Karnataka Times
Trending Stories, Viral News, Gossips & Everything in Kannada

TVS Raider: ಒಂದು ಲಕ್ಷಗಿಂತ ಕಡಿಮೆ ಬೆಲೆಗೆ ಖರೀದಿಸಿ ಟಿವಿಎಸ್ ನ ಈ ಸ್ಪೋರ್ಟಿ ಲುಕ್ ಬೈಕ್, 67Km ಮೈಲೇಜ್!

advertisement

ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಬೇಡಿಕೆ ಭಾರತದಲ್ಲಿ ಯಾವತ್ತಿಗೂ ಕಡಿಮೆ ಆಗುವುದೇ ಇಲ್ಲ ಎನ್ನಬಹುದು. ಅದರ ಬದಲಾಗಿ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿಯಾಗಿದೆ ಎಂದೇ ಹೇಳಬಹುದು. ಪ್ರತಿವರ್ಷ ಸಾವಿರಾರು ಬೈಕ್ ಹಾಗೂ ಸ್ಕೂಟರ್ ಗಳು ಬೇರೆ ಬೇರೆ ಮೋಟಾರ್ ಕಂಪನಿಗಳಿಂದ ತಯಾರಿಸಲ್ಪಟ್ಟು ಮಾರುಕಟ್ಟೆಗೆ ಬಿಡುಗಡೆ ಆಗುತ್ತಿದೆ. ಹೀಗೆ ತರಾವರಿ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೈಕುಗಳು ಪೈಪೋಟಿ ಬೆಲೆಯಲ್ಲಿಯೂ ಕೂಡ ಲಭ್ಯ ಇದೆ.

ಸಾಕಷ್ಟು ಮೋಟಾರ್ ಕಂಪನಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೈಕ್ ತಯಾರಿಸುತ್ತಿದ್ದಾರೆ. ಮೊದಲು ನಾಲ್ಕು ಚಕ್ರದ ವಾಹನ ಅಥವಾ ಕಾರುಗಳಲ್ಲಿ ಲಭ್ಯವಾಗಿದ್ದ ಫೀಚರ್ ಹಾಗೂ ವೈಶಿಷ್ಟ್ಯತೆಗಳು ಬೈಕ್ಗಳಲ್ಲಿಯೂ ಸಿಗುತ್ತಿವೆ. ನಾವು ಇಷ್ಟೆಲ್ಲಾ ಪೀಠಿಕೆ ಹಾಕಿದ್ದು TVS ಒಂದು ಅದ್ಭುತ ಬೈಕ್ ಅನ್ನು ನಿಮಗೆ ಪರಿಚಯಿಸುವುದಕ್ಕಾಗಿ.

TVS Rider Bike:

 

 

ಟಿವಿಎಸ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿರುವ ಮೋಟಾರ್ ಕಂಪನಿ ಆಗಿದೆ. ಇದೀಗ ಟಿವಿಎಸ್ ರೈಡರ್ (TVS Raider) ಬೈಕ್ ಬಿಡುಗಡೆ ಮಾಡಿದ್ದು, ಸ್ಪೋರ್ಟಿ ಲುಕ್ ನೊಂದಿಗೆ, ಸುಧಾರಿತ ತಂತ್ರಜ್ಞಾನವನ್ನು ಆಧರಿಸಿ ತಯಾರಿಸಲ್ಪಟ್ಟ ಬೈಕ್ ಇದಾಗಿದೆ.

TVS Rider Engine:

advertisement

ಧೀರ್ಘ ಪ್ರಯಾಣಕ್ಕೆ ಉತ್ತಮ ಸವಾರಿ ಅನುಭವ ನೀಡುವ ಆಧುನಿಕ ವೈಶಿಷ್ಟ್ಯತೆಗಳನ್ನು ಈ ಬೈಕ್ ನಲ್ಲಿ ಕಾಣಬಹುದು. ಇನ್ನು ಎಂಜಿನ್ ಬಗ್ಗೆ ಹೇಳುವುದಾದರೆ, ಏರ್ ಮತ್ತು ಆಯಿಲ್ ಕೂಲ್ಡ್ ತಂತ್ರಜ್ಞಾನವನ್ನು ಬಳಸಲಾಗಿದೆ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7500rpm ನಲ್ಲಿ, 11.38 ಪಿ ಎಸ್ ಗರಿಷ್ಠ ಪವರ್ ಹಾಗೂ 6000 rpm ನಲ್ಲಿ 11.2 nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು ಬೈಕ್ನ ಉತ್ತಮ ಬ್ರೇಕಿಂಗ್ ಅನ್ನು ಉತ್ತೇಜಿಸುತ್ತದೆ. ಜೊತೆಗೆ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.

ಬಹಳ ಸ್ಪೋಟಿ ಲುಕ್ ಹೊಂದಿರುವ ಈ ಬೈಕ್ ಆಧುನಿಕ ಸಸ್ಪೆನ್ಷನ್ ಹೊಂದಿದ್ದು, 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಕೊಡಲಾಗಿದೆ.

TVS Rider Features:

 

 

ಟಿವಿಎಸ್ ಕಂಪನಿಯ ರೈಡರ್ (TVS Raider) ಬೈಕ್ ಲಾಂಗ್ ರೈಡ್ ಮಾಡಲು ಬಯಸುವವರಿಗೆ ಹೇಳಿ ಮಾಡಿಸಿದಂತೆ ಸಿದ್ಧಪಡಿಸಲಾಗಿದೆ. ಬ್ಲೂಟೂತ್ ಸಂಪರ್ಕ ಜೊತೆಗೆ ಡಿಜಿಟಲ್ ಸ್ಪೀಡೋಮೀಟರ್ ನ್ಯಾವಿಗೇಶನ್ ಹಾಗೂ ಡಿಜಿಟಲ್ ಟ್ರಿಪ್ ಮೀಟರ್ ಮೊದಲಾದ ಆಧುನಿಕ ಫೀಚರ್ ಗಳನ್ನು ಕಾಣಬಹುದು.

TVS Rider Mileage and Price:

ಹೊಸದಾಗಿ ವಿಶೇಷ ಗಮನವಹಿಸಿ ತಯಾರಿಸಲಾದ ಈ ರೈಡರ್ ಬೈಕ್ ನ ಮೈಲೇಜ್, ಪ್ರತಿ ಲೀಟರ್ ಪೆಟ್ರೋಲ್ ಗೆ 67 ಕಿಲೋಮೀಟರ್ ವ್ಯಾಪ್ತಿ ನೀಡುತ್ತದೆ. ರೈಡರ್ ಬೈಕ್ ನ ಆರಂಭಿಕ ಎಕ್ಸ್ ಶೋರೂಮ್ ಬೆಲೆ 95,219 ರೂಪಾಯಿಗಳು. ಇದರ ಉನ್ನತ ರೂಪಾಂತರ 1.3 ಲಕ್ಷ ರೂಪಾಯಿಗಳವರೆಗೆ ಆಗಬಹುದು.

advertisement

Leave A Reply

Your email address will not be published.