Karnataka Times
Trending Stories, Viral News, Gossips & Everything in Kannada

Drought Relief Money: ಬರ ಪರಿಹಾರ ಬರದವರಿಗೆ 2 ಗುಡ್ ನ್ಯೂಸ್ ನೀಡಿದ ಮಾನ್ಯ ಸಚಿವರು! ತಕ್ಷಣದ ಅಪ್ಡೇಟ್

advertisement

ಈ ವರ್ಷ ಕರ್ನಾಟಕದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೆ ರೈತರು ಬೆಳೆದಂತಹ ಬೆಳೆಯಲು ಹಾನಿಗೀಡಾಗಿದ್ದು, ಅವರ ಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ಬೆಳೆ ಪರಿಹಾರ ಧನವನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ರಾಜ್ಯದ 38 ಲಕ್ಷದ 12 ಸಾವಿರಕ್ಕೂ ಹೆಚ್ಚಿನ ರೈತರ ಖಾತೆಗೆ ಪರಿಹಾರ ಧನವನ್ನು (Relief Fund) ಜಮೆ ಮಾಡಲಾಗಿದೆ. ಇದರೊಂದಿಗೆ ಕೆಲ ರೈತರಿಗೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ (Krishna Byre Gowda) ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಸಣ್ಣ ಹಾಗೂ ಅತಿ ಸಣ್ಣ ರೈತರಿಗೋ ಸಿಗಲಿದೆ ಬರ ಪರಿಹಾರ:

ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಬರ ಪರಿಹಾರ ಹಣ (Drought Relief Money) ವನ್ನು ನೀಡಲು ಸರ್ಕಾರ ಮತ್ತು ಕಂದಾಯ ಸಚಿವರು ತೀರ್ಮಾನ ಮಾಡಿದ್ದಾರಂತೆ. ಸಣ್ಣ ಪ್ರಮಾಣದಲ್ಲಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವ ರೈತರಿಗೆ ಇದು ಅನ್ವಯವಾಗಲಿದ್ದು, ಈ ವರ್ಷದಿಂದ ಇಂತಹ ರೈತರನ್ನು ಬೆಳೆ ಹಾನಿ ನಷ್ಟ ಪರಿಹಾರ ಪೆಟ್ಟಿಗೆ ಸೇರಿಸಿ ಅಂಥವರ ಖಾತೆಗೂ ಪರಿಹಾರದ ಹಣವನ್ನು ಜಮೆ ಮಾಡುವ ಮೂಲಕ ಸಣ್ಣ ಮಟ್ಟದ ರೈತರನ್ನು ಕೃಷಿಯಲ್ಲಿ ಉತ್ತೇಜಿಸಲು ಸರ್ಕಾರ ಮುಂದಾಗಿದೆ.

ಈ ಬೆಳೆಯನ್ನು ಬೆಳೆಯುವ ರೈತರಿಗೆ 3000 ಪರಿಹಾರ ಧನ:

 

Image Source: News Guru Kannada

 

advertisement

ರಾಜ್ಯದಲ್ಲಿ ಮಳೆ ಆಧಾರಿತ ಬೆಳೆಯನ್ನು ಬೆಳೆಯುವ ರೈತರ ಖಾತೆಗೆ 3000 ಹಣವನ್ನು ಜಮೆ ಮಾಡಲಿರುವ ಮಾಹಿತಿಯನ್ನು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಕಳೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಮಾರು 1,63,000ಕ್ಕೂ ಹೆಚ್ಚಿನ ನೀರಾವರಿ ಕೃಷಿಯನ್ನು (Irrigated Agriculture) ಮಾಡುವ ರೈತಗೆ ಈ ವರ್ಗದಡಿ ಬರ ಪರಿಹಾರ ಹಣ (Drought Relief Money) ವನ್ನು ಬಿಡುಗಡೆ ಮಾಡಲಾಗುತ್ತದೆ.

ಬರ ಪರಿಹಾರ ಹಣ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ:

ಕಳೆದ ಕೆಲವು ತಿಂಗಳ ಹಿಂದೆಯೇ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವ ಭರವಸೆಯನ್ನು ಸರ್ಕಾರ ನೀಡಿತ್ತು, ಅದರಂತೆ ರಾಜ್ಯದ ಬಹುತೇಕ ರೈತರ ಖಾತೆಗೆ ಹಣವನ್ನು ಜಮೆ ಮಾಡುತ್ತ ಬಂದಿದ್ದಾರೆ, ಆದರೆ ರಾಜ್ಯದ ಮತ್ತಷ್ಟು ರೈತರಿಗೆ ಇನ್ನು ಬರ ಪರಿಹಾರ ಹಣ (Drought Relief Money) ದೊರೆಕಿಲ್ಲ, ಕಂದಾಯ ಸಚಿವರು (Revenue Minister) ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಸುಮಾರು ಒಂದುವರೆಯಿಂದ ಎರಡುವರೆ ಲಕ್ಷ ರೈತರ ದಾಖಲಾತಿಗಳ ವೇರಿಫಿಕೇಶನ್ ಪ್ರಕ್ರಿಯೆ ನಡೆಸಲಾಗುತ್ತಿದೆ, ಇದಾದ ಬಳಿಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

ಸರಕಾರದಿಂದ ದೊರಕುತ್ತಿರುವಂತಹ ₹3000 ಹಣವನ್ನು ಪಡೆದುಕೊಳ್ಳಲು ಪ್ರತಿ ರೈತರು ಪ್ರಮುಖ ದಾಖಲಾತಿಗಳನ್ನು ಹೊಂದಿರಬೇಕು ಹಾಗೂ ಎಫ್ ಐ ಡಿ ಯನ್ನು ಮಾಡಿಸಿರಬೇಕು‌. ಅದರಂತೆ ನಿಮ್ಮ ಆಧಾರ್ ಕಾರ್ಡ್ಗೆ(Aadhaar Card) ಬ್ಯಾಂಕ್ ಅಕೌಂಟ್ ಹಾಗೂ ಜಮೀನಿನ ಪಹಣಿಯನ್ನು ಲಿಂಕ್ ಮಾಡಿರಬೇಕು. ಈ ಮೂರು ಕೆಲಸಗಳು ಆಗಿದ್ದರೆ ಮಾತ್ರ ನಿಮಗೆ ಬರ ಪರಿಹಾರ ಹಣ ಜಮೆಯಾಗುತ್ತದೆ. ಇಷ್ಟು ದಿನಗಳಾದರೂ ಹಣ ಬಂದಿಲ್ಲ ಎಂದಾದರೆ ಕೂಡಲೇ ತಪ್ಪಾಗಿರುವ ಮಾಹಿತಿಯನ್ನು ಸರಿಪಡಿಸಿ ಮರು ಅರ್ಜಿ (re-application) ಸಲ್ಲಿಸಿ, ರಾಜ್ಯದ ಪ್ರತಿ ರೈತರಿಗೂ ಸೇವಾ ಕೇಂದ್ರ, ಕಂದಾಯ ಸಹಕಾರಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ನಂತಹ ಕೇಂದ್ರಗಳಲ್ಲಿ ಈ ಪ್ರಕ್ರಿಯೆಯನ್ನು ಮಾಡಲಾಗುತ್ತಿದ್ದು, ರಾಜ್ಯದ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.