Karnataka Times
Trending Stories, Viral News, Gossips & Everything in Kannada

Yuvraj Singh: ರೋಹಿತ್ ಶರ್ಮ ಅಲ್ಲ, ಈ ಆಟಗಾರ ಒಂದೇ ಓವರ್ ಗೆ 6 ಸಿಕ್ಸರ್ ಬಾರಿಸಬಲ್ಲ ಎಂದ ಯುವರಾಜ್ ಸಿಂಗ್!

advertisement

ಭಾರತ ಕಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್(all rounder Yuvraj Singh) ಅವರು ಒಂದು ಓವರ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದ ಆಟಗಾರ. ಹೀಗೆ ತಮ್ಮ ಕಾಲದಲ್ಲಿ ಮಾಡಿದಂತಹ ದಾಖಲೆಯನ್ನು ಅಳಿಸಿ ಹಾಕುವ ಸಾಮರ್ಥ್ಯವಿರುವಂತಹ ಆಟಗಾರರನ್ನು ಯುವಿ ಹೆಸರಿಸಿದ್ದಾರೆ. ಹೌದು ಸ್ನೇಹಿತರೆ 2007ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯ(T20 World Cup Match) ದಲ್ಲಿ ಯುವರಾಜ್ ಸಿಂಗ್ (Yuvraj Singh)  ಅವರು 1 ಓವರ್‌ನಲ್ಲಿ ಆರು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ದಾಖಲೆ ಸೃಷ್ಟಿ ಮಾಡಿದರು. ಇದೀಗ ಅಂತಹ ದಾಖಲೆಯನ್ನು ಸರಿಗಟುವ ಸಾಮರ್ಥ್ಯವಿರುವ ಆಟಗಾರ ಯಾರು ಎಂಬುದನ್ನು ಯುವಿ ಬಹಿರಂಗಪಡಿಸಿದ್ದಾರೆ. ವಿಪರ್ಯಾಸ ಏನೆಂದರೆ ರೋಹಿತ್ ಶರ್ಮ(Rohit Sharma) ಅವರ ಹೆಸರನ್ನಾಗಲಿ ಅಥವಾ ಸೂರ್ಯ ಕುಮಾರ್ ಯಾದವ್(Suryakumar Yadav) ಅವರ ಹೆಸರನ್ನಾಗಲಿ ಯುವರಾಜ್ ಸಿಂಗ್ ತೆಗೆದುಕೊಂಡಿಲ್ಲ.

ದಾಖಲೆ ಅಳಿಸಿ ಹಾಕುವ ಸಾಮರ್ಥ್ಯವಿರುವುದು ಆ ಆಟಗಾರನಿಗೆ ಎಂದ ಯುವಿ!

ಭಾರತದ ಮಾಜಿ ಆಟರಾದ ಆಟಗಾರರದ ಯುವರಾಜ್ ಸಿಂಗ್ ಅವರನ್ನು ಸದ್ಯ ಟಿ ಟ್ವೆಂಟಿ ವಿಶ್ವಕಪ್ ಪಂದ್ಯದ ಬ್ರಾಂಡ್ ಅಂಬಾಸಿಡರ್ (Brand ambassador) ಆಗಿ ಮಾಡಲಾಗಿದೆ. ಈ ಕಾರಣದಿಂದ ಹುಸೇನ್ ಬೋಲ್ಟ್(Hussain Bolt) ಮತ್ತು ಕ್ರಿಸ್ ಗೇಲ್(Chris Gayle)ನಂತೆ ಯುವರಾಜ್ ಸಿಂಗ್ (Yuvraj Singh) ಕೂಡ ಮೆಗಾ ಪ್ರಚಾರದ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಆ ವೇಳೆ ಮುಂಬರಲಿರುವ ಟಿ ಟ್ವೆಂಟಿಯಲ್ಲಿ ಒಂದು ಓವರ್ಗೆ ಆರು ಸಿಕ್ಸರ್ ಗಳನ್ನು ಸಿಡಿಸಿ ದಾಖಲೆಯನ್ನು ಅಳಿಸಿ ಹಾಕುವ ಆಟಗಾರನ ಹೆಸರನ್ನು ಯುವರಾಜ್ ಸಿಂಗ್ ತೆಗೆದುಕೊಂಡಿದ್ದಾರೆ, ಈ ವಿಡಿಯೋವನ್ನು ಐಸಿಸಿ ಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.

Image Source: Times Now

advertisement

ಸೂರ್ಯ ಕುಮಾರ್ ಯಾದವ್ಗೆ ಪ್ರಥಮ ಸ್ಥಾನ!

ಸಂದರ್ಶನದಲ್ಲಿ ಮಾತನಾಡುವಾಗ ಯುವರಾಜ್ ಸಿಂಗ್, ಸೂರ್ಯ ಕುಮಾರ್ ಯಾದವ್ ಅದ್ಭುತ ಫಾರ್ಮ್ ನಲ್ಲಿ ಇದ್ದಾರೆ ಅವರು ಎಲ್ಲೆಡೆ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ಗಳನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವ ಮೂಲಕ ಟಿ 20 ಅದ್ಭುತ ಆಟಗಾರರ ರಾಂಕಿಂಗ್ ನಲ್ಲಿ ಸೂರ್ಯ ಕುಮಾರ್ ಯಾದವ್ಗೆ ಪ್ರಥಮ ಸ್ಥಾನವನ್ನು ನೀಡಿದರು. ಆದಂತೆ ಸೆಮಿ ಫೈನಲ್ಸ್(semi finals) ಗೆ ಕಾಲಿಡಬಹುದಾದ ನಾಲ್ಕು ತಂಡಗಳು ಯಾವ್ಯಾವು ಎಂದು ಕೇಳಿದಕ್ಕೆ ಯುವರಾಜ್ ಸಿಂಗ್ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಎಂದು ಹೆಸರಿಸಿದ್ದಾರೆ.

ಹಾರ್ದಿಕ್ ಪಾಂಡ್ಯಗೆ 1 ಓವರ್ ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ!

ಸದ್ಯದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕತ್ವವನ್ನು ವಹಿಸಿರುವ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಲಯವನ್ನು ಕಳೆದುಕೊಂಡಿದ್ದು, ಇವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕೆಟ್ಟ ಪರಿಸ್ಥಿತಿಗೆ ಸಿಲುಕಿಕೊಂಡಿದೆ ಎಂಬ ಧೋರಣೆಯೂ ಕೇಳಿಬರುತ್ತಿದೆ. ಹೀಗಿರುವಾಗ ಯುವರಾಜ್ ಸಿಂಗ್ ತನ್ನಂತೆ ಒಂದು ಓವರ್ ಗಳಲ್ಲಿ 6 ಸಿಕ್ಸರ್ ಗಳನ್ನು ಬಾರಿಸುವ ಸಾಮರ್ಥ್ಯವಿರುವುದು ಹಾರ್ದಿಕ್ ಪಾಂಡ್ಯಗೆ(Hardik Pandya) ಎಂದಿದ್ದಾರೆ.

advertisement

Leave A Reply

Your email address will not be published.