Karnataka Times
Trending Stories, Viral News, Gossips & Everything in Kannada

Lakhpati Didi Scheme: 9 ಕೋಟಿ ಸ್ತ್ರೀಯರಿಗೆ ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ 1 ಲಕ್ಷ ರೂಪಾಯಿ ಸಹಾಯಧನ!

advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಗುರುವಾರ ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಹಲವು ದೊಡ್ಡ ಘೋಷಣೆ ಮಾಡಿದ್ದಾರೆ ಈ ವೇಳೆ ಮಹಿಳೆಯರಿಗಾಗಿ ‘ಲಕ್​ಪತಿ ದೀದಿ ಯೋಜನೆ’ಯನ್ನು ಪರಿಚಯಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ.

What is Lakhpati Didi Scheme..?

 

 

advertisement

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಸರ್ಕಾರ ಲಕ್​ಪತಿ ದೀದಿ ಯೋಜನೆ (Lakhpati Didi Scheme) ಯನ್ನು ಆರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಮುಂದೆ ತರುವುದು ಈ ಯೋಜನೆಯ ಉದ್ದೇಶ. ಲಕ್​ಪತಿ ಯೋಜನೆ ಮೂಲಕ 9 ಕೋಟಿ ಮಹಿಳೆಯರ ಲಕ್ ಬದಲಾಗಲಿದೆ ಅನ್ನೋದು ಕೇಂದ್ರದ ವಾದ. ಈ ಮೂಲಕ ಮಹಿಳೆಯರನ್ನು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿ ಮಾಡೋದಾಗಿದೆ.

ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.

Lakhpati Didi Scheme Benefits:

  • ಆರ್ಥಿಕ ಜ್ಞಾನ ಹೊಂದಿರುವ ಮಹಿಳೆಯರನ್ನು ಬಲಪಡಿಸಲು ಸಮಗ್ರ ಆರ್ಥಿಕ ಸಾಕ್ಷರತಾ ಕಾರ್ಯಾಗಾರ ನಡೆಸಲಾಗುತ್ತಿದೆ.
  • ಕಾರ್ಯಾಗಾರದಲ್ಲಿ ಬಜೆಟ್, ಉಳಿತಾಯ, ಹೂಡಿಕೆಯಂತಹ ವಿಷಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ
  • ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರೋತ್ಸಾಹಿಸಲಾಗುತ್ತದೆ
  • ಮಹಿಳೆಯರಿಗೆ ಕಿರುಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗೆ ಗಮನ ನೀಡಲಾಗುತ್ತದೆ
  • ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ
  • ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಲಾಗಿದೆ. ಇದಕ್ಕಾಗಿ ಕೈಗೆಟುಕುವ ದರದಲ್ಲಿ ವಿಮಾ ಸೌಲಭ್ಯ
  • ಪರಿಚಯಿಸಲಾಗುತ್ತದೆ. ಇದರಿಂದ ಅವರ ಕುಟುಂಬದ ಭದ್ರತೆಯೂ ಹೆಚ್ಚುತ್ತದೆ.
  • ಮಹಿಳೆಯರಿಗೆ ಡಿಜಿಟಲ್ ಬ್ಯಾಂಕಿಂಗ್ ಸರ್ವೀಸ್, ಮೊಬೈಲ್ ವ್ಯಾಲೆಟ್ಸ್​ ಮತ್ತು ಪಾವತಿಗಳಿಗಾಗಿ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಪ್ರೋತ್ಸಾಹ ನೀಡುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತದೆ.

advertisement

Leave A Reply

Your email address will not be published.