Karnataka Times
Trending Stories, Viral News, Gossips & Everything in Kannada

Gruha Lakshmi: ಈ ಜಿಲ್ಲೆಗಳಿಗೆ 4ನೇ ಕಂತಿನ ಗೃಹಲಕ್ಷ್ಮೀ ಹಣ ಮೊದಲು ಬಿಡುಗಡೆ, ಚೆಕ್ ಮಾಡಿಕೊಳ್ಳಿ.

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತನ್ನ ಪಂಚ ಗ್ಯಾರೆಂಟಿ ಯೋಜನೆ ಮೂಲಕ ಮಾನ್ಯತೆ ಪಡೆಯುತ್ತಿದೆ. ಶಕ್ತಿ ಯೋಜನೆ (Shakti Yojane) ಮೂಲಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಪ್ರವಾಸ, ಧಾರ್ಮಿಕ ಕ್ಷೇತ್ರ ಭೇಟಿ ಹಾಗೂ ನಿತ್ಯ ಕೆಲಸ ಕಾರ್ಯಗಳಿಗೂ ಸರಕಾರಿ ಬಸ್ ಅನ್ನು ಅವಲಂಬಿಸುತ್ತಿದ್ದಾರೆ. ಈ ಮೂಲಕ ಸರಕಾರಿ ಬಸ್ ಪ್ರಯಾಣಿಕರ ಸಂಖ್ಯೆ ಈ ಹಿಂದಿಗಿಂತಲೂ ಅಧಿಕ ಆಗಿದ್ದಾರೆ ಎಂದು ಹೇಳಬಹುದು. ಅದೇ ರೀತಿ ಮಹಿಳೆಯದ ಪರವಾದ ಮತ್ತೊಂದು ಯೋಜನೆ ಗೃಹಲಕ್ಷ್ಮೀ ಬಗ್ಗೆ ಕೂಡ ಅಪ್ಡೇಟ್ ಮಾಹಿತಿಯೊಂದು ಸಿಕ್ಕಿದೆ.

ರಾಜ್ಯದ ಮಹಿಳೆಯರಿಗೆ ಆರ್ಥಿಕ ಉತ್ತೇಜನ ನೀಡುವ ಗೃಹಲಕ್ಷ್ಮೀ ಯೋಜನೆಯು ಈಗಾಗಲೇ ಕಂತುಗಳಂತೆ ಹಣ ಬಿಡುಗಡೆ ಮಾಡಿದ್ದು ಮೊದಲ ಕಂತಿನಲ್ಲಿ ಹಣ ಬರದೇ ಇದ್ದ ಬಹುತೇಕರಿಗೆ ಎರಡು ಮೂರನೇ ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು ಆ ಬಳಿಕ ಈಗ ಬ್ಯಾಂಕಿನ ಮಾಹಿತಿ ಎಲ್ಲ ದಾಖಲಾತಿ ಸರಿ ಇದ್ದವರಿಗೆ ಹಣ ಮಂಜೂರಾಗುತ್ತಿದೆ ಇದೀಗ ಗೃಹಲಕ್ಷ್ಮೀ (Gruha Lakshmi) ಯೋಜನೆಯ ನಾಲ್ಕನೇ ಕಂತಿನ ಹಣ ಯಾವಾಗ ಬರುತ್ತೆ ಎಂದು ಕಾಯುವವರಿಗೆ ಅಪ್ಡೇಟಿಂಗ್ ಮಾಹಿತಿಯೊಂದು ದೊರೆತಿದೆ.

ಯಾವಾಗ ಈ ಬಾರಿ ಹಣ ಬರುತ್ತೇ?

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ಫಲಾನುಭವಿಗಳಿಗೆ ದೊರೆಯುವ ಎರಡು ಸಾವಿರ ಮೊತ್ತವೂ ಈ ಬಾರಿ ಯಾವಾಗ ಬರಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸರಕಾರದಿಂದ ನಾಲ್ಕನೇ ಕಂತಿನ ಹಣ ವರ್ಗಾವಣೆ ಆಗಿದ್ದು ಮೊದಲ ಹಂತದಲ್ಲಿ ಕೆಲ ಜಿಲ್ಲೆಗೆ, ಬಳಿಕ ಉಳಿದ ಜಿಲ್ಲೆಗೆ ಇದೇ (ಡಿಸೆಂಬರ್) ತಿಂಗಳಿನಂದೆ ಹಣ ಜಮೆ ಆಗಲಿದೆ. ಮೊದಲು ಹಣ ವರ್ಗಾವಣೆ ಆಗುವ ಜಿಲ್ಲೆಗಳು ಈ ಕೆಳಗಿನಂತಿವೆ.

advertisement

ಈ ಜಿಲ್ಲೆಗೆ ಮೊದಲು ಬರಲಿದೆ

ಈ ಬಾರಿ ಮೊದಲು ಕಂತಿನ ಹಣವು ಉತ್ತರ ಕನ್ನಡ, ಬೆಳಗಾವಿ, ದಾವಣಗೆರೆ, ಹಾಸನ, ಚಿತ್ರದುರ್ಗ, ಗದಗ, ಕೋಲಾರ,‌ಮಂಡ್ಯ, ಬಾಗಲಕೋಟೆ, ಬೆಂಗಳೂರು, ಮೈಸೂರು, ಬಿಜಾಪುರ, ಧಾರವಾಡ, ಕಲಬುರ್ಗಿ, ರಾಯಚೂರು ಈ ಭಾಗದಲ್ಲಿ ಮೊದಲು ಹಣ ಜಮೆ ಆಗಲಿದ್ದು ಫಲಾನುಭವಿಗಳಿಗೆ ಎರಡು ಸಾವಿರ ಮೊತ್ತ ಸಿಗಲಿದೆ.

ಇನ್ನು ಹಣ ಬಂದಿಲ್ಲ

ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ತಿಂಗಳಿಗೆ ಎರಡು ಸಾವಿರ ಮೊತ್ತ ಮನೆ ಹಿರಿಯ ಮಹಿಳೆಯರಿಗೆ ನೀಡುವ ಯೋಜನೆಯೂ ಈಗಾಗಲೇ ಮೂರು ಕಂತಿನ ಹಣ ಜಮೆ ಮಾಡಿದೆ. ಆದರೆ ಇದುವರೆಗೆ ಒಂದು ಕಂತಿನ ಹಣ ಬಾರದೇ ಇದ್ದವರು ಕೂಡ ಇದ್ದಾರೆ ಇದಕ್ಕೆ ಮುಖ್ಯ ಕಾರಣ ಬ್ಯಾಂಕ್ ಖಾತೆಯ ಸಮಸ್ಯೆ ಇರಬಹುದು ಇಲ್ಲವೆ ಆಧಾರ್ ಬ್ಯಾಂಕ್ ಖಾತೆ ಲಿಂಕ್ ಇಲ್ಲದ್ದು ಕೂಡ ಒಂದು ವಿಧವಾದ ಸಮಸ್ಯೆ ಆಗಿದೆ.

ಎಷ್ಟೋ ಬ್ಯಾಂಕ್ ಖಾತೆಗಳು ಸಕ್ರಿಯವಾಗಿಲ್ಲ ಹಾಗಿದ್ದಾಗ ಕೂಡ ಹಣ ಬರಲಾರದು. ಅದೇ ರೀತಿ ಕೆಲ ತಾಂತ್ರಿಕ ಸಮಸ್ಯೆಯಿಂದ ಕೂಡ ಹಣ ಬಂದಿಲ್ಲ. ಈಗಾಗಲೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಮೂಲಕ ಬ್ಯಾಂಕು ಸಮಸ್ಯೆ ಬಗ್ಗೆ ಆಯಾ ಮಹಿಳೆಯರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದ್ದು ಅನೇಕರು ಸಮಸ್ಯೆ ಬಗೆಹರಿಸಿ ಫಲಾನುಭವಿಗಳಾಗಿದ್ದಾರೆ.

advertisement

Leave A Reply

Your email address will not be published.