Karnataka Times
Trending Stories, Viral News, Gossips & Everything in Kannada

ಕ್ರಿಕೆಟ್ ಲೋಕದಲ್ಲಿ ಆವರಿಸಿಕೊಂಡ ಸೂತಕದ ಛಾಯೆ! 20ನೇ ವಯಸ್ಸಿಗೆ ಪ್ರಾಣ ಕಳೆದುಕೊಂಡ ಕ್ರಿಕೆಟಿಗ.

advertisement

ಫುಟ್ಬಾಲ್ ಬಿಟ್ಟರೆ ಅತ್ಯಂತ ಜನಪ್ರಿಯ ಕ್ರೀಡೆ ಅಂದ್ರೆ ಅದು ಕ್ರಿಕೆಟ್ ಅನ್ನೋದು ಎಲ್ಲರಿಗೂ ತಿಳಿದಿರುವಂತಹ ವಿಚಾರ ಅದರಲ್ಲೂ ವಿಶೇಷವಾಗಿ ನಮ್ಮ ಭಾರತ ದೇಶದಲ್ಲಿ ಕ್ರಿಕೆಟ್ ಕ್ರೀಡೆಗೆ ಹಾಗೂ ಕ್ರಿಕೆಟಿಗರಿಗೆ ಇರುವಂತಹ ಜನಪ್ರಿಯತೆ ಅಸಮಾನ್ಯವಾದದ್ದು. ಭಾರತದಲ್ಲಿ ಕ್ರಿಕೆಟಿಗರನ್ನು ದೇವರಿಗೆ ಹೋಲಿಸಿ ಪೂಜಿಸುತ್ತಾರೆ ಅನ್ನೋದನ್ನ ಕೂಡ ಪ್ರತಿಯೊಬ್ಬರು ನಂಬಲೇ ಬೇಕಾಗುತ್ತದೆ. ಅಷ್ಟರ ಮಟ್ಟಿಗೆ ಕ್ರಿಕೆಟಿಗರ ಮೇಲೆ ಪ್ರೀತಿ ಹಾಗೂ ಗೌರವವನ್ನು ಅಭಿಮಾನಿಗಳು ಇಟ್ಟಿರುತ್ತಾರೆ.

ಇನ್ನು ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ 20ನೇ ವಯಸ್ಸಿಗೆ ಖ್ಯಾತ ಕ್ರಿಕೆಟಿಗ ಇಹಲೋಕದ ಪ್ರಯಾಣವನ್ನು ಮುಗಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಕ್ರಿಕೆಟ್ ಲೋಕದಲ್ಲಿ ಇದು ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ಈ ಆಟಗಾರ ಮರಣ ಹೊಂದುವುದಕ್ಕಿಂತ ಒಂದು ದಿನ ಮುಂಚೆ ಆಡಬೇಕಾದರೆ ಮೂರು ವಿಕೆಟ್ಗಳನ್ನು ಕಬಳಿಸಿದ ಎಂಬುದಾಗಿ ಕೂಡ ತಿಳಿದುಬಂದಿದ್ದು ಬನ್ನಿ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವ.

20ನೇ ವಯಸ್ಸಿಗೆ ಈ ಲೋಕವನ್ನು ತ್ಯಜಿಸಿದ ಕ್ರಿಕೆಟಿಗ:

advertisement

ಇಂಗ್ಲೆಂಡ್ ಮೂಲದ ಕ್ರಿಕೆಟ್ ಆಗಿರುವಂತಹ ಜೋಶ್ ಬೇಕರ್ (Josh Baker) ತಮ್ಮ 20ನೇ ವಯಸ್ಸಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಆಡುತ್ತಿದ್ದಂತಹ ಈ ಯುವ ಆಟಗಾರ ಸ್ಪಿನ್ ಬೌಲರ್ ಆಗಿ ಸಾಕಷ್ಟು ಯಶಸ್ಸನ್ನು ಪಡೆದುಕೊಂಡಿದ್ದರು. 2021 ರಿಂದಲೇ ಅಂದ್ರೆ ತಮ್ಮ 17ನೇ ವಯಸ್ಸಿನಿಂದಲೇ ಅವರು ಕ್ರಿಕೆಟ್ ತಂಡದ ಜೊತೆಗೆ ಕಾಂಟ್ರಾಕ್ಟ್ ಸಹಿ ಮಾಡಿ ಪ್ರೊಫೆಷನಲ್ ಕ್ರಿಕೆಟ್ ನಲ್ಲಿ ದೊಡ್ಡಮಟ್ಟದ ಸಾಧನೆ ಮಾಡಿದ್ರು.

 

Image Source: BBC

 

Worcestershire ತಂಡದ ಪರವಾಗಿ ಆಡುತ್ತಿದ್ದಂತಹ ಈ ಆಟಗಾರನ ಬಗ್ಗೆ ಟೀಮ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಆತನನ್ನು ಕಳೆದುಕೊಂಡಿರುವಂತಹ ವಿಚಾರವನ್ನು ಅಧಿಕೃತವಾಗಿ ಬಹಿರಂಗಗೊಳಿಸಿದೆ. ಆತನ ಮರಣದಿಂದಾಗಿ ಪ್ರತಿಯೊಬ್ಬರು ಕೂಡ ತಂಡದಲ್ಲಿ ಬೇಸರದಿಂದ ಹತಾಶರಾಗಿದ್ದಾರೆ ಎಂಬುದಾಗಿ ಹೇಳಿಕೊಂಡಿರುವಂತಹ ಟೀಮ್ ಅವರನ್ನು ಯಾವಾಗಲೂ ಕೂಡ ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ. ಪ್ರತಿಯೊಬ್ಬರು ಕೂಡ ಆತನನ್ನು ಕಳೆದು ಕೊಂಡಿರುವುದಕ್ಕೆ ಕಂಬನಿಯನ್ನು ಮಿಡಿದಿದ್ದು ಆತನ ಕುಟುಂಬ ಹಾಗು ಸ್ನೇಹಿತರಿಗೆ ಕಳೆದುಕೊಂಡಿರುವಂತಹ ದುಃಖವನ್ನು ಧರಿಸುವ ಶಕ್ತಿ ನೀಡಲಿ ಎಂಬುದಾಗಿ ಕೇಳಿಕೊಂಡಿದ್ದಾರೆ.

ಆತ 22 ಫಸ್ಟ್ ಕ್ಲಾಸ್ ಮ್ಯಾಚ್ ಹಾಗು 25 ವೈಟ್ ಬಾಲ್ ಮ್ಯಾಚ್ ಅನ್ನು ಆಡಿದ್ದ. ಅಂಡರ್ ನೈನ್ಟೀನ್ ಇಂಗ್ಲೆಂಡ್ ತಂಡದ ಆಟಗಾರನಾಗಿ ಕೂಡ ಕಾಣಿಸಿಕೊಂಡಿದ್ದ. ತಮ್ಮ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ಜಾಸ್ ಬೇಕರ್ 43 ವಿಕೆಟ್ಗಳನ್ನು ಕಬಳಿಸಿ 411 ರನ್ಗಳನ್ನು ಕೂಡ ಬಾರಿಸಿದ್ದಾರೆ. ಇದರಲ್ಲಿ ಎರಡು ಅರ್ಧ ಶತಕಗಳು ಕೂಡ ಇವೆ. ಲಿಸ್ಟ್ ಏ ಕ್ರಿಕೆಟ್ ನಲ್ಲಿ 24 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಎಂಟು ಟಿ ಟ್ವೆಂಟಿ ಪಂದ್ಯಗಳಲ್ಲಿ ಮೂರು ವಿಕೆಟ್ಗಳನ್ನು ಕೂಡ ಕಬಳಿಸುವುದಕ್ಕೆ ಯಶಸ್ವಿಯಾಗಿದ್ದರು.

advertisement

Leave A Reply

Your email address will not be published.