Karnataka Times
Trending Stories, Viral News, Gossips & Everything in Kannada

Gautam Gambhir: ಗೌತಮ್ ಗಂಭೀರ್ ರವರ ನಿದ್ದೆಯನ್ನೆ ಕೆಡಿಸಿದ್ರಂತೆ ಈ ಆಟಗಾರ!

advertisement

ಗೌತಮ್ ಗಂಭೀರ್ (Gautam Gambhir) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಕಂಡಂತಹ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ಕ್ರಿಕೆಟಿಗರಾಗಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವ ಕಪ್ (World Cup) ಸೇರಿದಂತೆ ಸಾಕಷ್ಟು ಸರಣಿಗಳಲ್ಲಿ ಗೆಲುವಿನ ಶ್ರೇಯವನ್ನು ತಂದುಕೊಡುವುದಕ್ಕೆ ಪ್ರಮುಖ ಕಾರಣವಾಗಿದ್ದಾರೆ.

ಇನ್ನು ಐಪಿಎಲ್ (IPL) ನಲ್ಲಿ ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ದೆಹಲಿ ತಂಡದ ಪರವಾಗಿ ಆಡಿರುವಂತಹ ಅನುಭವವನ್ನು ಹೊಂದಿರುವಂತಹ ಆಟಗಾರ ಆಗಿದ್ದು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರವಾಗಿ 2 ಬಾರಿ ಕಪ್ ಗೆದ್ದಿರುವ ಸಾಧನೆ ಕೂಡ ಮಾಡಿದ್ದಾರೆ. ಈ ಮೂಲಕ ಅವರ ನಾಯಕತ್ವದ ಪರಿಚಯವನ್ನು ಕೂಡ ನೀವು ಕಾಣಬಹುದಾಗಿದೆ.

ಗೌತಮ್ ಗಂಭೀರ್ (Gautam Gambhir) ಕೇವಲ ಕ್ರಿಕೆಟಿಗನಾಗಿ ಮಾತ್ರವಲ್ಲದೆ ದೆಹಲಿಯಲ್ಲಿ ಸಂಸದನಾಗಿ ಕೂಡ ಕೆಲಸ ಮಾಡಿರುವಂತಹ ಅನುಭವವನ್ನು ಹೊಂದಿದ್ದು ತಮ್ಮ ಜನ ಸೇವೆಯ ಮೂಲಕ ಎಲ್ಲರೂ ಮನಸ್ಸನ್ನು ಗೆದ್ದಿರುವಂತಹ ವ್ಯಕ್ತಿತ್ವ ಅವರದು. ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಊಟವನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ. ಈಗ ಮತ್ತೆ ಕೊಲ್ಕತ್ತಾ ನೈಟ್ ರೈಡರ್ (KKR) ತಂಡದ ಮೆಂಟರ್ ಆಗಿ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಇತ್ತೀಚಿಗೆ ಎಷ್ಟು ನಡೆದಿರುವಂತಹ ಸಂದರ್ಶನ ಒಂದರಲ್ಲಿ ಗೌತಮ್ ಗಂಭೀರ್ ಯಾವ ಆಟಗಾರನನ್ನು ನೋಡಿದರೆ ಅವರಿಗೆ ಭಯ ಆಗ್ತಿತ್ತು ಅನ್ನೋದರ ಬಗ್ಗೆ ಸಂಪೂರ್ಣವಾಗಿ ಮನ ಬಿಚ್ಚಿ ಮಾತನಾಡಿದ್ದು ಆ ಆಟಗಾರ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಈ ಆಟಗಾರನನ್ನ ನೋಡಿದ್ರೆ ಗೌತಮ್ ಗಂಭೀರ್ ಅವರಿಗೆ ಭಯ ಆಗ್ತಿತ್ತಂತೆ:

 

advertisement

Image Source: India.com

 

ಗೌತಮ್ ಗಂಭೀರ್ (Gautam Gambhir) ಅವರು ಇತ್ತೀಚಿಗಷ್ಟೇ ಐಪಿಎಲ್ ನಲ್ಲಿ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಒಬ್ಬ ತಂಡದ ನಾಯಕನಾಗಿ ಯಾವ ಆಟಗಾರನನ್ನು ನೋಡಿದರೆ ಭಯ ಆಗ್ತಿತ್ತು ಅನ್ನೋದರ ಬಗ್ಗೆ ಮಾತನಾಡಿದ್ದಾರೆ. ಆಟಗಾರ ಕ್ರಿಸ್ ಗೇಲ್ (Chris Gayle) ಅಥವಾ ಎಬಿಡಿ ವಿಲಿಯರ್ಸ್ (AB de Villiers) ಅಂತ ನೀವು ಭಾವಿಸಿರಬಹುದು ಆದರೆ ಅವರಿಬ್ಬರೂ ಅಲ್ಲ. ಹೌದು ಗೌತಮ್ ಗಂಭೀರ್ ಅವರು ಭಯ ಪಡುತ್ತಿದ್ದ ಆ ಆಟಗಾರ ಮತ್ತಿನ್ಯಾರು ಅಲ್ಲ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ (Rohit Sharma).

 

Image Source: NDTV Sports

 

ರೋಹಿತ್ ಶರ್ಮಾ ಒಂದು ಕಾಲದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಯಾವ ರೀತಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿಸುತ್ತಿದ್ದರು ಅನ್ನೋದನ್ನ. ಗೌತಮ್ ಗಂಭೀರ್ ಅವರು ಖುದ್ದಾಗಿ ಹೇಳುವಂತೆ ಆರಂಭದಲ್ಲಿ ರೋಹಿತ್ ಶರ್ಮ ಅವರನ್ನು ಔಟ್ ಮಾಡಿದರೆ ಮಾತ್ರ ಉಳಿಯಲು ಸಾಧ್ಯ. ಒಂದು ವೇಳೆ ಅವರು ತಮ್ಮ ಲಯಕ್ಕೆ ಬಂದರೆ ಅವರನ್ನು ನಿಲ್ಲಿಸುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂಬುದಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿಯಲ್ಲಿ ಬೇರೆ ಆಟಗಾರರಿಗೆ ಕೇವಲ ಒಂದು ಪ್ಲಾನ್ ಮಾತ್ರ ಸಾಕಾಗುತ್ತಿತ್ತು ಆದರೆ ರೋಹಿತ್ ಶರ್ಮಾ ಅವರಿಗೆ ಎರಡರಿಂದ ಮೂರು ಪ್ಲಾನ್ ಗಳನ್ನು ಮಾಡುತ್ತಿದ್ದೆ ಆದರೆ ಅದು ಕೂಡ ಸಾಕಾಗ್ತಿರ್ಲಿಲ್ಲ ಅನ್ನೋದಾಗಿ ಗೌತಮ್ ಗಂಭೀರ್ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ರೋಹಿತ್ ಶರ್ಮ ಐಪಿಎಲ್ ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್ಮನ್ ಆಗಿದ್ರು ಅನ್ನೋದನ್ನ ನೀವು ಈ ಮೂಲಕ ಅರ್ಥಮಾಡಿಕೊಳ್ಳಬಹುದು.

advertisement

Leave A Reply

Your email address will not be published.