Karnataka Times
Trending Stories, Viral News, Gossips & Everything in Kannada

IPL Records: IPL ನ ಈ 5 ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ! RCB ಹೆಸರಲ್ಲೂ ಇದೆ ರೆಕಾರ್ಡ್

advertisement

ಐಪಿಎಲ್ (IPL) ಪ್ರಾರಂಭವಾಗಿ ಈಗಾಗಲೇ 17 ವರ್ಷಗಳು ಮುಗಿದಿದೆ. ಈ ನಡುವೆ ಕ್ರಿಕೆಟ್ ಲೋಕದಲ್ಲಿ ಯಾರು ನಂಬಲು ಕೂಡ ಸಾಧ್ಯವಾಗದಂತಹ ಸಾಕಷ್ಟು ರೆಕಾರ್ಡ್ಗಳು (IPL Records) ಕೂಡ ಕ್ರಿಯೇಟ್ ಆಗಿವೆ. ಇವತ್ತಿನ ಈ ಲೇಖನದಲ್ಲಿ ಯಾವತ್ತೂ ಮುರಿಯಲಾಗದಂತಹ ರೆಕಾರ್ಡುಗಳ ಬಗ್ಗೆ ನಿಮಗೆ ಹೇಳಲು ಹೊರಟಿದ್ದು ತಪ್ಪದೇ ಲೇಖನವನ್ನು ಕೊನೆಯವರೆಗೂ ಓದಿ.

  1. ಮೊದಲನೇದಾಗಿ ಕ್ರಿಸ್ ಗೇಲ್ (Chris Gayle) ರವರ ದಾಖಲೆ. 2011 ರಲ್ಲಿ ನಡೆದಿರುವಂತಹ ಒಂದು ಐಪಿಎಲ್ (IPL) ಮ್ಯಾಚ್ ನಲ್ಲಿ ಗೇಲ್ ರವರು ಒಂದೇ ಓವರ್ ಗೆ 37 ರನ್ನುಗಳನ್ನು ಬಾರಿಸಿದರು. ಈ ಪಂದ್ಯದಲ್ಲಿ ಅವರು ಕೇವಲ 16 ಎಸೆತಗಳ ಮುಂದೆ ಬರೋಬ್ಬರಿ 44 ರನ್ನುಗಳನ್ನು ಬಾರಿಸಿದರು. ಅಂದಿನಿಂದಲೆ ಅವರ ಆಕ್ರಮಣಕಾರಿ ಬ್ಯಾಟಿಂಗ್ ನ ನಿಜವಾದ ಪ್ರದರ್ಶನ ನಡೆದಿದ್ದು ಎಂದು ಹೇಳಬಹುದಾಗಿದೆ.

 

Image Source: Zee News

 

advertisement

  1. ಈಗಾಗಲೇ ಐಪಿಎಲ್ ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಗೆದ್ದಿರುವಂತಹ ಕೊಲ್ಕತ್ತಾ ನೈಟ್ ರೈಡರ್ಸ್ ಮಾಡಿರುವಂತಹ ಈ ದಾಖಲೆ ಇನ್ನಷ್ಟು ವಿಶೇಷವಾಗಿದೆ. 2014ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಆಗಿದ್ದ ಸಂದರ್ಭದಲ್ಲಿ 10 ಮಾರ್ಕ್ಸ್ ಗಳನ್ನು ಸತತವಾಗಿ ಗೆಲ್ಲುವ ಮೂಲಕ ರೆಕಾರ್ಡ್ ಅನ್ನು ಕ್ರಿಯೇಟ್ ಮಾಡಿದ್ದು ಅದನ್ನು ಯಾರು ಕೂಡ ಮುರಿಯಲು ಸಾಧ್ಯವಾಗಿಲ್ಲ.
  2. ಇನ್ನು ಹಿರಿಯ ಸ್ಪಿನ್ನರ್ ಆಗಿರುವಂತಹ ಅಮಿತ್ ಮಿಶ್ರ (Amit Mishra) ಅವರು ಕೂಡ ಒಂದು ರೆಕಾರ್ಡ್ ಮಾಡಿದ್ದು ಇದುವರೆಗೂ ಆ ರೆಕಾರ್ಡ್ ಅನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. 2018 2011 ಹಾಗೂ 2013ರಲ್ಲಿ ಮೂರು ಹ್ಯಾಟ್ರಿಕ್ ಗಳನ್ನು ಪಡೆದುಕೊಂಡಿರುವಂತಹ ಸಾಧನೆಯನ್ನು ಅಮಿತ್ ಮಿಶ್ರ ಮಾಡಿದ್ದಾರೆ. ಇದು ಕೂಡ ಸದ್ಯಕ್ಕೆ ಸೇಫ್ ಆಗಿರುವಂತಹ ರೆಕಾರ್ಡ್ ಆಗಿದೆ.
  3. ಅತ್ಯಂತ ಹೆಚ್ಚು ರನ್ ಬಾರಿಸಿರುವ ಅಂತಹ ದಾಖಲೆಯನ್ನು ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ತಂಡಗಳು ಮುರಿದಿವೆ. ಆದರೆ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ವೈಯಕ್ತಿಕ ಗಳಿಕೆಯಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿರುವಂತಹ ಕ್ರಿಸ್ ಗೇಲ್ (Chris Gayle) ಅವರ ಬಗ್ಗೆ. 2013ರಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಕ್ರಿಸ್ ಗೇಲ್ ಅವರು ಕೇವಲ 66 ಎಸೆತಗಳ ಮುಂದೆ ಬರೋಬ್ಬರಿ 175 ರನ್ನುಗಳನ್ನು ಬಾರಿಸುವ ಮೂಲಕ ಐಪಿಎಲ್ ನಲ್ಲಿ ವೈಯಕ್ತಿಕ ಹೈಯೆಸ್ಟ್ ರನ್ ಬಾರಿಸಿರುವಂತಹ ದಾಖಲೆ ಮಾಡಿದ್ದಾರೆ ಇನ್ನು ಕೂಡ ಅದನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.

 

Image Source: Mint

 

  1. ಕೊನೆಯದಾಗಿ ಹಾಗೂ ಪ್ರಮುಖವಾಗಿ ಕಾಣಿಸಿಕೊಳ್ಳುವುದು ನಮ್ಮೆಲ್ಲರ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ (Virat Kohli) ಅವರ ದಾಖಲೆ. ಒಂದೇ ಸೀಸನ್ನಲ್ಲಿ 973 ರನ್ ಬಾರಿಸುವ ಮೂಲಕ ಒಂದು ಸೀಸನಲ್ಲಿ ಒಬ್ಬ ಬ್ಯಾಟ್ಸ್ಮನ್ ಹೈಯೆಸ್ಟ್ ರನ್ ಸ್ಕೋರ್ ಮಾಡಿರುವಂತಹ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಈ ರೆಕಾರ್ಡ್ ನ್ನು ಯಾರಿಂದಲೂ ಕೂಡ ಮುರಿಯೋದು ಅಸಾಧ್ಯ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.