Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇದ್ದರೂ ಇಂತವರಿಗೆ ಇನ್ಮುಂದೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ಇಲ್ಲ, ಹೊಸ ಆದೇಶ!

advertisement

ಇಂದು ಪ್ರತಿಯೊಂದು ದಾಖಲೆಗಳು ಕೂಡ ಒಬ್ಬೊಬ್ಬ ವ್ಯಕ್ತಿಗೂ ಮುಖ್ಯ. ಇಂದು ಆಧಾರ್ ಕಾರ್ಡ್, ರೇಷಾನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ, ಇತ್ಯಾದಿ ಎಲ್ಲ ದಾಖಲೆಗಳು ಪ್ರಮುಖ ಎನಿಸಿದೆ. ಈಗಾಗಲೇ ರಾಜ್ಯ ಸರಕಾರ ಮೂಲಕ ದೊರೆಯುವ ಗ್ಯಾರಂಟಿ ಯೋಜನೆಗಳಿಗೆ ಅಧಾರ್ ಕಾರ್ಡ್, ರೇಷನ್ ಕಾರ್ಡ್ ಬಹಳ ಪ್ರಮುಖವಾಗಿ ಬೇಕು. ಆದರೆ ಈ ದಾಖಲೆಗಳ ಕೊರತೆಯಿಂದ ಸಾಕಷ್ಟು ಜನರಿಗೆ ಹಣ ಜಮೆ ಯಾಗಿಲ್ಲ.

ದೂರುಗಳ ಸಂಖ್ಯೆ ಹೆಚ್ಚಳ

ಸರ್ಕಾರ ನೀಡ್ತಾ ಇರುವ ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಒಂದಲ್ಲ ಒಂದು ಕೊರತೆ ಉಂಟಾಗುತ್ತಿದ್ದು ಅನ್ನ ಭಾಗ್ಯ (Anna Bhagya) , ಗೃಹಲಕ್ಷ್ಮಿ (GruhaLakshmi) ಹಣ ಇನ್ನೂ‌ ಕೂಡ ಬಂದಿಲ್ಲ ಎಂದು ಹಲವಷ್ಟು ಮಾತುಗಳು ಕೇಳಿಬರುತ್ತಿದೆ.ಒಂದೆಡೆ ದಾಖಲೆ ಗಳು ಸರಿಯಾಗಿ ಇಲ್ಲದೆ ಹಣ ಬರ್ತಾ ಇಲ್ಲ, ಇನ್ನೊಂದೆಡೆ ಸರಕಾರವು ಗ್ಯಾರಂಟಿ ಯೋಜನೆಗಳ ಸಮರ್ಪಕ ಬಳಕೆ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ ಹಣ ಜಮೆ ಮಾಡಲು ನಿರ್ಧಾರ ಮಾಡಿದೆ.

advertisement

ಇಂತವರಿಗೆ ಈ ಸೌಲಭ್ಯ ಇಲ್ಲ

ಈಗಾಗಲೇ ಸರಕಾರದ ಸೌಲಭ್ಯ ಪಡೆಯುವ ಬಗ್ಗೆ ಕೆಲವೊಂದು ನಿರ್ಧಿಷ್ಟ ಮಾನದಂಡಗಳು ಇದ್ದು, ಅಂತಹ ಫಲಾನುಭವಿಗಳಿಗೆ ಮಾತ್ರ ಹಣ ದೊರೆಯುತ್ತದೆ. ಕೆಲವು ಜನರು ಸರಕಾರಿ ಸೌಲಭ್ಯ ವನ್ನು ದುರುಪಯೋಗ ಮಾಡುತ್ತಿದ್ದು ರೇಷನ್ ಕಾರ್ಡ್ (Ration Card) ಇದ್ದರೂ ಆರು ತಿಂಗಳಿಂದ ಪಡಿತರ ಪಡೆಯದೇ ಕೇವಲ ಸರಕಾರಿ ಸೌಲಭ್ಯ ಕ್ಕೆ ರೇಷನ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಇಂತಹ ಎಲ್ಲ 3.26 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್‌ಗಳು ದೊರೆತಿದ್ದು ಈ ಕಾರ್ಡ್ ನ್ನು ರದ್ದು ಮಾಡಲು ರಾಜ್ಯ ಸರ್ಕಾರ ಸಹ ಆದೇಶ ನೀಡಿದ್ದು ಇದರಿಂದ ಗ್ಯಾರಂಟಿ ಯೋಜನೆ ಪಡೆಯುವ ಫಲಾನುಭವಿಗಳಿಗೂ ಕಡಿವಾಣ ಬಿಳಲಿದೆ.

ಸಮರ್ಪಕವಾಗಿ ನಿರ್ವಹಣೆ

ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ ಕೆಲವು ಜನರಿಗೆ ಅಷ್ಟೆ ಗ್ಯಾರಂಟಿ ಯೋಜನೆಗಳು ಸಿಗುತ್ತಿದ್ದು ಕೆಲವರಿಗೆ ಉಪಯೋಗಕ್ಕೆ ಬರಲಿಲ್ಲ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಬಗ್ಗೆ ದೂರುಗಳು ಹೆಚ್ಚಾಗಿದ್ದು ಮೊದಲನೆಯ ಯಜಮಾನಿಯ ದಾಖಲೆ ತಪ್ಪಿದ್ದಲ್ಲಿ ಮನೆಯ ಎರಡನೇ ಯಜಮಾನಿಗೂ ಹಣ ಹಾಕುವುದಾಗಿ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಸೌಲಭ್ಯ ಇದ್ದರೂ ಸರಿಯಾಗಿ ಸಮರ್ಪಕವಾಗಿ ನಿರ್ವಹಣೆ ಆಗದೆ ದೂರುಗಳ ಸಂಖ್ಯೆ ಯು ಹೆಚ್ಚಾಗಿದ್ದು ಈ ಬಗ್ಗೆ ಸರಕಾರ ಕ್ರಮ ಕೂಡ ಕೈಗೊಳ್ಳುತ್ತಿದೆ.

advertisement

Leave A Reply

Your email address will not be published.