Karnataka Times
Trending Stories, Viral News, Gossips & Everything in Kannada

BPL Card: ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಕಾದು ಕುಳಿತಿದ್ದವರಿಗೆ ಸರ್ಕಾರದ ಮಹತ್ವದ ಆದೇಶ!

advertisement

ಸರ್ಕಾರದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒಂದು ಗುಡ್‌ ನ್ಯೂಸ್‌ ಇದೆ. ಇದೀಗ ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಕಳೆದ ಎರಡುವರೆ ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಕಾದು ಕುಳಿತಿದ್ದವರಿಗೆ, ಸರ್ಕಾರ ಅಂತೂ ಬಿಪಿಎಲ್ ಕಾರ್ಡ್ (BPL Card) ವಿತರಣೆ ಮಾಡಲು ನಿರ್ಧರಿಸಿದೆ.

Use of Ration Card:

 

 

ದೇಶದ ಎಲ್ಲ ಜನತೆಗೆ ರೇಷನ್‌ ಕಾರ್ಡ್‌ (Ration Card) ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯೋಜನೆ ಪ್ರಯೋಜನ ಪಡೆಯಲು, ಆರೋಗ್ಯ ಸೇವೆಯಲ್ಲಿ ರಿಯಾಯಿತಿ ಪಡೆಯಲು ಹಾಗೂ ಇತರೆ ಸರ್ಕಾರಿ ಕೆಲಸಗಳಿಗೂ ಕೂಡ ರೇಷನ್‌ ಕಾರ್ಡ್‌ ಹೆಚ್ಚು ಅನುಕೂಲಕರವಾಗಿದೆ. ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನ್ನಭಾಗ್ಯ ಯೋಜನೆ (Anna Bhagya Yojana) ಯಂತಹ ಯೋಜನೆಗಳು ಕೂಡ ಜಾರಿಗೆ ಬಂದಿವೆ.

ಇದೀಗ ಸರ್ಕಾರ ರೇಷನ್ ಕಾರ್ಡ್ ಅಗತ್ಯವಾಗಿರುವ ದಾಖಲೆ ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ ನಲ್ಲಿ ಹೆಸರಿನಿಂದ ಹಿಡಿದು ವಿಳಾಸದ ವರೆಗೆ ಎಲ್ಲ ಮಾಹಿತಿಗಳು ಸರಿಯಾಗಿ ಇರಬೇಕು ಎನ್ನುವ ಕಾರಣಕ್ಕೆ, ರೇಷನ್ ಕಾರ್ಡ್ ತಿದ್ದುಪಡಿಗೂ ಕೂಡ ಅವಕಾಶ ಮಾಡಿ ಕೊಟ್ಟಿತ್ತು.

advertisement

ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಬಹಳ ಮುಖ್ಯವಾಗಿರುವ ಗುರುತಿನ ಕಾರ್ಡ್ ಆಗಿದ್ದು, ಇದರಲ್ಲಿ ಅಗತ್ಯ ಇರುವ ತಿದ್ದುಪಡಿಗೆ ಈಗಾಗಲೇ ನಾಲ್ಕು ಬಾರಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಎಲ್ಲರೂ ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಸದ್ಯದಲ್ಲಿಯೇ ಮತ್ತೆ ಅವಕಾಶ ನೀಡಲಿದೆ.

ಹೊಸ BPL Card ವಿತರಣೆ ಯಾವಾಗ?

ಹೊಸ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಸಾಕಷ್ಟು ಜನರು ಅರ್ಜಿ ಸಲ್ಲಿಸಿ ಎರಡುವರೆ ವರ್ಷಗಳ ಕಳೆದವು. ಕರೋನಾ ಕಾರಣದಿಂದಾಗಿ ಹಾಗೂ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದಾಗಿ ಕಳೆದ ಎರಡುವರೆ ವರ್ಷಗಳಿಂದ ಅರ್ಜಿಗಳನ್ನ ಪರಿಶೀಲನೆ ನಡೆಸಿ ವಿತರಣೆ ಮಾಡಲು ಸದ್ಯವಾಗಿಲ್ಲ. ಅದಕ್ಕಾಗಿ ಸದ್ಯದಲ್ಲೆ ಹೊಸ ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲಾಗುವುದು.

ಆದರೆ ಇದರ ಬಗ್ಗೆ ಈಗ ಮಹತ್ವದ ಮಾಹಿತಿಯನ್ನು ನೀಡಿರುವ ಆಹಾರ ಸಚಿವ ಕೆಎಚ್ ಮುನಿಯಪ್ಪ, ಇನ್ನು ಕೆಲವೇ ದಿನಗಳಲ್ಲಿ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಬಿಪಿಎಲ್ ಕಾರ್ಡ್ ಇರದೆ ಸಾಕಷ್ಟು ಕುಟುಂಬಗಳು ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಅಂತ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಎಲ್ಲರಿಗೂ ಈ ಸೌಲಭ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಇನ್ನು ಸದ್ಯದಲ್ಲಿ ಹೊಸ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭಿಸಬಹುದು.

ಹೊಸ ಅರ್ಜಿ ಸಲ್ಲಿಸ ಬಹುದೇ ?

ಒಂದು ರಾಜ್ಯಕ್ಕೆ ಇಷ್ಟೇ ರೇಷನ್ ಕಾರ್ಡ್ ವಿತರಣೆ ಮಾಡಬೇಕು ಎನ್ನುವ ನಿಯಮ ಇರುತ್ತದೆ. ಹಾಗಾಗಿ ಹಳೆಯ ಅರ್ಜಿ ಪರಿಶೀಲಿಸಿ, ರೇಷನ್ ಕಾರ್ಡ್ ವಿತರಣೆ ಆಗದ ಹೊರತು ಮತ್ತೆ ಹೊಸ ಅರ್ಜಿಗೆ ಅವಕಾಶ ಇರುವುದಿಲ್ಲ. ಆದರೆ ಸದ್ಯದಲ್ಲೇ ಹೊಸ ಕಾರ್ಡ್ ವಿತರಣೆ ಆಗುತ್ತಿರುವುದರಿಂದ, ಮತ್ತೆ ಹೊಸ ಅತಿ ಸಲ್ಲಿಸುವುದಕ್ಕೂ ಕೂಡ ಸರ್ಕಾರ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ.

advertisement

Leave A Reply

Your email address will not be published.