Karnataka Times
Trending Stories, Viral News, Gossips & Everything in Kannada

Smart Card: ರೇಷನ್ ಕಾರ್ಡ್ ದಾರರಿಗೆ ಬಂಪರ್ ಗುಡ್ ನ್ಯೂಸ್, ಇನ್ಮುಂದೆ ರೇಷನ್ ಪಡೆಯಲು ಮತ್ತಷ್ಟು ಸುಲಭ!

advertisement

ಇಂದು ರೇಷನ್ ಕಾರ್ಡ್ ಅನ್ನೋದು ಬಹು ಮುಖ್ಯವಾದ ದಾಖಲೆ. ಈ ಕಾರ್ಡ್ ನಿಂದ ಬಹಳಷ್ಟು ಜನರಿಗೆ ಹಲವಷ್ಟು ಉಪಯೋಗ ಆಗಿದೆ. ಈಗಾಗಲೇ ಇದನ್ನು ಅಂತ್ಯೋದಯ, ಬಿಪಿಎಲ್ (BPL), ಎಪಿಎಲ್ ಕಾರ್ಡ್ (BPL) ಗಳಾಗಿ ವಿಂಗಡಣೆ ಮಾಡಲಾಗಿದೆ. ಇದೀಗ BPL ಕಾರ್ಡ್ ದಾರರಿಗೆ ಇನ್ನೊಂದು ಶುಭ ಸುದ್ದಿ ಸಿಕ್ಕಿದ್ದು ಪಡಿತರ ದಾರರಿಗೆ ಬಹಳಷ್ಟು ಖುಷಿಯಾಗಿದೆ.

e-kyc ಕಡ್ಡಾಯ

ಆಹಾರ ಇಲಾಖೆಯು ಈಗಾಗಲೇ ಫಲಾನುಭವಿಗಳಿಗೆ ‌e-kyc ಮಾಡಲು ಕಡ್ಡಾಯವಾಗಿ ಸೂಚನೆ ನೀಡಿದ್ದು, ರೇಷನ್ ಕಾರ್ಡ್ (Ration Card) ಜೊತೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಲಿಂಕ್ ಕಡ್ಡಾಯ ಮಾಡಿದೆ. ಒಂದುವೇಳೆ ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದೇ ಇದ್ದಲ್ಲಿ ನಿಮಗೆ ಸರಕಾರದಿಂದ ‌ ಯಾವುದೇ ಸೌಲಭ್ಯ ಗಳು ಕೂಡ ದೊರೆಯುದಿಲ್ಲ. ಇ-ಕೆವೈಸಿ ಮಾಡಿಸದೇ ಇರುವ ಫಲಾನುಭವಿಗಳು ಪಡಿತರ ಚೀಟಿ ಹಾಗೂ ಆಧಾರ್‌ ಕಾರ್ಡ್‌ (Aadhar Card) ನೊಂದಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಶೀಘ್ರ ಇ-ಕೆವೈಸಿ (e-KYC) ಮಾಡಿಸಲು ಇನ್ನೂ ಕೂಡ ಅವಕಾಶ ಇದೆ.

advertisement

ಗುಡ್ ನ್ಯೂಸ್ ಏನು?

ಅನ್ನಭಾಗ್ಯ ಯೋಜನೆ (Annabhagya Scheme) ಜಾರಿಯಾದ ಬಳಿಕ ರೇಷನ್‌ ಕಾರ್ಡ್‌ ವಿಚಾರವಾಗಿ ರಾಜ್ಯ ಸರ್ಕಾರ ಹಲವಾರು ರೀತಿಯ ಬದಲಾವಣೆಗಳನ್ನು ಮಾಡುತ್ತಲೆ ಇದ್ದು ಇದೀಗ ‌ಅನ್ನಭಾಗ್ಯದ ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡಲು ಮುಂದಾಗಿದೆ. ಪಡಿತರ ಪಡೆಯುವ ಸಂಧರ್ಭದಲ್ಲಿ ಕೆಲವರಿಗೆ ಥಂಭ್ ನೀಡಲು ಸಮಸ್ಯೆ ಆಗುತ್ತಿದ್ದು ನೆಟ್ ವರ್ಕ್ ಸಮಸ್ಯೆ ಯು ಉಂಟಾಗುತ್ತದೆ. ಇದೀಗ ಈ ಸ್ಮಾರ್ಟ್ ಕಾರ್ಡ್ (Smart Card) ನಿಂದ ಹಲವಾರು ರೀತಿಯಲ್ಲಿ ಉಪಯೋಗವಾಗಲಿದೆ.ಈಗಾಗಲೇ ಬಿಪಿಎಲ್‌ ಹಾಗೂ ಎಪಿಎಲ್‌ ಚೀಟಿದಾರರಿಗೆ ಇದನ್ನು ಶೀಘ್ರವಾಗಿ ವಿತರಣೆ ಮಾಡಲಾಗುವುದು ಎಂದು‌ ಆಹಾರ ಸಚಿವರು ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ ಹಣ

ಅನ್ನಭಾಗ್ಯ ಯೋಜನೆ ಮೂಲಕ‌ ಹೆಚ್ಚುವರಿ ಅಕ್ಕಿಯ ಬದಲಾಗಿ ಈಗ ಫಲಾನುಭವಿಗಳ ಖಾತೆಗೆ ಹಣ ಕೂಡ ಜಮೆ ಮಾಡುತ್ತಿದ್ದಾರೆ. ಈಗಾಗಲೇ ನವೆಂಬರ್ ತಿಂಗಳ ಹಣ ಇನ್ನಷ್ಟೆ ಜಮೆ ಯಾಗಬೇಕಿದ್ದು ಈ ತಿಂಗಳ 15 ರ ನಂತರ ಹಣ ಜಮೆಯಾಗಲಿದೆ. ಈಗಾಗಲೇ ಶೇಕಡಾ 90ರಷ್ಟು ಅಧಿಕ ಕಾರ್ಡ್‌ದಾರರಿಗೆ ಈಗಾಗಲೇ ಹಣ ತಲುಪಿದೆ. ಇನ್ನೂ 7 ಲಕ್ಷ ಕಾರ್ಡ್‌ದಾರರು ಬ್ಯಾಂಕ್‌ ಖಾತೆ ತೆರೆಯದಿರುವುದು,ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದು ಇತ್ಯಾದಿ ಕಾರಣದಿಂದ ಹಣ ಬಾರದೇ ಇರಲು ಸಮಸ್ಯೆ ಯಾಗಿದೆ.

advertisement

Leave A Reply

Your email address will not be published.