Karnataka Times
Trending Stories, Viral News, Gossips & Everything in Kannada

Investment Plan: ದಿನಕ್ಕೆ 150 ರೂಪಾಯಿಗಳನ್ನು ಉಳಿಸಿ 22 ಲಕ್ಷ ಆದಾಯ ಪಡೆಯುವ ಬೆಸ್ಟ್ ಸ್ಕೀಮ್ !

advertisement

ನಮ್ಮ ಭವಿಷ್ಯ ಸುರಕ್ಷಿತವಾಗಿ ಇರಬೇಕು ಎಂದಾದರೆ ಸೇವಿಂಗ್ಸ್ ಮಾಡುವುದು ಬಹಳ ಮುಖ್ಯ. ಪ್ರತಿ ತಿಂಗಳ ನಮ್ಮ ಸಂಬಳ ಅಥವಾ ಆದಾಯದಲ್ಲಿ ಒಂದು ನಿಗದಿತ ಮೊತ್ತವನ್ನು ಭವಿಷ್ಯದ ಅಗತ್ಯಗಳಿಗಾಗಿ ಎಂದು ಕೂಡಿಡುತ್ತಾ ಬಂದರೆ ಅದೇ ಮುಂದೆ ದೊಡ್ಡ ಮೊತ್ತವಾಗಿ ನಮ್ಮ ಅಗತ್ಯದ ಸಮಯದಲ್ಲಿ ನಮ್ಮ ನೆರವಿಗೆ ಬರುತ್ತದೆ.

ನೀವು ಆದಾಯ ಗಳಿಸಲು ಆರಂಭ ಮಾಡಿದ ದಿನದಿಂದ ಸೇವಿಂಗ್ಸ್ ನ ಪ್ರಖ್ಯಾತ ಫಾರ್ಮುಲಾ ಆದ 50-30-20 ನಿಯಮವನ್ನು ಪಾಲಿಸಿದರೆ ಇದು ಭವಿಷ್ಯದಲ್ಲಿ ಖಂಡಿತ ದೊಡ್ಡ ಮೊತ್ತವನ್ನು ನಿಮ್ಮ ಕೈಗೆ ಇಡುತ್ತದೆ. ನಮಗೆ ಬರುವ ಸಂಬಳ ಅಥವಾ ಆದಾಯದಲ್ಲಿ 50% ನಮ್ಮ ಮೂಲಭೂತ ಅಗತ್ಯಗಳಿಗಾಗಿ ಮೀಸಲಿಟ್ಟರೆ 30 ಶೇಕಡ ನಮ್ಮ ಇತರ ಅಗತ್ಯಗಳಿಗಾಗಿ ಹಾಗೂ 20 ಶೇಕಡಾ ಸೇವಿಂಗ್ಸ್ ಗಾಗಿ ಮೀಸಲಿಡಬೇಕು.

ಹೀಗೆ ಸೇವ್ ಮಾಡಬೇಕಾದರೆ ನಮಗೆ ಮುಂದೆ ಐದು ವರ್ಷಗಳಲ್ಲಿ ಅಥವಾ ಹತ್ತು ವರ್ಷಗಳಲ್ಲಿ ಯಾವುದೋ ಅಗತ್ಯ ಬರಲಿದೆ ಎಂಬ ಮುಂದಾಲೋಚನೆಯಿದ್ದಲ್ಲಿ ಅದಕ್ಕೆ ತಕ್ಕ ಹಾಗೆ ಉಳಿತಾಯ ಮಾಡಬಹುದು. ಐದು ವರ್ಷಗಳ ನಂತರ ಕಾರು ತೆಗೆದುಕೊಳ್ಳಬೇಕು ಅಥವಾ ಮನೆ ಕೊಂಡುಕೊಳ್ಳಲು ಡೌನ್ ಪೇಮೆಂಟ್ ಮಾಡಬೇಕು ಎಂದಾದಲ್ಲಿ ಇಂದಿನಿಂದಲೇ ಸೇವಿಂಗ್ಸ್ ಆರಂಭಿಸಿದರೆ ಅದು ಆ ಸಮಯದ ಹಣದ ಅಗತ್ಯವನ್ನು ಕಮ್ಮಿ ಮಾಡುತ್ತದೆ.

ಸಿಸ್ಟಮೆಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ – ಎಸ್.ಐ.ಪಿ.

advertisement

ಪ್ರತಿ ತಿಂಗಳು ಉಳಿತಾಯ ಮಾಡುವ ಆಯ್ಕೆಗಳಲ್ಲಿ ಎಸ್.ಐ.ಪಿ. ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಒಂದು ಉತ್ತಮ ಆಯ್ಕೆಯಾಗಿದೆ. ದಿನಕ್ಕೆ 150 ರೂಪಾಯಿಯಂತೆ ಸೇರಿಸಿದರೆ 15 ವರ್ಷಗಳಲ್ಲಿ ನಿಮ್ಮ ಕೈಯಲ್ಲಿ 22 ಲಕ್ಷ ಇರುತ್ತದೆ ಎಂದರೆ ನಂಬುತ್ತೀರಾ ? ನೀವು ನಂಬಲೇಬೇಕು. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್(Systematic Investment Plan) ಗಳಲ್ಲೂ ಹೈ ರಿಸ್ಕ್ (High Risk) ಲೋ ರಿಸ್ಕ್ (Low Risk) ಅಥವಾ ಮೀಡಿಯಂ ರಿಸ್ಕ್ (Medium Risk) ಎನ್ನುವ ಆಯ್ಕೆಗಳು ಇರುತ್ತವೆ. ನಮ್ಮ ಹಣದ ಅಗತ್ಯ ಹಾಗೂ ನಮ್ಮ ರಿಸ್ಕ್ ತೆಗೆದುಕೊಳ್ಳುವ ಕ್ಷಮತೆಯ ಆಧಾರದ ಮೇಲೆ ನಮಗೆ ಸರಿಹೊಂದುವ ಎಸ್ ಐ ಪಿ ಯನ್ನು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮ ಮಗ ಮುಂದಿನ ವರ್ಷ ಮೂರು ವರ್ಷದವನಾಗಿದ್ದಾನೆ ಎಂದುಕೊಳ್ಳಿ. ಅವನ 18ನೇ ವಯಸ್ಸಿಗೆ ಅವನ ಶಿಕ್ಷಣಕ್ಕಾಗಿ 20 ಲಕ್ಷ ರೂಪಾಯಿಗಳು ಬೇಕು ಎಂದಾದಲ್ಲಿ ನೀವು ಇಂದಿನಿಂದಲೇ ಹೂಡಿಕೆಯನ್ನು ಆರಂಭಿಸಬೇಕು. ನೀವು ದಿನಕ್ಕೆ 150 ರೂಪಾಯಿಗಳಂತೆ ಕೂಡಿಡುತ್ತಾ ಬಂದರೆ ಅದು ತಿಂಗಳಿಗೆ 4,500 ಸಾವಿರ ರೂಪಾಯಿ ಆಗುತ್ತದೆ ಅಂದರೆ ವರ್ಷಕ್ಕೆ 54,000 ಗಳನ್ನು ನೀವು ಸೇವ್ ಮಾಡಿದಂತೆ 15 ವರ್ಷ ಎಸ್.ಐ.ಪಿ. ಯಲ್ಲಿ ಇದೇ ರೀತಿ ಹೂಡಿಕೆ ಮಾಡುತ್ತಾ ಬಂದರೆ ನಿಮ್ಮ ಹೂಡಿಕೆಯ ಮೊತ್ತ 8,10,000 ಆಗಿರುತ್ತದೆ.

ಸಾಮಾನ್ಯವಾಗಿ ಇಷ್ಟು ದೀರ್ಘವಾದ ಅವಧಿಯ ಎಸ್.ಐ.ಪಿ. ಹೂಡಿಕೆಗಳು 12% ರಿಟರ್ನ್ ಅನ್ನು ಕೊಡುತ್ತವೆ. ಇದರ ಪ್ರಕಾರ ನಿಮ್ಮ ಹೂಡಿಕೆಗೆ ಸಿಗುವ ಲಾಭವು 14,60,592 ರೂಪಾಯಿಗಳು ಆಗಿರುತ್ತದೆ. ಇದರ ಜೊತೆಗೆ ನಿಮ್ಮ ಹೂಡಿಕೆ ಮೊತ್ತ ಆದ 8,10,000 ಸೇರಿಸಿದರೆ 15 ವರ್ಷಗಳ ನಂತರ ನಿಮ್ಮ ಬಳಿ 22,70,592 ರೂಪಾಯಿಗಳು ಇರುತ್ತವೆ. ಶೇರು ಮಾರುಕಟ್ಟೆ ಆಧಾರಿತ ಯಾವುದೇ ಹೂಡಿಕೆಯ ಆಯ್ಕೆಗಳಲ್ಲಿ ಹೂಡಿಕೆ ಮಾಡಬೇಕಾದರೆ ಅನುಭವ ಮತ್ತು ಅದರ ಬಗ್ಗೆ ಸರಿಯಾದ ಜ್ಞಾನ ಬೇಕಾಗುತ್ತದೆ. ಇಲ್ಲವಾದಲ್ಲಿ ಯಾರಾದರೂ ಸಲಹೆಗಾರರ ಬಳಿ ಸಲಹೆ ತೆಗೆದುಕೊಂಡು ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

advertisement

Leave A Reply

Your email address will not be published.