Karnataka Times
Trending Stories, Viral News, Gossips & Everything in Kannada

BPL Card: ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದವರಿಗೆ ಗುಡ್ ನ್ಯೂಸ್! ಸರ್ಕಾರದ ಹೊಸ ನಿರ್ಧಾರ

advertisement

ಇಂದು ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಕೂಡ ಅಗತ್ಯ ದಾಖಲೆ ಯಾಗಿದೆ. ಅದರಲ್ಲೂ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಈ ಕಾರ್ಡ್ ಇದ್ದರೆ ಮಾತ್ರ ಸೌಲಭ್ಯ ಸಿಗಲಿದೆ. ಹಾಗಾಗಿ ಎಪಿಎಲ್​ (APL Card) ಹಾಗೂ ಬಿಪಿಎಲ್ ಕಾರ್ಡ್ (BPL Card) ​​ಗಳಿಗೆ ಭಾರೀ ಬೇಡಿಕೆ ಬಂದಿದೆ. ಆದರೆ ಕೆಲವರು ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಈ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ.

ಅರ್ಜಿ ಪರಿಶೀಲನೆ?

ಹೊಸ ರೇಷನ್ ಕಾರ್ಡ್ (Ration Card) ಅನ್ನು ಪಡೆದುಕೊಳ್ಳಲು ಜನರು ಬಹಳಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸರ್ಕಾರ ಹೊಸ ಕಾರ್ಡ್ ವಿತರಣೆಯನ್ನು ನೀಡುವ ಬಗ್ಗೆ ಸಮಯ ಮುಂದಿಡುತ್ತಲೆ ಬಂದಿದೆ. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರೇಷನ್ ಕಾರ್ಡ್ ಹೊಸ ಅರ್ಜಿ ಚಾಲ್ತಿಯಲ್ಲಿ ಇರಲಿಲ್ಲ. ಈ ಮೊದಲು ಈಗಾಗಲೇ ರೇಷನ್ ಕಾರ್ಡ್ ಪಡೆಯಲು ಹಲವು ಜನ ಅರ್ಜಿ ಸಲ್ಲಿಕೆ ಮಾಡಿದ್ದರು‌. ಇದೀಗ ಈ ಬಗ್ಗೆ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ (KH Muniyappa) ಅವರು ಮಾತನಾಡಿದ್ದು ಎಲ್ಲಾ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆಎಂದು ತಿಳಿಸಿದ್ದಾರೆ.

ಯಾವಾಗ ಕಾರ್ಡ್ ವಿತರಣೆ?

 

advertisement

 

ಮಾರ್ಚ್ 31ಕ್ಕೆ ಎಲ್ಲಾ ಅರ್ಜಿಗಳ ಪರಿಶೀಲನೆ ಮುಗಿಯಲಿದ್ದು ಅರ್ಜಿ ಸಲ್ಲಿಕೆ ಮಾಡಿದವರ ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿ, ಯಾರಿಗೆ ಯಾವ ಕಾರ್ಡ್ ನೀಡಬೇಕೆಂದು ನಿಗದಿಪಡಿಸಿ, ಏಪ್ರಿಲ್ ಒಂದರಿಂದ ಅರ್ಜಿ ಸಲ್ಲಿಕೆ ಮಾಡಿದ ಫಲಾನುಭವಿಗಳಿಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡಲಾಗುವುದು ಎಂಬ ಗುಡ್ ನ್ಯೂಸ್ ನೀಡಿದ್ದಾರೆ.

ಬೇಡಿಕೆ ಹೆಚ್ಚಳ:

ರೇಷನ್ ಕಾರ್ಡ್ ಇಂದು ಎಲ್ಲಾ ದಾಖಲೆ ಮಾಡಿಸಲು ಸಹ ಅಗತ್ಯವಿದ್ದು ಎರಡು ತಿಂಗಳಿನಿಂದ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದು ಈ ಹಿಂದೆ ಬಾಕಿ ಉಳಿದುಕೊಂಡಿದ್ದ ಅರ್ಜಿಗಳು ಕೂಡ ಹಾಗೇ ಇರುವುದರಿಂದ ಅವುಗಳನ್ನು ವಿಲೇವಾರಿ ಮಾಡಿದ ನಂತರ ಹೊಸ ಅರ್ಜಿ ಗಳನ್ನು ಕರೆಯಲಾಗುತ್ತದೆ. ಹಾಗಾಗಿ ಹೊಸ ಕಾರ್ಡ್ ಮಾಡಿಸಲು ಸಹ ಅವಕಾಶ ಇದೆ. ಮನೆಯಿಂದ ಪ್ರತ್ಯೇಕವಾಗಿ ಬೇರೆ ಕಡೆ ವಾಸ ಮಾಡಿದವರು, ಕಾರ್ಡ್ ಸ್ಥಗಿತ ಆದಲ್ಲಿ ಅಂತವರು ಮತ್ತೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು‌.

advertisement

Leave A Reply

Your email address will not be published.