Karnataka Times
Trending Stories, Viral News, Gossips & Everything in Kannada

RBI: 2000 ರೂಪಾಯಿ ಮುಖಬೆಲೆಯ ನೋಟಿನ ಬಗ್ಗೆ ಮಹತ್ವದ ಮಾಹಿತಿ ಹೊರಹಾಕಿದ ಆರ್ ಬಿ ಐ!

advertisement

ಕೇಂದ್ರ ಸರಕಾರ ನೂತನವಾಗಿ ನಿಯಮ ಜಾರಿಗೆ ತಂದಾಗ ಮೊದಲ ಮೊದಲು ಆ ನಿಯಮದ ಬಗ್ಗೆ ಅನೇಕ ಗೊಂದಲ ನಿರ್ಮಾಣ ಆದರೂ ಕಾಲ ಕ್ರಮೇಣ ಅಂತಹ ನಿಯಮಕ್ಕೆ ನಾವು ಒಗ್ಗಿಕೊಂಡಿರುವೆವು. ಅದೇ ರೀತಿ ಭಾರತೀಯ ರಾಷ್ಟ್ರೀಯ ಬ್ಯಾಂಕು ಕೇಂದ್ರ ಸರಕಾರದ ಸಹಭಾಗಿತ್ವದೊಂದಿಗೆ ಅನೇಕ ನೀತಿ ನಿರ್ಬಂಧ ಪರಿಚಯಿಸಿದೆ. ಅಂತಹ ನಿಯಮದಲ್ಲಿ ಎರಡು ಸಾವಿರ ಮುಖಬೆಲೆಯ ನೋಟು ಕೂಡ ಕಾಣಬಹುದು. ಮೊದ ಮೊದಲು ಎರಡು ಸಾವಿರ ಮುಖ ಬೆಲೆಯ ನೋಟು ಚಾಲ್ತಿಗೆ ಬಂದಾಗ ಅದರಲ್ಲಿ ಚಿಪ್ ಇದೆ. ಅಕ್ರಮ ಹಣ ಸಂಗ್ರಹ ಮಾಡಲಾಗದು ಇನ್ನೂ ಅನೇಕ ಊಹಾ ಪೂಹೆ ಹರಿದಾಡಿತ್ತು. ಆದರೆ ಕಾಲ ಕ್ರಮೇಣ ಈಗ ಎರಡು ಸಾವಿರ ಮುಖ ಬೆಲೆಯ ನೋಟನ್ನು ಅಮಾನೀಕರಣ ಮಾಡಲಾಗಿದೆ. ಈ ಬಗ್ಗೆವಿಶೇಷ ಮಾಹಿತಿ ಇಲ್ಲಿದೆ.

ಶಾಕಿಂಗ್ ಸುದ್ದಿ:

 

 

ಎರಡು ಸಾವಿರ ಮುಖಬೆಲೆಯ ನೋಟನ್ನು ಸಾರ್ವಜನಿಕರು ಬಳಸುವಂತಿಲ್ಲ ಎಂದು ಹೇಳಿತ್ತು. ಮೇ 19, 2023ರಂದು RBI ಬ್ಯಾಂಕು ಚಲಾವಣೆ ನೋಟು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದ್ದು ಬಳಿಕ ಸೆಪ್ಟೆಂಬರ್ 30, 2023ರ ಒಳಗಾಗಿ ಸರಕಾರಿ ಕಚೇರಿ ಇಲಾಖೆ, ಬ್ಯಾಂಕಿನಲ್ಲಿ ನೋಟು ಬದಲಾವಣೆಗೆ ಅವಕಾಶ ನೀಡಿತ್ತು ಹಾಗಿದ್ದರೂ ಇದುವರೆಗೆ 97.5% ನಷ್ಟು ಮಾತ್ರವೇ 2 ಸಾವಿರ ರೂಪಾಯಿ ನೋಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. 8,897ಕೋಟಿ ರೂಪಾಯಿ ಹಣ ಇನ್ನೂ ಕೂಡ ಸಾರ್ವಜನಿಕರ ಬಳಿಯಲ್ಲೇ ಇದೆ ಶಾಕಿಂಗ್ ಸುದ್ದಿಯೊಂದರ ಬಗ್ಗೆ ಕೇಂದ್ರ ಬ್ಯಾಂಕ್ ತಿಳಿಸಿದ್ದು ಸದ್ಯ ಈ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.

advertisement

ಈ ಹಿಂದಿನ ಲೆಕ್ಕಾಚಾರ:

ಈ ಹಿಂದಿನ ಅವಧಿಯಲ್ಲಿ ಮೇ 19, 2023ರಂದು ನೋಟುಗಳನ್ನು ಹಿಂತೆಗೆದು ಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಆಗ 3.56ಲಕ್ಷ ಕೋಟಿ ರೂಪಾಯಿಯಷ್ಟು ಚಲಾವಣೆಯಲ್ಲಿ ಇತ್ತು. ಬಳಿಕ ಅಧಿಕ ನೋಟು ಸಂಗ್ರಹ ಮಾಡಿದ್ದವರು ಅಕ್ರಮ ವ್ಯವಹಾರ , ಬೇರೆ ಮಾರ್ಗದ ಮೂಲಕ ಹಣ ಬದಲಾವಣೆಗೆ ಪ್ರಯತ್ನ ಪಟ್ಟಿದ್ದು ಸಹ ಇದೇ ಸಂದರ್ಭದಲ್ಲಿ ತಿಳಿದು ಬಂದಿದೆ. 2023ರ ಮೇ 19ರ ವೇಳೆಗೆ ಎರಡು ಸಾವಿರ ಮುಖ ಬೆಲೆಯ ನೋಟು ಕಾನೂನು ಬದ್ಧವಾಗಿ ಅಂಚೆ ಸೇವೆ, ಸಾರಿಗೆ ಸಂಪರ್ಕ ಇತರ ವ್ಯವಸ್ಥೆಗೆ ಬಳಸಿದ್ದ ಸೇವಾ ಶುಲ್ಕಕ್ಕೆ ಈ ನೋಟು ಬಳಸಬಹುದಾಗಿತ್ತು ಹೀಗೆ ಜನರ ಬಳಿ ಇದ್ದ ಮೊತ್ತ ಆರ್ ಬಿಐ ವಾಪಾಸ್ಸು ಪಡೆಯುವ ಕಾರ್ಯ ವೈಖರಿಗೆ ಮುಂದಾಗಿದೆ.

ನೋಟು ರದ್ದಾಗಲಿಲ್ಲ:

ಹೀಗೆ ಸಂಗ್ರಹಿತವಾದ ಮೊತ್ತವೇ 2024ರಂದು ವ್ಯವಹಾರದ ಮುಕ್ತಾಯದ ವೇಳೆಗೆ 8,897ಕೋಟಿ ರೂಪಾಯಿ ಆಗಿದೆ. ಹಾಗಿದ್ದರೂ ಇನ್ನೂ ಕೂಡ ಜನರ ಬಳಿ ಉಳಿದ ಮೊತ್ತವಿದೆ ಎಂಬ ಕಾರಣಕ್ಕೆ ಅಕ್ಟೋಬರ್ ವರೆಗೆ ನೋಟು ವಾಪಾಸ್ಸು ನೀಎಲು ಸಹ ಅನುಮತಿಸಲಾಗಿತ್ತು ಬಳಿಕ ಅಧಿಕ ಪ್ರಮಾಣದ ನೋಟು ವಾಪಾಸ್ಸು ಪಡೆಯುವ ಗಡುವನ್ನು ನಿಲ್ಲಿಸಿದ್ದರೂ ಈಗಲೂ ನೀವು ನಿಮ್ಮ ಬಳಿ ಎರಡು ಸಾವಿರ ಮುಖ ಬೆಲೆಯ ನೋಟು ಇದ್ದರೆ ಅದನ್ನು ವಾಪಾಸ್ಸು ಮಾಡಲು ಒಂದು ಅವಕಾಶ ನೀಡಲಾಗಿದೆ.

ನೋಟು ಅಯಾನೀಕರಣ ಆಗಿದೇಯೇ ಹೊರತು ರದ್ದಾಗಲಿಲ್ಲ ಹಾಗಾಗಿ ಈಗಲೂ ನಿಮ್ಮ ಬಳಿ ಎರಡು ಸಾವಿರ ಮುಖ ಬೆಲೆಯ ನೋಟಿದ್ದರೆ ಅದನ್ನು ವಿನಿಮಯ ಮಾಡಿಕೊಳ್ಳಬಹುದು. ನೀವು ಅಂಚೆ ಕಚೇರಿಗೆ ನೋಟು ನೀಡುವ ಮೂಲಕ RBI ಗೆ ನೋಟಿನ ವಿನಿಮಯ ಮಾಡಿಕೊಳ್ಳಬಹುದು. ಅಂದರೆ ಅಂಚೆ ಸೇವೆಗಳಾದ ವಿಮೆ, ಆರ್ಡಿ ಇತ್ಯಾದಿಗಳ ಸೇವೆ ಬಳಸುವಾಗ 2ಸಾವಿರ ಮುಖ ಬೆಲೆಯ ನೋಟು ಬಳಸಬೇಕು. ಒಂದು ವೇಳೆ ಯಾವುದೇ ವಿಧವಾದ ಸೇವೆ ಬೇಡ ಹಣ ಮಾತ್ರ ಬೇಕೆಂದಾದರೆ ಕೆಲ ಅಗತ್ಯ ದಾಖಲೆಯ ಜೊತೆಗೆ ಆರ್ ಬಿಐ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಫಾರಂ ಅನ್ನು ಡೌನ್ ಲೋಡ್ ಮಾಡಿ ಅದನ್ನು ಭರ್ತಿ ಮಾಡಿ ನೀವು ವಿನಿಮಯ ಮಾಡಬೇಕೆಂದಿದ್ದ ಎರಡು ಸಾವಿರ ಮುಖ ಬೆಲೆಯ ನೋಟು ಮತ್ತು ನಿಮ್ಮ ಬ್ಯಾಂಕ್ ಖಾತೆ ವಿವರದ ಫಾರ್ಮ್ ಅನ್ನು ಆರ್ ಬಿಐ ಕಚೇರಿಗಳಿಗೆ ನೀಡಿದರೆ ನಿಮ್ಮ ಬ್ಯಾಂಕಿಗೆ ನೀವು ನೀಡಿದ್ದ ಮೊತ್ತ ಜಮೆ ಆಗಲಿದೆ.

advertisement

Leave A Reply

Your email address will not be published.