Karnataka Times
Trending Stories, Viral News, Gossips & Everything in Kannada

LPG Cylinder Price: ತಿಂಗಳ ಮೊದಲ ದಿನವೇ ಏರಿಕೆ ಕಂಡ ಸಿಲಿಂಡರ್ ಬೆಲೆ!

advertisement

ಇಂದು ಪ್ರತಿಯೊಂದು ವ್ಯಕ್ತಿ ಗೂ ಮೂಲಭೂತ ಅವಶ್ಯಕ ವಸ್ತುಗಳ ಕೊರತೆ ಯಾಗಬಾರದು. ಅದರಲ್ಲೂ ಹೆಚ್ಚುತ್ತಿರುವ ಬೆಲೆ ಏರಿಕೆ ಇಂದಾಗಿ ಬಡ ವರ್ಗದ ಜನತೆಗೆ ಬೇಸಿಕ್ ವಸ್ತುಗಳನ್ನೇ ಖರೀದಿ ಮಾಡಲು ಕಷ್ಟ ಸಾಧ್ಯ. ತರಕಾರಿ, ಹಾಲು, ಪೆಟ್ರೋಲ್, ಡಿಸೇಲ್ ಇತ್ಯಾದಿ ಗಳ ಬೆಲೆ ಅಧಿಕವಾಗಿಯೇ ಇದ್ದು ಇದೀಗ ಗ್ಯಾಸ್ ಬೆಲೆಯು ಹೆಚ್ಚಳವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇಂದು ಪ್ರತಿಯೊಂದು ಮನೆಯಲ್ಲೂ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಅಗತ್ಯವಾಗಿ ಬೇಕಿದ್ದು ಸುಲಭವಾಗಿ ಆಹಾರ ತಯಾರು ಸಹ ಮಾಡಬಹುದು. ಆದ್ರೆ ಬೆಲೆ ಏರಿಕೆ ಯಿಂದಾಗಿ ಖರೀದಿ ಮಾಡಲು ಕಷ್ಟವೆ ಸಹಿ.

ಗ್ರಾಹಕರಿಗೆ ಶಾಕ್:

 

 

ಇದೀಗ ಎಲ್‌ ಪಿಜಿ ವಾಣಿಜ್ಯ ಸಿಲಿಂಡರ್‌ (LPG Commercial Cylinder) ಗಳ ಬೆಲೆಯಲ್ಲಿ 25.50 ರೂ. ಹೆಚ್ಚಳವಾಗಿದ್ದು ಇದು ಸಾಮಾನ್ಯ ವರ್ಗದ ಜನತೆಗೆ ಶಾಕಿಂಗ್ ವಿಚಾರವೇ ಸರಿ. ಯಾಕಂದ್ರೆ ಇನ್ನೇನೂ‌ ಲೋಕಸಭಾ ಚುನಾವಣೆ ಬರಲಿದ್ದು ಬೆಲೆ ಕಡಿಮೆ ಯಾಗಲಿದೆ ಎಂದು ಕಾಯ್ತಾ ಇದ್ದ ಗ್ರಾಹಕರಿಗೆ ಇದು ಶಾಕ್ ಕೊಟ್ಟಿದೆ. ಹೌದು ತೈಲ ಮಾರುಕಟ್ಟೆ ಕಂಪನಿಗಳು ಎಲ್‌ ಪಿಜಿ ಸಿಲಿಂಡರ್‌ ದರ (LPG Cylinder Price) ಗಳನ್ನು ಘೋಷಿಸಿದ್ದು, ಬೆಲೆ ಹೆಚ್ಚಳ ಮಾಡಿದೆ

advertisement

ವಿವಿಧ ನಗರದಲ್ಲಿ ಎಷ್ಟು?

ದೆಹಲಿ ಮತ್ತು ಮುಂಬೈನಲ್ಲಿ ಎಲ್ಪಿಜಿ ಸಿಲಿಂಡರ್ ನ ಬೆಲೆ (LPG Cylinder Price) 25.50 ರೂ. ಆಗಿದ್ದು 19 ಕೆಜಿ ಸಿಲಿಂಡರ್ ಬೆಲೆ ಈಗ 1723.50 ರೂ.ನಿಂದ 1749 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ 24 ರೂ., ಚೆನ್ನೈನಲ್ಲಿ 23.50 ರೂ. ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ 1887 ರೂ. ನಿಂದ 1911 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 25.50 ರೂ. ಏರಿಕೆಯಾಗಿದೆ. ಅಂದರೆ, 1,769.50 ರೂ.ನಿಂದ 1,795 ರೂ.ಗೆ ಏರಿಕೆಯಾಗಿದೆ.

ಗೃಹ ಬಳಕೆ ಗ್ಯಾಸ್ ಬೆಲೆ?

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ (LPG Cylinder Price) ಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಕಳೆದ ತಿಂಗಳು ಅಂದರೆ, ಫೆಬ್ರವರಿ 1 ರಂದು ಕಮರ್ಷಿಯಲ್‌ ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ 14 ರೂ. ಹೆಚ್ಚಳ ಮಾಡಲಾಗಿತ್ತು. ಈಗ ದೇಶೀಯ ಎಲ್‌ಪಿಜಿ ಸಿಲಿಂಡರ್ ದೆಹಲಿಯಲ್ಲಿ 903 ರೂ , ಮುಂಬೈನಲ್ಲಿ 902.50 ರೂ., ಕೋಲ್ಕತ್ತಾದಲ್ಲಿ 929 ರೂ. ಮತ್ತು ಚೆನ್ನೈನಲ್ಲಿ 918.50 ರೂ ಇದೆ.

advertisement

Leave A Reply

Your email address will not be published.