Karnataka Times
Trending Stories, Viral News, Gossips & Everything in Kannada

Anna Bhagya Yojana: ಅನ್ನಭಾಗ್ಯ ಯೋಜನೆಯ ಈ ತಿಂಗಳು ಹಣ ಬರುತ್ತಾ? ಬರದಿದ್ದರೆ ಏನು ಮಾಡಬೇಕು?

advertisement

ಪಡಿತರ ವಿತರಣೆ ಮೂಲಕ ಬಡವರ್ಗದ ಜನರಿಗೆ ಆಹಾರ ಸೌಲಭ್ಯ ನೀಡಲಾಗುತ್ತಲಿದ್ದು ಪಡಿತರ ಕಾರ್ಡ್ (Ration Card) ಎನ್ನುವುದು ಸರಕಾರದ ಯೋಜನೆಯ ಫಲಾನುಭವಿಗಳಾಗಲು ಇನ್ನು ಅನೇಕ ವಿಧವಾದ ಶೈಕ್ಷಣಿಕ, ಆರೋಗ್ಯ ಸಂಬಂಧಿತ, ಆರ್ಥಿಕ ಸಹಾಯಧನ ಪಡೆಯಲು ಅನೇಕ ತರನಾಗಿ ಪಡಿತರ ಕಾರ್ಡ್ ಉಪಯೋಗ ಕಾರಿಯಾಗುತ್ತಿದೆ. ಈ ಮೂಲಕ ಬಡ ವರ್ಗದ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಸೌಲಭ್ಯ ದೊಡ್ಡ ಮಟ್ಟದ ನೆರವು ನೀಡಿದೆ ಎನ್ನಬಹುದು.

Anna Bhagya Yojana:

 

 

ಪಡಿತರ ಕಾರ್ಡ್ ಅನ್ನು ಅನೇಕ ರೀತಿಯಲ್ಲಿ ಉಪಯೋಗ ಮಾಡಲಾಗುತ್ತಿದ್ದು ಅದರಲ್ಲಿ ಅಂತ್ಯೋದಯ, APL, BPL Card ಎಂಬ ವರ್ಗದ ಆಧಾರದ ಮೇಲೆ ಸಿಗುವ ಸೌಲಭ್ಯಗಳು ಕೂಡ ವಿಭಿನ್ನವಾಗಿ ಇರಲಿದೆ. ಅದರಲ್ಲಿಯೂ ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ (Anna Bhagya Yojana) ಅಡಿಯಲ್ಲಿ ಉಚಿತ ಹತ್ತು ಕೆ.ಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು ಆದರೆ ಸರಿಯಾದ ಸಹಕಾರ ಕೇಂದ್ರದಿಂದ ಸಿಗದ ಹಿನ್ನೆಲೆಯಲ್ಲಿ ಅಕ್ಕಿಯ ಬದಲು ಹಣ ನೀಡುವ ವ್ಯವಸ್ಥೆಗೆ ಸರಕಾರ ಮುಂದಾಗಿತ್ತು.

ಅನೇಕ ಟೀಕೆ:

advertisement

ಕೇಂದ್ರ ಸರಕಾರವು ಅನ್ನ ಭಾಗ್ಯ ಯೋಜನೆ (Anna Bhagya Yojana) ಗೆ ಅಕ್ಕಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಉಳಿದ ಐದು ಕೆಜಿ ಅಕ್ಕಿಯ ಹಣವನ್ನು ಕುಟುಂಬದ ಹಿರಿಯವರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು. ಆದರೆ ಈ ಬಗ್ಗೆ ವಿಪಕ್ಷಗಳು ತಕರಾರು ಎತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿಲ್ಲ ಜನರಿಗೆ ಆಸೆ ತೋರಿಸಿದ್ದಾರೆ ಎಂದು ಬಗೆದಿತ್ತು ಆದರೆ ಅಕ್ಕಿ ಪೂರ್ತಿ ಪ್ರಮಾಣ ದೊರೆಯುವ ವರೆಗೆ ಕೂಡ ಅಕ್ಕಿ ಹಣ ಒದಗಿಸುವುದುದಾಗಿ ಇದಕ್ಕೆ ಪ್ರತ್ಯುತ್ತರವನ್ನು ಆಡಳಿತ ಪಕ್ಷವಾದ ಕಾಂಗ್ರೆಸ್ ನೀಡಿದೆ.

ಎಷ್ಟು ಅಕ್ಕಿ ಸಿಗಲಿದೆ?

ಪ್ರತಿ ಸದಸ್ಯನಿಗೆ 5 kg ಅಕ್ಕಿ ಸಿಗಲಿದೆ. ಅಂತ್ಯೋದಯ ಕಾರ್ಡ್ ದಾರರಿಗೆ 35kg ಅಕ್ಕಿ ಸಿಗಲಿದೆ. ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ (BPL Card) ನವರಿಗೆ 5 kg ತಲಾ ಸಿಗಲಿದೆ. ಎಪಿಎಲ್ ಗೆ ಮಿತಿ ಕೂಡ ಅನ್ವಯವಾಗಲಿದೆ. 174 ರೂಪಾಯಿ ಒಬ್ಬ ಸದಸ್ಯರಂತೆ ನೀಡಲಾಗುತ್ತದೆ. ಹಾಗಾಗಿ ಜನರಿಗೆ ಅಕ್ಕಿ ಸಿಗದಿದ್ದರೂ ಮೋಸ ಮಾಡದೇ ಸರಕಾರವು ಆ ಹಣವನ್ನು ನೀಡಿದೆ.

ಈ ತಿಂಗಳ ಹಣ ಬರುತ್ತಾ?

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ಬದಲು ಸಿಗುವ ಹಣ ಈ ಬಾರಿ ಸಹ‌ ನಿಮಗೆ ಹಣ ಸಿಗಲಿದೆ. ರಾಜ್ಯದಲ್ಲಿ ಈಗಾಗಲೇ ಫೆಬ್ರವರಿ ತಿಂಗಳ ಹಣ ಜಮೆ ಆಗಿದ್ದು ಮೊತ್ತ ಮನೆ ಹಿರಿಯ ಸದಸ್ಯರ ಖಾತೆಗೆ ಬಂದು ಬೀಳಲಿದೆ. ಈ ಬಗ್ಗೆ ಸಮಸ್ಯೆ ಆದರೆ ಅಥವಾ ತಾಂತ್ರಿಕ ದೋಷ ಕಂಡು ಬಂದರೆ ಸಮೀಪದ ನ್ಯಾಯ ಬೆಲೆ ಅಂಗಡಿಗೆ ಹೋಗಿ ದೂರು ನೀಡುವಂತೆ ಹೇಳಲಾಗಿದೆ.

advertisement

Leave A Reply

Your email address will not be published.