Karnataka Times
Trending Stories, Viral News, Gossips & Everything in Kannada

Mahila Samman Saving Scheme: ಪೋಸ್ಟ್ ಆಫೀಸಿನಲ್ಲಿ 2 ಲಕ್ಷ ಹೂಡಿಕೆ ಮಾಡಿ 32,000 ಬಡ್ಡಿ ಪಡೆಯಿರಿ! ಮುಗಿಬಿದ್ದ ಜನ

advertisement

ಭಾರತೀಯ ಅಂಚೆ ಕಚೇರಿ ಅತ್ಯಂತ ನಂಬಿಕಾರ್ಹ ಹೂಡಿಕೆಯನ್ನು ಪ್ರೇರೇಪಿಸುತ್ತದೆ. ಅಂಚೆ ಕಚೇರಿಯಲ್ಲಿ ನೀವು ಬೇರೆಬೇರೆ ರೀತಿಯ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಸಾಕಷ್ಟು ಅಧಿಕ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಯಾಕಂದರೆ ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆಗಳ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಬಡ್ಡಿ ದರವನ್ನು ಕೂಡ ನಿಗದಿಪಡಿಸಲಾಗಿದೆ. ಅಂತಹ ಹೆಚ್ಚು ಲಾಭದಾಯಕವಾಗಿರುವ ಒಂದು ಹೂಡಿಕೆ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.

ಅಂಚೆ ಕಚೇರಿಯ ಮಹಿಳಾ ಸಮ್ಮಾನ ಉಳಿತಾಯ (Mahila Samman Saving Scheme) ಪ್ರಮಾಣ ಪತ್ರ!

ಹೆಸರೇ ಸೂಚಿಸುವಂತೆ ಇದು ಮಹಿಳೆಯರಿಗಾಗಿಯೇ ಇರುವ ಉಳಿತಾಯ ಪ್ರಮಾಣ ಪತ್ರ ಆಗಿದೆ. ಮಹಿಳಾ ಠೇವಣಿದಾರರು ಸೀಮಿತ ಅವಧಿಗೆ ಹೂಡಿಕೆ ಮಾಡಿ ಉತ್ತಮ ಲಾಭ ಪಡೆದುಕೊಳ್ಳಬಹುದು. ಕೇವಲ 10 ರೂಪಾಯಿಗಳಿಂದ ಎರಡು ಲಕ್ಷಗಳವರೆಗೆ ಹೂಡಿಕೆ ಮಾಡಬಹುದಾದ ಯೋಜನೆ ಇದಾಗಿದ್ದು, ನೀವು ಇದರಲ್ಲಿ ಒಂದು ಬಾರಿ ಮಾತ್ರ ಹೂಡಿಕೆ ಮಾಡಬಹುದು. ಅಂದರೆ ತಿಂಗಳು ತಿಂಗಳು ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ.

advertisement

ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣ ಪತ್ರ (Mahila Samman Saving Scheme), ಎರಡು ವರ್ಷಗಳ ಅವಧಿಗೆ ಪಕ್ವವಾಗುವ ಯೋಜನೆ ಆಗಿದೆ. ಮಹಿಳೆಯರಿಗೆ ಸ್ವಾವಲಂಬಿ ಹಾಗೂ ಆರ್ಥಿಕ ಜೀವನ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅಂಚೆ ಕಚೇರಿ (Post Office) ಈ ಯೋಜನೆಯನ್ನು ಆರಂಭಿಸಿದೆ. ಇದರಲ್ಲಿ 10,000 ಠೇವಣಿ ಮಾಡಿದ್ದೀರಿ ಎಂದಾದರೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ 11,602 ರೂಪಾಯಿಗಳನ್ನು ಹಿಂಪಡೆಯಬಹುದು.

ಮಾರ್ಚ್ 31, 2024ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಬಡ್ಡಿದರ ಪರಿಷ್ಕರಣೆಯಲ್ಲಿ 7.5% ಬಡ್ಡಿಯನ್ನು ಈ ಯೋಜನೆಯ ಮೇಲೆ ನಿಗದಿಪಡಿಸಲಾಗಿದೆ. ಆದ್ದರಿಂದ ಒಂದು ಲೆಕ್ಕಾಚಾರದ ಪ್ರಕಾರ ನೀವು ಎರಡು ಲಕ್ಷ ರೂಪಾಯಿಗಳ ಮೊತ್ತವನ್ನು ಒಮ್ಮೆಗೆ ಹೂಡಿಕೆ ಮಾಡಿದ್ರೆ ಅದಕ್ಕೆ ಸುಮಾರು 32,044 ಬಡ್ಡಿ ಸಿಗುತ್ತದೆ. ಅಂದ್ರೆ ನೀವು ಠೇವಣಿ ಇಟ್ಟ ಹಣ ಹಾಗೂ ಬಡ್ಡಿ ದರವನ್ನು ಸೇರಿಸಿ ಕೇವಲ ಎರಡು ವರ್ಷಗಳಲ್ಲಿ 2,32, 044ಗಳನ್ನು ಹಿಂಪಡೆಯಬಹುದು.

ಅಂಚೆ ಕಚೇರಿಯ ಮಹಿಳಾ ಸಮಾನ ಉಳಿತಾಯ ಪ್ರಮಾಣ ಪತ್ರ ಖಾತೆಯನ್ನು ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಹೆಸರಿನಲ್ಲಿಯೂ ಕೂಡ ಪಾಲಕರು ಆರಂಭಿಸಬಹುದು. ಇದೊಂದು ಸರ್ಕಾರದ ಖಾತ್ರಿಪಡಿಸಿದ ಹೂಡಿಕೆ ಯೋಜನೆ ಆಗಿದ್ದು, ನೀವು ಅಧಿಕ ಬಡ್ಡಿ ಜೊತೆಗೆ ಉತ್ತಮ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ನಲ್ಲಿ ನಿಮಗೆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.

advertisement

Leave A Reply

Your email address will not be published.