Karnataka Times
Trending Stories, Viral News, Gossips & Everything in Kannada

BPL Card: ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದೀರಾ? ನಿಮಗಿದೆ ಈ ಗುಡ್ ನ್ಯೂಸ್!

advertisement

ಇಂದು ರೇಷನ್ ಕಾರ್ಡ್ (Ration Card) ಎಂಬುದು ಪ್ರತಿಯೊಬ್ಬರಿಗೂ ಅಗತ್ಯ ಕಾರ್ಡ್ ಆಗಿದೆ.ಈ ಕಾರ್ಡ್ ಇದ್ದರೆ ಮಾತ್ರ ಸರಕಾರದ ಹಲವು ಸೌಲಭ್ಯ ಗಳನ್ನು ನೀವು ಪಡೆಯಲು ಸಾಧ್ಯವಾಗುತ್ತದೆ. ಅದರಲ್ಲೂ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ (BPL Card) ಕೂಡ ಬಹಳ ಅಗತ್ಯವಾಗಿದ್ದು ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಿದ್ದವರು ಕಾರ್ಡ್ ಯಾವಾಗ ದೊರೆಯಲಿದೆ ಎಂದು ಕಾದು ಕುಳಿತಿದ್ದಾರೆ. ಇದೀಗ ಈ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ‌

ಎಪ್ರಿಲ್ ನಲ್ಲಿ ಕಾರ್ಡ್ ವಿತರಣೆ:

ಆಹಾರ ಇಲಾಖೆ ಸಚಿವರು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದವರಿಗೆ ಸಿಹಿ ಸುದ್ದಿ ನೀಡಿದ್ದು ಹೊಸದಾಗಿ ಬಿಪಿಎಲ್ (BPL Card) ಹಾಗೂ ಎಪಿಎಲ್ ಕಾರ್ಡ್ (APL Card) ಅರ್ಜಿ ಸಲ್ಲಿಸಿರುವವರಿಗೆ ಮಾರ್ಚ್ 31 ರೊಳಗೆ ಸೂಕ್ತವಾದ ದಾಖಲೆಗಳನ್ನು ಪರಿಶೀಲನೆ ಮಾಡಿ ಏಪ್ರಿಲ್ 1 ರಿಂದ ಕಾರ್ಡ್ ವಿತರಣೆ ಮಾಡುತ್ತೇವೆ ಎಂದು ಸಚಿವರಾದ ಕೆ.ಹೆಚ್. ಮುನಿಯಪ್ಪ (K.H. Muniyappa) ತಿಳಿಸಿದ್ದಾರೆ.

 

ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ:

advertisement

ಪಡಿತರ ಚೀಟಗೆ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದವರ ಅರ್ಜಿಗಳ ಪರಿಶೀಲನೆ ಶೇಕಡಾ 80ರಷ್ಟು ಕಾರ್ಯ ಪೂರ್ಣಗೊಂಡಿದೆ. ಅರ್ಜಿ ಸಲ್ಲಿಕೆ ಮಾಡಿದವರ ಪೈಕಿ ಅರ್ಹರಿಗೆ ಮಾತ್ರವೇ ಪಡಿತರ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಈಗಾಗಲೇ ಹಿಂದಿನ ಸರ್ಕಾರ ಸುಮಾರು 2.95 ಲಕ್ಷ ಕಾರ್ಡ್ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿತ್ತು . ಆದರೆ ನಮ್ಮ ಸರ್ಕಾರ ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ ಎಂದು ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ರು.

ಅನರ್ಹರ ಕಾರ್ಡ್ ರದ್ದು:

ಕೆಲವು ಕಾರ್ಡ್ ದಾರರು ಪಡಿತರ ಪದಾರ್ಥಗಳನ್ನೇ ಪಡೆಯದಿರುವುದು ಬೆಳಕಿಗೆ ಬಂದಿದ್ದು ಕಳೆದ 6 ತಿಂಗಳಿಂದ ರೇಷನ್‌ ಪಡೆಯದವರ ಕಾರ್ಡ್‌ಗಳು ರದ್ದಾಗಲಿದೆ‌.‌ ಅದೇ ರೀತಿ ರೇಷನ್ ಕಾರ್ಡ್ ನ ಷರತ್ತುಗಳನ್ನು ಮೀರಿ ಬಿಪಿಎಲ್ ಕಾರ್ಡ್ (BPL Card) ಪಡೆದಿದ್ದರೆ ಅಂತರವರ ಕಾರ್ಡ್ ಕೂಡ ರದ್ದಾಗಲಿದೆ.ಇದೀಗ ಅಂಥವರ ಮಾಹಿತಿ ಪಡೆದು ತಿಳುವಳಿಕೆ ಮೂಡಿಸುವ ಪ್ರಕ್ರಿಯೆ ಕೂಡ ನಡೆದಿದೆ.

ಅತೀ ಶೀಘ್ರದಲ್ಲಿ ಕಾರ್ಡ್ ವಿತರಿಸುವ ಕ್ರಮ:

ಇನ್ನು ಹೊಸ ಕಾರ್ಡ್ಗಳಿಗೆ ಅರ್ಜಿ ಬಂದರೆ ಹೆಚ್ಚು ಸಮಯ ತೆಗೆದುಕೊಳ್ಳದೆ ಒಂದು ವಾರದೊಳಗೆ ಕಾರ್ಡ್ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

advertisement

Leave A Reply

Your email address will not be published.