Karnataka Times
Trending Stories, Viral News, Gossips & Everything in Kannada

Gas Subsidy: ಗ್ಯಾಸ್ ಸಬ್ಸಿಡಿಯ ಹೊಸ ಲಿಸ್ಟ್ ಬಿಡುಗಡೆ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

advertisement

ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಸೌಲಭ್ಯ ಗಳನ್ನು ಪರಿಚಯಿಸುತ್ತಲೇ ಬಂದಿದೆ.ಅದೇ ರೀತಿ ಮಹಿಳೆಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದು ಅದರಲ್ಲಿ ಉಚಿತವಾಗಿ ಒದಗಿಸುವ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಕೂಡ ಆಗಿದೆ.‌ ಹೆಚ್ಚಿನ‌ ಪ್ರದೇಶದಲ್ಲಿ ಇಂದು ಕೂಡ ಮಹಿಳೆಯರು ಕಟ್ಟಿಗೆ, ಇದ್ದಿಲು ಬಳಸಿಯೇ ಅಡುಗೆ ತಯಾರಿ ಮಾಡುತ್ತಿದ್ದು ಮಹಿಳೆಯರಿಗೆ ಇದು ಕಷ್ಟವೇ ಆಗಿದ್ದು ಹೀಗಾಗಿ ಪ್ರಧಾನ ಮಂತ್ರಿ ಉಜ್ವಲಯೋಜನೆ (PM Ujjwala Yojana) ಯನ್ನು‌ ಕೇಂದ್ರ ಸರಕಾರವು ಜಾರಿಗೆ ತಂದಿದೆ.

PM Ujjwala Yojana:

 

Image Source: Aaj Tak

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಕೇಂದ್ರ ಜಾರಿಗೆ ತಂದಿದ್ದು ಲಕ್ಷಾಂತರ ಮಹಿಳೆಯರು ಉಚಿತ ಗ್ಯಾಸ್ ಕನೆಕ್ಷನ್ ಅನ್ನು ಪಡೆಯುತ್ತಿದ್ದಾರೆ. ಅದೇ ರೀತಿ ಅದರ ಜೊತೆ ಸಬ್ಸಿಡಿ (Gas Subsidy) ಮೊತ್ತವನ್ನು ಸಹ ‌ ಪಡೆದುಕೊಳ್ಳುತ್ತಿದ್ದಾರೆ. ಈ ಸೌಲಭ್ಯವನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಬಡತನ ರೇಖೆಗಿಂತ ಕೆಳಗಿರುವವರು ಉಚಿತ ಗ್ಯಾಸ್ ಕನೆಕ್ಷನ್ (Free Gas Collection) ಪಡೆದುಕೊಳ್ಳಲು ಅವಕಾಶ ಇದೆ.

ಲಿಸ್ಟ್ ಬಿಡುಗಡೆ:

 

advertisement

Image Source: Airtel

 

ಇದೀಗ ಕೆಲವೊಂದು ಹೊಸ ಫಲಾನುಭವಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಿದ್ದು ಈ ಹೆಸರುಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.ನೀವು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಅರ್ಜಿ ಸಲ್ಲಿಕೆ ಮಾಡುದಾದ್ರೆ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಚೆಕ್ ಮಾಡಿ:

ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಹಾಗೂ ಮೊಬೈಲ್ ಸಂಖ್ಯೆ ಇದ್ರೆ , ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡಬಹುದು.
https://Mylpg.in ಈ ವೆಬ್ಸೈಟ್ ಗೆ ಲಾಗಿನ್ ಆಗಿ, ಫಲಾನುಭವಿಗಳ ಪಟ್ಟಿ ಆಯ್ಕೆ ಎಂಬುದನ್ನು‌ ಕ್ಕಿಕ್ ಮಾಡಿ. ನಂತರ ನಿಮ್ಮ ರಾಜ್ಯ, ಜಿಲ್ಲೆ ಇತ್ಯಾದಿ ಮಾಹಿತಿ ನೀಡಿದರೆ ನಂತರ ಫಲಾನುಭವಿಗಳ ಪಟ್ಟಿ ಕಾಣಸಿಗಲಿದೆ.

ಅರ್ಹತೆ ಏನು?

ಈ ಯೋಜನೆಗೆ ಅರ್ಜಿ ಹಾಕಲು ಅರ್ಜಿದಾರರು ಮಹಿಳೆಯೇ ಆಗಿರಬೇಕು.ಮತ್ತು ‌ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚು ಇರಬೇಕು. ಬಿಪಿಎಲ್ ಕಾರ್ಡ್ (BPL Card) ಇದ್ದರೆ ಎಲ್‌ಪಿಜಿ ಕನೆಕ್ಷನ್ (LPG Connection) ಸಿಗಲಿದೆ. ಇನ್ನು ಈ ಹಿಂದೆ ಇದರ ಸೌಲಭ್ಯ ಪಡೆದಿದ್ದರೆ ಮತ್ತೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.

advertisement

Leave A Reply

Your email address will not be published.