾದಿಸುವ ಜೊತೆಗೆ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
  •  ಪ್ರತಿ ಕಿಲೋಗ್ರಾಂಗೆ 26.11 ಕಿಲೋಮೀಟರ್‌ಗಳ ಪ್ರಭಾವಶಾಲಿ ಮೈಲೇಜ್ ಅನ್ನು ನೀಡುತ್ತದೆ,

ಬೆಲೆ ಹೇಗಿದೆ?

ಈ ಟೊಯೊಟಾ ರೂಮಿಯಾನ್ ಆಧುನಿಕ ವಿನ್ಯಾಸ ವನ್ನು ಹೊಂದಿದ್ದು ಪೆಟ್ರೋಲ್ ಮ್ಯಾನುವಲ್ ಮಾಡೆಲ್ 10.29 ಲಕ್ಷ ರೂಪಾಯಿ ಇರಲಿದ್ದು, ಸಿಎನ್‌ಜಿ ರೂಪಾಂತರಕ್ಕೆ 11.24 ಲಕ್ಷ ರೂಪಾಯಿ ಯಾಗಿದೆ.

advertisement

Leave A Reply

Your email address will not be published.