Karnataka Times
Trending Stories, Viral News, Gossips & Everything in Kannada

Post Office: ಅಂಚೆ ಇಲಾಖೆಯ ಬಂಪರ್ ಆಫರ್; ಕೇವಲ 170 ಉಳಿಸಿ, 5 ಲಕ್ಷ ಆದಾಯ ಗಳಿಸಿ!

advertisement

ಅಂಚೆ ಕಚೇರಿ (Post Office) ಈಗ ಗ್ರಾಹಕರಿಗೆ ನೀಡುವ ಸೇವೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಅದರಲ್ಲೂ ಮುಖ್ಯವಾಗಿ ಉಳಿತಾಯ ಯೋಜನೆ (Savings Scheme) ಗಳನ್ನು ಆರಂಭಿಸಲಾಗಿದ್ದು ಗ್ರಾಹಕರು ಬೇರೆ ಕಡೆ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ.

ಅಂಚೆ ಕಚೇರಿ ಸರ್ಕಾರಿ ಬೆಂಬಲಿತ ಸಂಸ್ಥೆ ಆಗಿದ್ದು ಇದರಲ್ಲಿ ಹೂಡಿಕೆ ಮಾಡಿದರೆ ಖಾತರಿ ಬೆನಿಫಿಟ್ ಸಿಗುತ್ತದೆ. ಯಾವುದೇ ಮಾರುಕಟ್ಟೆ ಅಪಾಯವು ಇಲ್ಲದೆ ನೀವು ಅತ್ಯುತ್ತಮವಾಗಿ ಆದಾಯ ಗಳಿಸಬಹುದು. ಉಳಿತಾಯ ಮಾಡಲು ಅಂಚೆ ಕಚೇರಿಯ ಯೋಜನೆಗಳು ಅತ್ಯುತ್ತಮ ಎಂದು ಹೇಳಬಹುದು.

ಮರುಕಳಿಸುವ ಠೇವಣಿ ಹೂಡಿಕೆ (RD Investment):

 

 

advertisement

ಮೋದಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಅಂಚೆ ಕಚೇರಿ (Post Office) ಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಸೌಲತ್ತನ್ನು ಒದಗಿಸಿ ಕೊಡುತ್ತಿದೆ. ಹಾಗಾಗಿ ಉತ್ತಮ ಆದಾಯ ಪಡೆದುಕೊಳ್ಳಬಹುದು. ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಹೂಡಿಕೆ ಮಾಡಿದರೆ 6.7% ವರೆಗೆ ಬಡ್ಡಿ ಪಡೆಯಬಹುದು. ಠೇವಣಿಯ ಮೇಲೆ ಸಾಲ ಸೌಲಭ್ಯವು ಕೂಡ ಸಿಗುತ್ತದೆ.

ಮರುಕಳಿಸುವ ಠೇವಣಿಯ ಮೇಲೆ ಸಾಲ ಸೌಲಭ್ಯ:

ನೀವು ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ (RD Account) ಯನ್ನು ಆರಂಭಿಸಿದರೆ ಹೂಡಿಕೆ ಮಾಡಿದ 12 ಕಂತುಗಳ ನಂತರ ಹೂಡಿಕೆಯ ಹಣದ 50% ನಷ್ಟು ಸಾಲ ಪಡೆಯಬಹುದು. ಅಂಚೆ ಕಚೇರಿಯ ಮರುಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು. ಹೇಗೆ ಎಂಬುದನ್ನು ನೋಡೋಣ.

ಒಂದು ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಪ್ರತಿ ತಿಂಗಳು 5,000 ರೂಪಾಯಿಗಳಂತೆ 5 ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ. ಆಗ ಯೋಜನೆಗೆ ಒಟ್ಟು ಮೂರು ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುತ್ತೀರಿ. 6.70% ಬಡ್ಡಿ ದರದಲ್ಲಿ, 56,830ರೂ.ಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅಲ್ಲಿಗೆ ಆರ್ ಡಿ ಠೇವಣಿಯ 5 ವರ್ಷಗಳ ನಂತರ 5,56,830 ರೂಪಾಯಿಗಳನ್ನು ಹಿಂಪಡೆಯಬಹುದು.

ಹಾಗಾಗಿ ಯಾರು ಬೇಕಾದರೂ ಹೂಡಿಕೆ ಮಾಡಬಹುದಾದ ಮರುಕಳಿಸುವ ಠೇವಣಿಯಲ್ಲಿ ನೀವು ಹೂಡಿಕೆ ಮಾಡಿದರೆ, ಯಾವುದೇ ಮಾರುಕಟ್ಟೆಯ ಅಪಾಯವು ಇಲ್ಲದೆ ಸುಲಭವಾಗಿ 5 ಲಕ್ಷ ಗಳಿಗಿಂತ ಹೆಚ್ಚಿನ ಹಣವನ್ನು ಅತಿ ಕಡಿಮೆ ಅವಧಿಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

advertisement

Leave A Reply

Your email address will not be published.