Karnataka Times
Trending Stories, Viral News, Gossips & Everything in Kannada

Anna Bhagya Money: ಜನವರಿ, ಪೆಬ್ರವರಿ ತಿಂಗಳಿನ ಅನ್ನಭಾಗ್ಯ ಹಣ ಬಂದಿಲ್ಲವೇ? ಹೀಗೆ ಚೆಕ್ ಮಾಡಿ

advertisement

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಯು ಕೂಡ ಒಂದಾಗಿದ್ದು ಹೆಚ್ಚಿನ ಜನರು ಈ ಯೋಜನೆಯ ಸೌಲಭ್ಯ ವನ್ನು ಪಡೆದು ಕೊಳ್ಳುತ್ತಿದ್ದಾರೆ. ಈಗಾಗಲೇ ಹೆಚ್ಚಿನ ಜನರಿಗೆ ಈ ಹಣ ಜಮೆ ಯಾಗಿದ್ದು ಕೆಲವರ ಖಾತೆಗೆ ಅನ್ನಭಾಗ್ಯ ಹಣ (Anna Bhagya Money) ಜಮೆ ಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಜನರು ತಮಗೆ ಅನ್ನಭಾಗ್ಯ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ಸದ್ಯ ಕೆಲವು‌ ಜಿಲ್ಲೆಗಳ ಜನರಿಗೆ ಹಣ ವರ್ಗಾವಣೆಯಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಣ ಜಮೆ ಯಾಗುತ್ತದೆ ಎಂದು ಆಹಾರ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.

ಎಷ್ಟು ಹಣ ಜಮೆ?

 

 

ರಾಜ್ಯ ಸರಕಾರವು ಅನ್ನ ಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಫಲಾನುಭವಿಗಳಿಗೆ ಪ್ರತಿತಿಂಗಳು ತಲಾ 10 ಕೆಜಿ ಅಕ್ಕಿ ನೀಡುವಂತೆ ನಿರ್ಧಾರ ಮಾಡಿತ್ತು. ಆದರೆ ಅಕ್ಕಿ ಕೊರತೆಯ ಕಾರಣ, ಕೇಂದ್ರ ಸರಕಾರ ಈ ಬಗ್ಗೆ ಒಪ್ಪದ ಕಾರಣ ಹೆಚ್ಚುವರಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ ವಿತರಿಸಿ, ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂ. ದರದಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಕುಟುಂಬದ ಮುಖ್ಯಸ್ಥರ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ 5 ಕೆ.ಜಿ. ಅಕ್ಕಿ ಬದಲಿಗೆ ನೇರ ನಗದು ವರ್ಗಾವಣೆ ಮಾಡುತ್ತದೆ.ಅಂದರೆ ಕುಟುಂಬದ ಸದಸ್ಯರಿಗೆ 170 ರೂ. ನಂತೆ ಹಣ ಜಮೆ ಮಾಡಲಾಗುತ್ತದೆ.

advertisement

ಹಣ ಯಾವಾಗ ಜಮೆ?

ಕೆಲವು ಜಿಲ್ಲೆಗಳಿಗೆ ಈ ಹಣ (Anna Bhagya Money) ಬಿಡುಗಡೆ ಯಾಗಿದ್ದು ಹಂತ ಹಂತವಾಗಿ ಹಣ ಜಮೆ ಯಾಗಲಿದೆ.ಒಂದು ವೇಳೆ ಜನವರಿ ಮತ್ತು ಪೆಬ್ರವರಿ ತಿಂಗಳ ಹಣ ಜಮೆಯಾಗದೇ ಇದ್ದಲ್ಲಿ ಈ ತಿಂಗಳ ಅಂದರೆ ಮಾರ್ಚ್ 15 ರ ಒಳಗೆ ಹಣ ಜಮೆಯಾಗಲಿದೆ ಎಂದು ಆಹಾರ ಇಲಾಖೆಯು ಮಾಹಿತಿ ನೀಡಿದೆ. ಇನ್ನು ಹಣ ಜಮೆಯಾದ ತಕ್ಷಣ ಬ್ಯಾಂಕ್‌ನಿಂದ ಸಂದೇಶ ಕೂಡ ಬರಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗೆ ಚೆಕ್ ಮಾಡಿ:

ಅನ್ನಭಾಗ್ಯ ಹಣ (Anna Bhagya Money) ಬಂದಿದೆಯಾ ಎಂದು ತಿಳಿದು ಕೊಳ್ಳಲು ಮೊದಲಿಗೆ ನೀವು ಕರ್ನಾಟಕ ಆಹಾರ ಇಲಾಖೆಯ ಲಿಂಕ್ https://ahara.kar.nic.in/ ಗೆ ಭೇಟಿ ನೀಡಿ, ಇಲ್ಲಿ ಇ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಡಿಬಿಟಿ ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿ, ಪಡಿತರ ಚೀಟಿ ಸಂಖ್ಯೆ ನಮೂದಿಸಿ, ಕ್ಯಾಪ್ಚಾ ವನ್ನು ಕೂಡ ನಮೂದಿಸಿ, ಇಲ್ಲಿ ನಿಮ್ಮ ಅನ್ನ ಭಾಗ್ಯ ಡಿಬಿಟಿ ಸ್ಟೇಟಸ್ ಕಾಣಲಿದೆ.

advertisement

Leave A Reply

Your email address will not be published.