Karnataka Times
Trending Stories, Viral News, Gossips & Everything in Kannada

Drought Relief Money: ಈ ರೀತಿಯ ಬ್ಯಾಂಕ್ ಖಾತೆಗಳಿಗೆ ಮೊದಲು ಜಮೆ ಆಗಲಿದೆ ಬರ ಪರಿಹಾರದ ಹಣ! ನಿಯಮ ಬದಲು

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.‌ಈ ಭಾರಿ ರೈತರಿಗಂತೂ ಕೃಷಿಯಲ್ಲಿ ಬಹಳಷ್ಟು ನಷ್ಟವಾಗಿದ್ದು ರೈತರಿಗೆ ಆರ್ಥಿಕ ಸಮಸ್ಯೆ ಕೂಡ ಉಂಟಾಗಿದೆ. ಹಾಗಾಗಿ ರೈತರು ಬೆಳೆ ವಿಮೆ ಮೊತ್ತ ‌ಒದಗಿಸಬೇಕೆಂದು ಮನವಿ ಮಾಡಿದ್ದರು. ಇದೀಗ ರಾಜ್ಯ ಸರಕಾರ ಈ ಬಗ್ಗೆ ಗುಡ್ ನ್ಯೂಸ್ ನೀಡಿದ್ದು ರೈತರು ಈ ವಿಚಾರ ತಿಳಿಯಲೇ ಬೇಕು.

ಬೆಳೆ ಪರಿಹಾರ ನಿಗಧಿ:

ಬೆಳೆ ಹಾನಿಗೆ ಸರಕಾರದಿಂದ ಬರ ಪರಿಹಾರವನ್ನು ನೀಡಲು‌ ಹಾನಿಯಾದ ಹೆಕ್ಟೇರ್ ಭೂ ಪ್ರದೇಶದ ಆಧಾರದ ಮೇಲೆ ನಿಗದಿ ಪಡಿಸಿದ್ದು NDRF ನ ಮಾರ್ಗ ಸೂಚನೆ ಯಂತೆ ಬೆಳೆ ಹಾನಿ ಪರಿಹಾರದ ಮಾರ್ಗ ಸೂಚಿಯ ಅನ್ವಯವೇ ರೈತರಿಗೆ ಬೆಳೆ ಹಾನಿ ಪರಿಹಾರ ಮೊತ್ತ (Drought Relief Money) ನೀಡಲಾಗುತ್ತದೆ.

ಮೊದಲ ಕಂತಿನ ಹಣ ಕೆಲವು ರೈತರಿಗೆ ಬಿಡುಗಡೆ:

 

Image Source: NDTV

 

ರಾಜ್ಯದ ಕೆಲ ಭಾಗದಲ್ಲಿ ಈಗಾಗಲೇ ರೈತರ ಖಾತೆಗೆ ಹಣ ಜಮೆ ಯಾಗಿದೆ.‌ ಕನಿಷ್ಠ ಮೊತ್ತ 2000 ರೂ ಮೊತ್ತ‌ ಕೆಲವು ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಮೇ 2ರಿಂದ 40,000 ಕ್ಕೂ ಮಿಕ್ಕಿದ್ದ ರೈತರಿಗೆ Input Subsidy ನೀಡಲು ಈಗಾಗಲೇ ಅನುಮೋದನೆ ನೀಡಲಾಗಿದೆ.

advertisement

ಕೇಂದ್ರದಿಂದ ಬಿಡುಗಡೆ?

ಬರದಿಂದ ನಷ್ಟ ಉಂಟಾದ ರೈತರಿಗೆ ಸಹಾಯ ಹಸ್ತ ನೀಡಲು ಸರಕಾರ ಮುಂದಾಗಿದ್ದು ಕೇಂದ್ರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣ (Drought Relief Money) ದಲ್ಲಿ 2,425 ಕೋಟಿ ರು. ಹಣವನ್ನು 27.38 ಲಕ್ಷ ರೈತರಿಗೆ ‌ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಸಿದ್ದತೆ ‌ನಡೆಸಿದೆ.ಇನ್ನು ಐದು ದಿನದ ಒಳಗೆ ಎಲ್ಲ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತ ಜಮೆಯಾಗಲಿದೆ ಎಂದು ಕಂದಾಯ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಧಾರ್ ಜೋಡಣೆ ಯಾಗಿರಬೇಕು:

ಈಗಾಗಲೇ ರೈತರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದ್ದು ಎರಡು ಮೂರು ದಿನದಲ್ಲಿ ಎಲ್ಲರಿಗೂ ಹಣ ತಲುಪಲಿದೆ ಎಂದು ಸಚಿವರು ಹೇಳಿದ್ದಾರೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನ ಬಿಡುಗಡೆಯಾದ ನಂತರ SDRF ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಹಣವನ್ನು ಅರ್ಹತೆಯಿರುವ ರೈತರಿಗೆ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.

ಸಹಾಯವಾಣಿ ತೆರೆಯಲಾಗಿದೆ:

ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ನ ಮಾರ್ಗಸೂಚಿಯಂತೆ ಕರ್ನಾಟಕಕ್ಕೆ ಬರ ಪರಿಹಾರವನ್ನು ಬಿಡುಗಡೆ ಮಾಡಲಿದ್ದು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿಗಳನ್ನು ತೆರೆಯಲಾಗಿದ್ದು ದೂರುಗಳು‌ಇದ್ದಲ್ಲಿ ರೈತರು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಲ್ಲಿಸಿ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.