Karnataka Times
Trending Stories, Viral News, Gossips & Everything in Kannada

Fixed Deposit: 3 ವರ್ಷದವರೆ ಗೆ FD ಮಾಡುವವರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಈ ಬ್ಯಾಂಕುಗಳು!

advertisement

ಇತ್ತೀಚಿನ ದಿನಮಾನಗಳಲ್ಲಿ ಹೂಡಿಕೆಗೆ ನಾನಾ ರೀತಿಯ ಮೂಲಗಳಿದ್ದರೂ ಕೂಡ ಜನರು ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ (Post Office) ಗಳಲ್ಲಿ ಲಭ್ಯವಿರುವ ಸುರಕ್ಷತಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಗಳ ಮೊರೆ ಹೋಗುತ್ತಿರುತ್ತಾರೆ. ಹೀಗಾಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅನುಕೂಲವಾಗುವಂತಹ ರೀತಿ ಎಫ್ ಡಿ ಯೋಜನೆ (FD Scheme) ಯನ್ನು ರೂಪಿಸಿ ಅವರ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ಅಧಿಕ ಬಡ್ಡಿ ಹಣವನ್ನು ನೀಡುತ್ತಾರೆ. ಹೀಗಿರುವಾಗ ಗ್ರಾಹಕರ FD ಮೇಲೆ ಅತಿ ಹೆಚ್ಚು ಬಡ್ಡಿ ಹಣವನ್ನು ನೀಡುವ 5 ಬ್ಯಾಂಕ್ಗಳು ಯಾವ್ಯಾವು ಎಂಬುದನ್ನು ತಿಳಿಸಲಿದ್ದೇವೆ.

ಅತಿ ಹೆಚ್ಚಿನ ಬಡ್ಡಿ ನೀಡುವ 5 ಬ್ಯಾಂಕುಗಳಿವು!

ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀವೇನಾದರೂ ಮೂರು ವರ್ಷಗಳ FD ಯೋಜನೆ ಪಡೆದು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ 7% ಬಡ್ಡಿ ದರದ ಮೇಲೆ ಲಾಭವನ್ನು ನೀಡುತ್ತಾರೆ. ಅದರಂತೆ PNB ಮತ್ತು HDFC ಬ್ಯಾಂಕುಗಳಲ್ಲಿ ಗ್ರಾಹಕರ ಮೂರು ವರ್ಷದ FD ಯೋಜನೆಗೆ 7.7% ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. IFDC & RBL ಬ್ಯಾಂಕುಗಳು ತಲಾ 7.2% ಮತ್ತು 7.70% ಬಡ್ಡಿ ಹಣವನ್ನು ಸಾಮಾನ್ಯ ನಾಗರಿಕರಿಗೆ ನೀಡಲು ನಿರ್ಧರಿಸಿದ್ದಾರೆ. ಅದರಂತೆ ಹಿರಿಯ ನಾಗರಿಕರಿಗೆ 0.5% ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.

SBI ನಲ್ಲಿ ಒಂದು ಲಕ್ಷ ಹೂಡಿಕೆ ಮಾಡಿ 23,000 ಲಾಭಗಳಿಸಿ:

 

Image Source: Mint

 

FD ಯೋಜನೆಗಳ ವರ್ಗದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗ್ರಾಹಕರಿಗೆ ಅನುಕೂಲವಾಗುವ ಸಾಕಷ್ಟು ಸ್ಕೀಮ್ ಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮೂರು ವರ್ಷದ ಈ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಹೂಡಿಕೆದಾರರ ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಡಿ ಮೂರು ವರ್ಷಗಳ ಕಾಲ ಕೇವಲ ಒಂದು ಲಕ್ಷ ರುಪಾಯಿ ಹಣವನ್ನು ಇನ್ವೆಸ್ಟ್ ಮಾಡಿದರೆ 23,144 ಲಾಭದ ಹಣವನ್ನು ನೀಡುತ್ತಾರೆ.‌ ಅಂದರೆ ಮೆಚುರಿಟಿ ಪಿರಿಯಡ್ ನಲ್ಲಿ ಒಟ್ಟಾರೆಯಾಗಿ 1,23,144 ಹಣವನ್ನು ಹಿಂಪಡೆಯಬಹುದು.

Punjab National Bank:

 

Image Source: Business Standard

 

ಭಾರತದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ನಲ್ಲಿ ಮೂರು ವರ್ಷದ ಎಫ್ ಡಿ ಪಡೆದು ಒಂದು ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ 1,23,144 ಹಣವನ್ನು ಹಿಂಪಡೆಯಬಹುದು. ಪಿಎನ್‌ಬಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ಹೆಚ್ಚುವರಿ ತೆರಿಗೆ ಇರುವುದಿಲ್ಲ ಹಾಗೂ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತಾರೆ.

advertisement

HDFC Bank:

 

Image Source: The Economic Times

 

ಅಲ್ಪಾವಧಿಯ ಕಾಲ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ಸ್ (More Returns) ಪಡೆಯಲು ಉತ್ತಮ ಎಫ್ ಟಿ ಯೋಜನೆಯನ್ನು ಹುಡುಕುತ್ತಿದ್ದರೆ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಲಭ್ಯವಿರುವ ಮೂರು ವರ್ಷಗಳ ಈ ಸ್ಕೀಮ್ ಉತ್ತಮ ಆಯ್ಕೆ ಕೇವಲ ಒಂದು ಲಕ್ಷ ರೂಪಾಯಿ ಹಣವನ್ನು ಮೂರು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ ನಲ್ಲಿ ನಿಮ್ಮ ಒಂದು ಲಕ್ಷ ರೂಪಾಯಿ ಕೋರಿಕೆಯೊಂದಿಗೆ 23,144 ಲಾಭವನ್ನು ಪಡೆಯಬಹುದು.

IDFC Bank:

 

Image Source: The Economic Times

 

IDFC ಬ್ಯಾಂಕ್ ನಲ್ಲಿ ಲಭ್ಯವಿರುವ ಫಿಕ್ಸೆಡ್ ಡೆಪಾಸಿಟ್ (Fixed Deposit) ಯೋಜನೆಯಲ್ಲಿ ಕೇವಲ ಒಂದು ಲಕ್ಷ ರೂಪಾಯಿ ಹಣವನ್ನು ಮೂರು ವರ್ಷಗಳ ಕಾಲ ಹೂಡಿಕೆ ಮಾಡಿ ಮೆಚುರಿಟಿ ಪಿರಿಯಡ್ ನಲ್ಲಿ 7.25% ಬಡ್ಡಿ ಆಧಾರದ ಮೇಲೆ 1,24,055 ಹಣವನ್ನು ಪಡೆಯಬಹುದು.

RBL Bank:

 

Image Source: Rediff.com

 

ರತ್ನಾಕರ್ ಬ್ಯಾಂಕ್ ಲಿಮಿಟೆಡ್ (Ratnakar Bank Limited) ನಲ್ಲಿ 1 ಲಕ್ಷ ಹಣವನ್ನು ಮೂರು ವರ್ಷಗಳ ಕಾಲ ಹೂಡಿಕೆ ಮಾಡಿದರೆ 7.70% ಬಡ್ಡಿ ಆಧಾರದ ಮೇಲೆ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ 25,710 ರೂಪಾಯಿ ಲಾಭವನ್ನು ನೀಡುತ್ತಾರೆ. ಅಂದರೆ ಮೆಚುರಿಟಿ ಪಿರಿಯಡ್(Maturity Period) ನಲ್ಲಿ 1,25,710 ಹಣವನ್ನು ಹಿಂಪಡೆಯಬಹುದು.

advertisement

Leave A Reply

Your email address will not be published.