Karnataka Times
Trending Stories, Viral News, Gossips & Everything in Kannada

HDFC Bank: HDFC ಬ್ಯಾಂಕ್ ನಲ್ಲಿ ತಿಂಗಳಿಗೆ 3600 ರೂ ಕಟ್ಟಿದರೆ ಎಷ್ಟು ರಿಟರ್ನ್ಸ್ ಸಿಗಲಿದೆ ಗೊತ್ತಾ?

advertisement

ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಕೂಡ ಒಂದು. ಈಗಾಗಲೇ ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ ಈ ಬ್ಯಾಂಕ್ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಉಳಿತಾಯ ಯೋಜನೆಗಳನ್ನು ಕೂಡ ಪರಿಚಯಿಸಿದೆ. ಅಷ್ಟೇ ಅಲ್ಲದೆ ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank ) ನಲ್ಲಿ ಸ್ಥಿರ ಠೇವಣಿ (Fixed Deposit) ಅಥವಾ ಆರ್ ಡಿ (Recurring Deposit) ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ ದರವನ್ನು ಕೂಡ ನೀಡಲಾಗುತ್ತದೆ. ಜೊತೆಗೆ ಹಿರಿಯ ನಾಗರಿಕರ ಎಫ್‌ಡಿ ಠೇವಣಿಯ ಮೇಲೆ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ.

ನಾವು ಇಂದಿನ ಲೇಖನದಲ್ಲಿ HDFC Bank ಆರ್ ಡಿ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ. ನೀವು ಪ್ರತಿ ತಿಂಗಳು 3,600 ಗಳನ್ನು ಮುಂದಿನ 36 ತಿಂಗಳವರೆಗೆ ಹೂಡಿಕೆ ಮಾಡಿದರೆ ನಿಮಗೆ ಸಿಗುವ ಲಾಭ ಎಷ್ಟು ಎಂಬುದನ್ನು ನೋಡೋಣ.

HDFC Bank ನ ಆರ್ ಡಿ ಯೋಜನೆ:

 

advertisement

 

HDFC Bank ನಲ್ಲಿ 36 ತಿಂಗಳುಗಳ ಕಾಲ ಅಂದರೆ ಮೂರು ವರ್ಷಗಳವರೆಗೆ ಸಾಮಾನ್ಯ ಗ್ರಾಹಕರು ಆರ್ ಡಿ ಖಾತೆಯನ್ನು ತೆರೆದರೆ ವಾರ್ಷಿಕವಾಗಿ 7% ನಷ್ಟು ಬಡ್ಡಿ ದರವನ್ನು ಪಡೆದುಕೊಳ್ಳಬಹುದು. ಇನ್ನು ಹಿರಿಯ ನಾಗರಿಕರು 36 ತಿಂಗಳ RD ಠೇವಣಿ ಆರಂಭಿಸಿದ್ರೆ ವಾರ್ಷಿಕವಾಗಿ 7.50% ನಷ್ಟು ಬಡ್ಡಿ ಸಿಗುತ್ತದೆ.

36,000 ಹೂಡಿಕೆಗೆ ಸಿಗುವ ರಿಟರ್ನ್ ಎಷ್ಟು:

  • ಈ ಮೇಲಿನ ಬಡ್ಡಿ ದರದ ಆಧಾರದ ಮೇಲೆ, ಸಾಮಾನ್ಯ ಗ್ರಾಹಕರು ಪ್ರತಿ ತಿಂಗಳು 3,600ಗಳನ್ನು ಮುಂದಿನ 36 ತಿಂಗಳವರೆಗೆ ಹೂಡಿಕೆ ಮಾಡಿದರೆ, ಯೋಜನೆ ಮುಗಿಯುವ ಹೊತ್ತಿಗೆ ಸಿಗುವ ಮೊತ್ತ 1,44,531 ರೂಪಾಯಿಗಳು.
  • ಅದೇ ರೀತಿ ಹಿರಿಯ ನಾಗರಿಕರು 36 ತಿಂಗಳವರೆಗೆ 3600 ಗಳನ್ನು ಪ್ರತಿ ತಿಂಗಳಿನಂತೆ RD ಹೂಡಿಕೆ ಮಾಡುತ್ತಾ ಬಂದರೆ, ಮೆಚುರಿಟಿ ಅವಧಿಯಲ್ಲಿ ಅವರಿಗೆ ಸಿಗುವ ಮೊತ್ತ 1,45,674 ರೂಪಾಯಿಗಳು.
  • ಆರ್ ಡಿ ಅಥವಾ ಮರುಕಳಿಸುವ ಠೇವಣಿ ಯೋಜನೆ ಸಣ್ಣ ಮೊತ್ತದ ಹೂಡಿಕೆ ಆಗಿದ್ದರು ಕೂಡ ಈ ಹೂಡಿಕೆಯಿಂದ ನೀವು ಅಲ್ಪ ಸಮಯದಲ್ಲಿ ಉತ್ತಮ ರಿಟರ್ನ್ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಅಂಚೆ ಕಚೇರಿ ಇರಬಹುದು ಅಥವಾ HDFC ಎಂತಹ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿಯೇ ಆಗಿರಬಹುದು, ಮರುಕಳಿಸುವ ಠೇವಣಿ ಹೂಡಿಕೆ ನಿಮಗೆ ಹೆಚ್ಚು ಆದಾಯವನ್ನು ತಂದುಕೊಡುತ್ತದೆ.

advertisement

Leave A Reply

Your email address will not be published.