Karnataka Times
Trending Stories, Viral News, Gossips & Everything in Kannada

AnnaBhagya Yojana: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ, 5 ಕೆಜಿ ಅಕ್ಕಿ ಬದಲು ಸಿಗಲಿದೆ ಈ ಧಾನ್ಯ!

advertisement

ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ (Ration Card Holders) ಬಂಪರ್ ಸಿಹಿ ಸುದ್ದಿ ನೀಡಿದ್ದು, ಅತೀ ಶೀಘ್ರದಲ್ಲಿ ಪಡಿತರ ವಿತರಣೆಯ ಜೊತೆಗೆ ರೇಷನ್ (Ration) ಜೊತೆಗೆ ಕುಚ್ಚಲಕ್ಕಿ (Brown Rice) ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಪಡಿತರ ವಿತರಣೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಇದರ ನಡುವೆ, ಅತೀ ಶೀಘ್ರದಲ್ಲಿ ಪಡಿತರದ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡುವ ಕುರಿತು ಆಹಾರ ಸಚಿವ ಕೆ. ಹೆಚ್ ಮುನಿಯಪ್ಪ (KH Muniyappa) ಮಾಹಿತಿ ನೀಡಿದ್ದಾರೆ.

advertisement

ಯಾರಿಗೆ Brown Rice ಸಿಗುತ್ತದೆ?

 

 

ಮುಂದಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆ (AnnaBhagya Yojana) ಯಡಿ 5 ಕೆಜಿ ಅಕ್ಕಿ ಬದಲಾಗಿ ಕುಚ್ಚಲಕ್ಕಿ (Brown Rice) ನೀಡುವುದಾಗಿ ಕೆ. ಹೆಚ್ ಮುನಿಯಪ್ಪ (KH Muniyappa) ತಿಳಿಸಿದ್ದಾರೆ. ಪಡಿತರದ ಜತೆಗೆ ಕುಚ್ಚಲಕ್ಕಿ ನೀಡಲು ಸರ್ಕಾರ ಸಿದ್ಧವಿದ್ದು, ಕುಚ್ಚಲಕ್ಕಿ (Brown Rice) ವಿತರಣೆಗಾಗಿ ಈಗಾಗಲೇ ಅನುಮೋದನೆ ಸಿಕ್ಕಿದ್ದು, ತಾಂತ್ರಿಕ ಕಾರಣಗಳಿಂದ ಯೋಜನೆ ದೊರೆಯಲು ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಿಸಿ ಪಡಿತರ ವಿತರಣೆ ಮಾಡಲಾಗುವ ಕುರಿತು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಆಹಾರ ಸೇವನೆಗೆ ಕುಚ್ಚಲಕ್ಕಿ ಹೆಚ್ಚು ಬಳಕೆ ಮಾಡುವುದರಿಂದ ಸರಕಾರದ ಈ ನಿರ್ಣಯ ಜನರಿಗೆ ಖುಷಿ ಮೂಡಿಸುವುದು ಸುಳ್ಳಲ್ಲ.

advertisement

Leave A Reply

Your email address will not be published.