Karnataka Times
Trending Stories, Viral News, Gossips & Everything in Kannada

RBI: ದೇಶದ ಯಾವುದೇ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಸಿಹಿಸುದ್ದಿ! RBI ಹೊಸ ರೂಲ್ಸ್

advertisement

What is the minimum balance in Savings Account RBI: ಸ್ನೇಹಿತರೆ, ಸಾಮಾನ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಲವು ದಿನಗಳ ಕಾಲ ಮಿನಿಮಮ್ ಬ್ಯಾಲೆನ್ಸ್ ಇರಿಸದೆ ಹೋದರೆ ಅದು ಮುಂದಿನ ದಿನಗಳಲ್ಲಿ ಮೈನಸ್ ಬ್ಯಾಲೆನ್ಸ್(negative or minus balance) ತೋರುತ್ತದೆ. ಇದನ್ನು ಇನ್ನಷ್ಟು ದಿನಗಳ ಕಾಲ ಹಾಗೆ ಬಿಟ್ಟರೆ ಬ್ಯಾಂಕ್ ವತಿಯಿಂದ ಅದಕ್ಕೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಹಾಗೂ ಕೆಲವೊಮ್ಮೆ ನಿಮ್ಮ ಬ್ಯಾಂಕ್ ಖಾತೆಯನ್ನು ಮುಚ್ಚಬಹುದು. ಅಂತಹ ಸಂದರ್ಭದಲ್ಲಿ ನಾವು ಮಾಡಬೇಕಾದ ಮೊದಲ ಕೆಲಸವೇನು? ಹೆಚ್ಚಿನ ಶುಲ್ಕ ಕಟ್ಟದೆ ನಿಮ್ಮ ಮೈನಸ್ ಬ್ಯಾಲೆನ್ಸ್ ಅಕೌಂಟನ್ನು ಸರಿ ಮಾಡಿಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಮೈನಸ್ ಬ್ಯಾಂಕ್ ಬ್ಯಾಲೆನ್ಸ್ ಎಂದರೇನು?

ಸಾಮಾನ್ಯವಾಗಿ ನಿಮ್ಮ ಉಳಿತಾಯ ಖಾತೆಯ ಬಾಕಿ ಮೊತ್ತ ಸೊನ್ನೇ ಗಿಂತ ಕಡಿಮೆಯಾದರೆ ಮೈನಸ್ ಬಾಕಿಯನ್ನು ತೋರುತ್ತದೆ ಮತ್ತು ಕೆಲವೊಮ್ಮೆ ನಿಮ್ಮ ಖಾತೆಯಲ್ಲಿ ಇರುವಂತಹ ಹಣಕ್ಕಿಂತ ಹೆಚ್ಚಿನ ಹಣವನ್ನು ನೀವು ಪಾವತಿ ಮಾಡಲು ಪ್ರಯತ್ನಿಸಿದರೆ ಆಗ ಬ್ಯಾಂಕಿನವರು ನಿಮ್ಮ ಲೇವಾದೇವಿ(transaction)ಯನ್ನು ಪೂರ್ಣಗೊಳಿಸಿ, ಖಾತೆಯನ್ನು ಮೈನಸ್ ಮಾಡಿ ಬಿಡುತ್ತಾರೆ.

What is the minimum balance in Savings Account RBI?What is the minimum bank balance rule?
Which bank has 1000 minimum balance?
What is the new RBI rule for negative balance?
Image Source: Times Now

advertisement

ಖಾತೆಯಲ್ಲಿ ಮೈನಸ್ ಬ್ಯಾಲೆನ್ಸ್ ತೋರುವುದು ಯಾಕೆ?

•ಈಗಾಗಲೇ ತಿಳಿಸಿದ ಹಾಗೆ ನಿಮ್ಮ ಖಾತೆಯಲ್ಲಿ ಇರುವಂತಹ ಬಾಕಿ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿ ಮಾಡಲು ಬಯಸಿದರೆ ಅಂತಹ ಸಮಯದಲ್ಲಿ ನಿಮ್ಮ ವರ್ಗಾವಣೆ ಪೂರ್ಣಗೊಂಡು ಬ್ಯಾಲೆನ್ಸ್ ಮೈನಸ್ ಆಗುತ್ತದೆ.
•ಬ್ಯಾಂಕ್ ನವರು ಡೆಬಿಟ್ ಕಾರ್ಡ್(debit card) ಹಾಗೂ ಟ್ರಾನ್ಸ್ಯಾಕ್ಷನ್ ಚಾರ್ಜಸ್(transaction charges) ಗಳನ್ನು ಹಾಕಿದಾಗ, ಅದರ ಶುಲ್ಕವನ್ನು ಕಟ್ಟುವ ಹಣ ನಿಮ್ಮ ಬಳಿ ಇಲ್ಲದೆ ಹೋದರೆ ಅದು ಮೈನಸ್ ಬಾಕಿ ಮೊತ್ತ ತೋರುತ್ತದೆ.
•ಮಿನಿಮಮ್ ಬಾಕಿ(minimum balance) ಮೊತ್ತವನ್ನು ಖಾತೆಯಲ್ಲಿ ಇರಿಸದೆ ಹೋದರು ಕೂಡ ನಿಮ್ಮ ಬ್ಯಾಲೆನ್ಸ್ ಮೈನಸ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

What is the minimum balance in Savings Account RBI?What is the minimum bank balance rule?
Which bank has 1000 minimum balance?
What is the new RBI rule for negative balance?
Image Source: Times Now

ಬ್ಯಾಂಕ್ ಬ್ಯಾಲೆನ್ಸ್ ಮೈನಸ್ ಆದಾಗ ಮಾಡಬೇಕಾದ ಕೆಲಸವೇನು?

ಹೀಗೆ ನಿಮ್ಮ ಬ್ಯಾಲೆನ್ಸ್ ಮೈನಸ್ ಆದಾಗ ಬ್ಯಾಂಕಿನ ಕಸ್ಟಮರ್ ಕೇರ್(customer care)ಗೆ ಕರೆ ಮಾಡಿ ಅದರ ಕಾರಣ ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಡೆಬಿಟ್ ಕಾರ್ಡ್ ಅಥವಾ ಟ್ರಾನ್ಸಾಕ್ಷನ್ ಚಾರ್ಜಸ್ ಗಳಿಂದಾಗಿ ನಿಮ್ಮ ಖಾತೆ ಮೈನಸ್ ಆಗಿದ್ದರೆ ತೊಂದರೆ ಇಲ್ಲ, ಬದಲಿಗೆ ಮಿನಿಮಮ್ ಬಾಕಿ ಹಣವನ್ನು ನಿಮ್ಮ ಖಾತೆಯಲ್ಲಿ ಇರಿಸದ ಕಾರಣ ಬಾಕಿ ಮೊತ್ತವನ್ನು ಮೈನಸ್ ಮಾಡಿ ಶುಲ್ಕ ವಿಧಿಸಿದ್ದಾರೆ, ಕೂಡಲೇ ಬ್ಯಾಂಕ್ ಶಾಖೆಗೆ(Bank branch) ಭೇಟಿ ನೀಡಿ ಬ್ಯಾಂಕ್ ಮ್ಯಾನೇಜರ್(bank manager) ಬಳಿ ಅದನ್ನು ತೆಗೆಯಲು ಹೇಳಿ ಅವರು ಇದಕ್ಕೆ ನಿರಾಕರಿಸಿದರೆ sachet.rbi.org.in ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ ಬ್ಯಾಂಕಿನ ಮೇಲೆ ದೂರನ್ನು ದಾಖಲಿಸಬಹುದು. ಆರ್ಬಿಐ(RBI) ನ ಹೊಸ ನಿಯಮದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬಾಕಿ ಮೊತ್ತವನ್ನು ಇರಿಸುವ ಅಗತ್ಯವಿಲ್ಲ.

advertisement

Leave A Reply

Your email address will not be published.