Karnataka Times
Trending Stories, Viral News, Gossips & Everything in Kannada

RBI: ಬೈಕು, ಕಾರು ಗಳ EMI ಕಟ್ಟದಿದ್ದವರಿಗೆ ಸಿಹಿಸುದ್ದಿ! ಬ್ಯಾಂಕ್ ಗಳಿಗೆ ಅಘಾತ ಕೊಟ್ಟ ರಿಸರ್ವ್ ಬ್ಯಾಂಕ್

advertisement

ವಾಹನದ ಮೇಲಿನ ಪೂರ್ಣ ಹಣವನ್ನು ಪಾವತಿ ಮಾಡಿ ಅದನ್ನು ಖರೀದಿಸಲಾಗದ ಸಾಮಾನ್ಯ ನಾಗರಿಕರು ಲೋನ್ ಮೇಲೆ ಬೈಕ್ ಅಥವಾ ಕಾರ್ ಗಳನ್ನು ಖರೀದಿಸಿ ಪ್ರತಿ ತಿಂಗಳು ಇಎಂಐ ಹಣವನ್ನು ಪಾವತಿ ಮಾಡುತ್ತಿರುತ್ತಾರೆ. ಆದರೆ ಸಾಲಗಾರರು ಒಂದೆರಡು ತಿಂಗಳು ಹಣವನ್ನು ಕಟ್ಟಲು ಸಾಧ್ಯವಾಗದೆ ಹೋದಲ್ಲಿ ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆಗಳು (Bank and Financial Institution) ತಮ್ಮ ಏಜೆಂಟ್ ಗಳನ್ನು ಕಳುಹಿಸಿ ವಾಹನವನ್ನು ಜಪ್ತಿ ಮಾಡುವಂತೆ ಸೂಚನೆ ನೀಡಿರುತ್ತಾರೆ.

ಆದರೆ RBI ಹೊಸ ನಿಯಮದ (RBI New Rules) ಪ್ರಕಾರ ಇನ್ನು ಮುಂದೆ ಯಾವುದೇ ಕಾರಣಕ್ಕೂ ವಾಹನವನ್ನು ಜಪ್ತಿ ಮಾಡುವ ಹಾಗಿಲ್ಲ. ಅಪ್ಪಿ ತಪ್ಪಿ ಬ್ಯಾಂಕಿನ ಸಿಬ್ಬಂದಿಗಳು ಈ ಕೆಲಸ ಮಾಡಿದ್ರೆ ಅವರ ಮೇಲೆ ಕಾನೂನು ಕ್ರಮ ಕೈ ತೆಗೆದುಕೊಳ್ಳಲಾಗುತ್ತದೆ.

ಬ್ಯಾಂಕ್ ಸಿಬ್ಬಂದಿಗಳು ನಿಮ್ಮ ವಾಹನವನ್ನು ಜಪ್ತಿ ಮಾಡಿದರೆ ಕೇಸ್ ಹಾಕಿ:

 

Image Source: Hindustan Times

 

advertisement

ವಾಹನ ಖರೀದಿ ಮಾಡಲು ಆರ್ಥಿಕ ಬಿಕಟ್ಟಿನಲ್ಲಿರುವ ಗ್ರಾಹಕರಿಗೆ ಇಂತಹ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಲೋನ್ ನೀಡುವ ಮೂಲಕ ಸಹಾಯ ಮಾಡುತ್ತದೆ. ಆದರೆ ವಾಹನದ ಮೇಲಿನ ಲೋನ್ನನ್ನು ಸರಿಯಾದ ಅವಧಿಯೊಳಗೆ ಮರುಪಾವತಿಸಲು ಸಾಧ್ಯವಾಗದಿದ್ದಲ್ಲಿ ಬ್ಯಾಂಕುಗಳು ಉಳಿದ ಮೊತ್ತವನ್ನು ಹಿಂಪಡೆಯಲು ವಸೂಲಾತಿ ಏಜೆಂಟ್ (Recovery Agent) ಗಳನ್ನು ಮನೆಯ ಬಾಗಿಲಿಗೆ ಕಳುಹಿಸುತ್ತಾರೆ. ಇಂತಹ ಏಜೆಂಟ್ಗಳು ಸಾಲಗಾರನ ಜೊತೆ RBI ನಿಯಮದ ವಿರುದ್ಧವಾಗಿ ನಡೆದುಕೊಂಡರೆ ಅಥವಾ ವಾಹನವನ್ನು ಜಪ್ತಿ ಮಾಡಲು ಪ್ರಯತ್ನಿಸಿದರೆ ಅವರ ಮೇಲೆ ಕೇಸ್ ಹಾಕಬಹುದು.

ಲೋನ್ ಪಾವತಿ ಮಾಡದೆ ಹೋದರೆ ವಾಹನವನ್ನು ಜಪ್ತಿ ಮಾಡುವಂತಿಲ್ಲ:

ಸಾಲಗಾರನು ತನ್ನ ವಾಹನದ ಮೇಲೆ ಪಡೆದುಕೊಂಡಿರುವ ಲೋನ್ (Loan) ಹಣವನ್ನು ವಾಪಸ್ ನೀಡಲು ಸಾಧ್ಯವಾಗದೆ ಹೋದಾಗ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ವಸುಲಾತಿ ಏಜೆಂಟ್ ಗಳನ್ನು ಕಳುಹಿಸಿ ಹಣವನ್ನು ವಸೂಲಿ ಮಾಡುವ ಪ್ರಯತ್ನಕ್ಕೆ ಮುಂದಾಗುತ್ತಾರೆ.

ನ್ಯಾಯಾಂಗವಲ್ಲದ ಮಾರ್ಗಗಳ ಮೂಲಕ ಬ್ಯಾಂಕ್ ವತಿಯಿಂದ ಬಂದ ವಸೂಲಾತಿ ಏಜೆಂಟ್ ಗಳು ನಿಮ್ಮ ಬಳಿ ತಪ್ಪಾಗಿ ನಡೆದುಕೊಂಡು ಹಣ ವಸೂಲಿ ಮಾಡಲು ಅಥವಾ ನಿಮ್ಮ ವಾಹನವನ್ನು ಜಪ್ತಿ ಮಾಡಲು ಮುಂದಾದರೆ ನೀವು ಅವರ ವಿರುದ್ಧ ದೂರು ದಾಖಲಿಸಬಹುದು. ನಿಮ್ಮ FIR ಅನ್ವಯ ಕೂಡಲೇ ಅವರ ಮೇಲೆ ಕ್ರಮ ಕೈ ತೆಗೆದುಕೊಳ್ಳಲಾಗುತ್ತದೆ ಹಾಗೂ ಐದು ಲಕ್ಷ ದಂಡವನ್ನು ವಿಧಿಸುತ್ತಾರೆ.

advertisement

Leave A Reply

Your email address will not be published.