Karnataka Times
Trending Stories, Viral News, Gossips & Everything in Kannada

IPL 2024: ತೀರಾ ಕಷ್ಟದ ಕುಟುಂಬದಿಂದ ಬಂದು ಇಂದು IPL ನಲ್ಲಿ ಮಿಂಚುತ್ತಿದ್ದಾರೆ ಈ 3 ಭಾರತದ ಆಟಗಾರರು

advertisement

Cricketers who turned from rich to poor:  ಸ್ನೇಹಿತರೆ ಐಪಿಎಲ್ ಶುರುವಾಗುವ ಮೊದಲು ಕ್ರಿಕೆಟ್ ಕೆಲವು ಆಟಗಾರರ ಆರ್ಥಿಕ ಪರಿಸ್ಥಿತಿಯು ಬಹಳ ದಯನೀಯವಾಗಿತ್ತು. ಅಂತಹ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿ ಸುಧಾರಿಸಬೇಕೆಂದಿದ್ದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕಿತ್ತು, ಇತ್ತೀಚಿನ ದಿನಗಳಲ್ಲಿ ದೇಸಿ ಕ್ರಿಕೆಟ್ ಅಥವಾ ಐಪಿಎಲ್ ಮೂಲಕ ಕ್ರಿಕೆಟ್ ಆಟಗಾರರು ತಮ್ಮ ಅದ್ಭುತ ಪ್ರತಿಭೆಯನ್ನು ಆನ್ ಫೀಲ್ಡ್ ನಲ್ಲಿ ತೋರ್ಪಡಿಸಿ ರಾತ್ರೋರಾತ್ರಿ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಬಡತನದ ಕುಟುಂಬಗಳಿಂದ ಬಂದು, ಭಾರತೀಯ ಕ್ರಿಕೆಟ್(Indian cricket) ನಲ್ಲಿ ಭಾರಿ ಹೆಸರುವಾಸಿಯಾಗಿರುವಂತಹ ಮೂರು ಜನಪ್ರಿಯ ಕ್ರಿಕೆಟ್ ಆಟಗಾರರ ಕುರಿತು ಕೆಲ ಆಸಕ್ತಿಕರ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ರವೀಂದ್ರ ಜಡೇಜಾ

ಭಾರತೀಯ ಕ್ರಿಕೆಟಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಆಲ್ ರೌಂಡರ್ ರವೀಂದ್ರ ಜಡೇಜಾ(all rounder Ravindra Jadeja) ಇಂದು ತಮ್ಮ ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ಮೂಲಕ ಆನ್-ಫೀಲ್ಡ್ ನಲ್ಲಿ ಮಿಂಚುತ್ತ ಕೋಟ್ಯಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಆದರೆ ಐಪಿಎಲ್ಗೂ ಮುನ್ನ ರವೀಂದ್ರ ಜಡೇಜಾ ಅವರ ಕ್ರಿಕೆಟ್ ಹಾಗೂ ವೈಯಕ್ತಿಕ ಬದುಕು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೌದು ಗೆಳೆಯರೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಮುನ್ನ ರವೀಂದ್ರ ಜಡೇಜಾ ಅವರ ಆರ್ಥಿಕ ಪರಿಸ್ಥಿತಿಯು ಶೋಚನೀಯವಾಗಿತ್ತು, ಅವರ ತಂದೆ ವಾಚ್ ಮ್ಯಾನ್(watchmen) ಆಗಿ ಕಾರ್ಯ ನಿರ್ವಹಿಸುವ ಮೂಲಕ ಮನೆಯ ಜವಾಬ್ದಾರಿಯನ್ನೆಲ್ಲ ತಮ್ಮ ಮೇಲೆ ವಹಿಸಿಕೊಂಡಿದ್ದರು.

Cricketers who turned from rich to poor

ಅಂತಹ ಸಂದರ್ಭದಲ್ಲಿ ರವೀಂದ್ರ ಜಡೇಜಾ ಐಪಿಎಲ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿದರು ಹಾಗೂ ತಮ್ಮ ಅದ್ಭುತ ಆಟಗಾರಿಕೆಯಿಂದ ಇಂಡಿಯನ್ ಕ್ರಿಕೆಟ್ ಟೀಮ್(Indian cricket team) ನಲ್ಲಿಯೂ ಸ್ಥಾನ ಪಡೆದುಕೊಂಡರು. ಹೀಗೆ ಕಡು ಬಡತನದ ಕುಟುಂಬದಿಂದ ಬಂದಂತಹ ಜಡ್ಡು ಇಂದು ಅತಿ ಶ್ರೀಮಂತ ವ್ಯಕ್ತಿಗಳು ವಾಸವಿರುವಂತಹ ಜಾಮ್ ನಗರ್ ನಲ್ಲಿ ಮನೆ ಹಾಗೂ ಸುಂದರವಾದ ಫಾರ್ಮ್ ಹೌಸನ್ನು ಹೊಂದಿದ್ದಾರೆ.

advertisement

ಉಮೇಶ್ ಯಾದವ್

ಭಾರತೀಯ ಕ್ರಿಕೆಟ್ ನಲ್ಲಿ ವೇಗದ ಬೌಲರ್ ಆಗಿ ಸಾಕಷ್ಟು ವಿಕೆಟ್ಗಳನ್ನು ಕಸಿದುಕೊಂಡು ಟೀಮ್ ಇಂಡಿಯಾಗೆ ಗೆಲುವನ್ನು ತಂದುಕೊಟ್ಟಿರುವಂತಹ ಅತ್ಯದ್ಭುತ ಆಟಗಾರ ಉಮೇಶ್ ಯಾದವ್(Umesh Yadav)ರವರು 2010ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್(Indian premier league) ನಲ್ಲಿ ಆಡಲು ಪ್ರಾರಂಭಿಸುತ್ತಾರೆ. ಆ ಸಂದರ್ಭದಲ್ಲಿ ಉಮೇಶ್ ಯಾದವ್ ಅವರ ಮನೆಯಲ್ಲಿ ಕಡು ಬಡತನ, ಅವರ ತಂದೆ ವಿಧರ್ಬನ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಅಂತಹ ಸಮಯದಲ್ಲಿಯೂ ಕಷ್ಟಗಳಿಗೆ ಹೆದರದೆ ತಮ್ಮ ಗುರಿಯನ್ನು ಬೆನ್ನತ್ತಿದಂತಹ ಉಮೇಶ್ ಯಾದವ್ ಇಂದು ಪ್ರಸಿದ್ಧಿ ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ, ಉಮೇಶ್ ಯಾದವ್ 2024ರ ಋತುವಿನಲ್ಲಿ 23.83ರ ಅತ್ಯುತ್ತಮ ಸರಾಸರಿಯಲ್ಲಿ ಬೌಲಿಂಗ್ ಮಾಡುತ್ತ ಆರು ವಿಕೆಟ್ಗಳನ್ನು ಕಸಿದುಕೊಂಡಿದ್ದಾರೆ.

Cricketers who turned from rich to poor

ಪ್ರಸ್ತುತ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata knight riders) ತಂಡದಲ್ಲಿ ಆಡುತ್ತಿರುವಂತಹ ರಿಂಕು ಸಿಂಗ್(Rinku Singh) ತೀರ ಬಡ ಕುಟುಂಬದಲ್ಲಿದ್ದರು, ಕ್ರಿಕೆಟ್ ಕನಸನ್ನು ಕಟ್ಟಿಕೊಂಡು ಈ ಹಂತದವರೆಗೂ ಬೆಳೆದಿರುವ ಯುವ ಆಟಗಾರ. ಕಳೆದ ವರ್ಷದ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪರವಾಗಿ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಕೊನೆಯ ಓವರನ ಆರು ಬಾಲ್ಗಳಲ್ಲಿ ಬರೋಬ್ಬರಿ 5 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿ, ರಾತ್ರೋ ರಾತ್ರಿ ಸ್ಟಾರ್ ಆದಂತಹ ರಿಂಕು ಸಿಂಗ್ ಈ ಮೊದಲು ಕ್ರಿಕೆಟ್ ಕಲಿಕೆಯ ಜೊತೆಗೆ ತಮ್ಮ ಕುಟುಂಬಕ್ಕೆ ಅರ್ಥಿಕವಾಗಿ ಸಹಾಯ ಮಾಡುವ ಸಲುವಾಗಿ ಹೋಟೆಲ್ ಅಂಗಡಿಗಳಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರಂತೆ.

ಇವರ ತಂದೆ ಸಿಲಿಂಡರ್ ವಿತರಣೆಯ ಕೆಲಸ ಮಾಡಿದರೆ ತಾಯಿ ಮನೆ ಮನೆಗೆ ಹೋಗಿ ಪಾತ್ರೆ ತೊಳೆದು ಅದರಿಂದ ಬಂದಂತಹ ಹಣದಲ್ಲಿ ತಮ್ಮ ಮಕ್ಕಳನ್ನು ಸಾಕುತ್ತಿದ್ದರು. ಹೀಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಕಷ್ಟ ನೋವನ್ನು ಅನುಭವಿಸಿರುವ ರಿಂಕು 2023ರಲ್ಲಿ ಟೀಮ್ ಇಂಡಿಯಾ(team India)ಗೆ ಪದಾರ್ಪಣೆ ಮಾಡಿ ಅತ್ಯುತ್ತಮ ಫಿನಿಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಕೆಆರ್ ತಂಡದ ಪರವಾಗಿ 150ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತ ಈ ಆವೃತ್ತಿಯಲ್ಲಿ ಬರೋಬ್ಬರಿ 63 ರನ್ಗಳನ್ನು ಕಲೆ ಹಾಕಿದ್ದಾರೆ.

advertisement

Leave A Reply

Your email address will not be published.