Karnataka Times
Trending Stories, Viral News, Gossips & Everything in Kannada

Fixed Deposit: ಎಷ್ಟೇ FD ಇಟ್ಟರೂ 8.50% ಬಡ್ಡಿ ಘೋಷಣೆ ಮಾಡಿದ ಈ ಬಾಂಕ್!

advertisement

ಯಾವುದೇ ವ್ಯಕ್ತಿಯಾಗಲಿ ದೀರ್ಘಕಾಲಿಕ ಹೂಡಿಕೆ ಮಾಡಬೇಕು ಅಂದ್ರೆ ಖಂಡಿತವಾಗಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೇಳಿ ಮಾಡಿಸಿದ ಹೂಡಿಕೆಯಾಗಿದೆ ಯಾಕೆಂದರೆ ದೀರ್ಘಕಾಲಿಕ ಹೂಡಿಕೆಯಲ್ಲಿ ಹೆಚ್ಚಿನ ರಿಟರ್ನ್ ಪಡೆದುಕೊಳ್ಳುವಂತಹ ಸಾಧ್ಯತೆ ದಟ್ಟವಾಗಿರುತ್ತದೆ.

ದೇಶದ ಪ್ರೈವೇಟ್ ಸೆಕ್ಟರ್ ನಲ್ಲಿ ಜನಪ್ರಿಯ ಬ್ಯಾಂಕುಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ RBL ಬ್ಯಾಂಕ್ ತನ್ನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಗ್ರಾಹಕರಿಗೆ ಹೊಸ ಬಡ್ಡಿಯನ್ನು ನೀಡಲು ಹೊರಟಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಹೇಳಲು ಹೊರಟಿದ್ದೇವೆ.

RBL ಬ್ಯಾಂಕ್ ಏಳು ದಿನಗಳಿಂದ ಪ್ರಾರಂಭಿಸಿ 10 ವರ್ಷಗಳವರೆಗೂ ಕೂಡ ಫಿಕ್ಸೆಡ್ ಡೆಪಾಸಿಟ್ ಯೋಜನೆ (Fixed Deposit Yojana) ಯನ್ನು ಹೊಂದಿದೆ. ಸಾಮಾನ್ಯ ನಾಗರಿಕರಿಗೆ ಎಂಟು ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 8.50% ಬಡ್ಡಿದರವನ್ನು ನೀಡುತ್ತಿದೆ. 2024ರ ಮೇ 1ರಿಂದ ಈ ಬಡ್ಡಿ ದರಗಳು ಜಾರಿಗೆ ಬಂದಿವೆ.

RBL ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳು:

 

advertisement

Image Source: The Financial Express

 

  • ಏಳರಿಂದ 14 ದಿನಗಳ ಹೂಡಿಕೆ ಮೇಲೆ, ಸಾಮಾನ್ಯ ನಾಗರಿಕರಿಗೆ 3.50 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ ನಾಲ್ಕು ಪ್ರತಿಶತ
  • 15 ರಿಂದ 45 ದಿನಗಳ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ ನಾಲ್ಕು ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 4.50%
  • 46 ರಿಂದ 90 ದಿನಗಳ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 4.50 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 5 ಪ್ರತಿಶತ.
  • 91 ರಿಂದ ಆರು ತಿಂಗಳವರೆಗಿನ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 4.75 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 5.25%.

 

Image Source: The Hindu BusinessLine

 

  • 181 ರಿಂದ 240 ದಿನಗಳ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ ಆರು ಪ್ರತಿಶತ.
  • 241 ರಿಂದ 364 ದಿನಗಳ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 6.05 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 6.55 ಪ್ರತಿಶತ.
  • 365ರಿಂದ 452 ದಿನಗಳ ಹೂಡಿಕೆ ಮೇಲೆ ಸಾಮಾನ್ಯ ನಾಗರಿಕರಿಗೆ 7.50 ಪರ್ಸೆಂಟ್ ಹಾಗೂ ಹಿರಿಯ ನಾಗರಿಕರಿಗೆ ಕೂಡ ಅದೇ ಬಡ್ಡಿದರವನ್ನು ವಿಧಿಸಲಾಗುತ್ತದೆ.
  • 15 ತಿಂಗಳ ವರೆಗಿನ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 7.80 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 8.30%.
  • 725 ದಿನಗಳ ಹೂಡಿಕೆಯ ಮೇಲೆ ಸಾಮಾನ್ಯ ನಾಗರಿಕರಿಗೆ 7.50 ಪರ್ಸೆಂಟ್ ಹಾಗೂ ಹಿರಿಯ ನಾಗರಿಕರಿಗೆ ಎಂಟು ಪರ್ಸೆಂಟ್.
  • ಐದು ವರ್ಷಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 7.10 ಪರ್ಸೆಂಟ್ ಹಾಗೂ ಹಿರಿಯ ನಾಗರಿಕರಿಗೆ 7.60 ಪರ್ಸೆಂಟ್ ಬಡ್ಡಿ ದರವನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.