Karnataka Times
Trending Stories, Viral News, Gossips & Everything in Kannada

Hardik Pandya: CSK ವಿರುದ್ಧ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಪಾಂಡ್ಯ! ಈ ಮಾಂತ್ರಿಕನೇ ಕಾರಣ ಎಂದ ಮುಂಬೈ ನಾಯಕ

advertisement

ಸ್ನೇಹಿತರೆ, ಏಪ್ರಿಲ್ 14 ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆದಂತಹ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಐಪಿಎಲ್ ಪಂದ್ಯವು ವೀಕ್ಷಕರಲ್ಲಿ ಒಂದೊಂದು ಬಾಲ್ ಕುತೂಹಲವನ್ನು ಕೆರಳಿಸಿತ್ತು. ಆರಂಭದಿಂದ ಇಲ್ಲಿಯವರೆಗೂ ಬಹಳ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಮೇಲೆ ಸೆಣೆಸಾಡಾಲು ಮುಂದಾದ ಮುಂಬೈ ಇಂಡಿಯನ್ಸ್ ಸೋಲೊಪ್ಪಿಕೊಂಡು ಸುಮ್ಮನಾದರು.

MI ಕ್ಯಾಪ್ಟನ್ ಹಾರ್ದಿಕ ಪಾಂಡ್ಯ (Hardik Pandya) ಟಾಸ್ಕ್ ಗೆದ್ದು ಚೇಸಿಂಗ್ ಆಯ್ದುಕೊಂಡರು. ಅದಂತೆ ಸಿಎಸ್‌ಕೆ ತಂಡದ ಬಲಿಷ್ಠ ಬ್ಯಾಟರ್ಸ್ಗಳು ಬರೋಬ್ಬರಿ 206 ರನ್ಗಳನ್ನು ಕಲೆ ಹಾಕುವ ಮೂಲಕ ತಮ್ಮ ಎದುರಾಳಿ ತಂಡಕ್ಕೆ 207 ರನ್ ಗಳ ಟಾರ್ಗೆಟ್ ನೀಡಿತ್ತು. ಸಿಎಸ್‌ಕೆ ತಂಡದಲ್ಲಿರುವಂತಹ ಅದ್ಭುತ ಬೌಲರ್ಗಳ ಆರ್ಭಟಕ್ಕೆ ಮಣಿದು ಹೋದಂತಹ ಮುಂಬೈ ಬ್ಯಾಟ್ಸ್ಮನ್ (Mumbai Batsman) ಗಳ ವಿಕೆಟ್ ಒಂದೊಂದಾಗಿ ಬಿದ್ದ ಕಾರಣ ಯಾರು ಕೂಡ 207ರ ಟಾರ್ಗೆಟನ್ನು ಮುಟ್ಟಲು ಸಾಧ್ಯವಾಗಲಿಲ್ಲ ಬದಲಿಗೆ ಇಪ್ಪತ್ತು ಓವರ್ಗಳಲ್ಲಿ 186 ರನ್ಗಳನ್ನು ಹಾಕಿ ಸೋತರು.

ಸೋಲಿಗೆ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ:

 

Image Source: Firstpost

 

ಪಂದ್ಯ ಮುಗಿದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ MI ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) “ಸಿಎಸ್‌ಕೆ ನೀಡಿದ 2೦7 ರನ್ ಗಳ ಟಾರ್ಗೆಟ್ ಅನ್ನು ಸುಲಭವಾಗಿ ಮುಟ್ಟಬಹುದಾಗಿತ್ತು ಆದರೆ ಸಿಎಸ್ಕೆ ತಂಡದ ಅದ್ಭುತ ಬೌಲರ್ ಮತಿಸ ಪತಿರಾಣ (Matheesha Pathirana) ನಾಲ್ಕು ವಿಕೆಟ್ ಗಳನ್ನು ತೆಗೆಯುವ ಮೂಲಕ ಭಾರಿ ವ್ಯತ್ಯಾಸ ಸೃಷ್ಟಿಸಿದರು’’ ಎಂದಿದ್ದಾರೆ. ವಿಕೆಟ್ ಹಿಂದೆ ಧೋನಿಯ ಮ್ಯಾಜಿಕ್ ಕೂಡ ನಡೆಯಿತು ಎಂದು ಪಾಂಡ್ಯ ಅಭಿಪ್ರಾಯ ಪಟ್ಟರು.

ವಾಂಖೆಡೆಯಲ್ಲಿ ಹೆಚ್ಚಾದ ಸಿಎಸ್‌ಕೆ ಬ್ಯಾಟರ್ಗಳ ಆರ್ಭಟ:

 

advertisement

Image Source: News18

 

ಐಪಿಎಲ್ 2024 ಪ್ರಾರಂಭವಾದ ಮೊದಲ ಪಂದ್ಯದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿರುವಂತಹ CSK ಬ್ಯಾಟ್ಸ್ಮನ್ ಗಳು, MI ವಿರುದ್ಧದ ಪಂದ್ಯದಲ್ಲಿ ರನ್ ಗಳ ಸುರಿಮಳೆ ಸುರಿಸಿ ಬರೋಬ್ಬರಿ 206 ರನ್ಗಳನ್ನು ಕಲೆ ಹಾಕಿದರು. ಅದರಲ್ಲೂ ಕ್ಯಾಪ್ಟನ್ ರುತು ರಾಜ್ ಗಾಯಕ್ವಾಡ್ (Ruturaj Gaikwad) 40 ಬಾಲ್ಗಳಲ್ಲಿ ಬರೋಬ್ಬರಿ 60 ರನ್ಗಳನ್ನು ಗಳಿಸಿದರೆ, ಶಿವಂ ದುಬೆ (Shivam Dube) ಕೇವಲ 38 ಬಾಲ್ಗಳಲ್ಲಿ ಔಟ್ ಆಗದೆ ಬರೋಬ್ಬರಿ 66 ರನ್ಗಳನ್ನು ಕಲೆ ಹಾಕಿದರು. ಹೀಗೆ ಇಬ್ಬರು ಆಟಗಾರರು ಅರ್ಧಶತಕವನ್ನು ಸಿಡಿಸುವುದರ ಜೊತೆಗೆ 90ರ ಪಾರ್ಟ್ನರ್ಶಿಪ್ ಅನ್ನು ಕಲೆ ಹಾಕಿದರು.

ಎಂ ಎಸ್ ಧೋನಿ ಅಜೇಯ ಬ್ಯಾಟಿಂಗ್:

ಅಜೇಯ ಇನ್ನಿಂಗ್ಸ್ ಆಡಿದಂತ ಎಂಎಸ್ ಧೋನಿ (MS Dhoni) ನಾಲ್ಕು ಬಾಲ್ಗಳಲ್ಲಿ ಮೂರು ಸಿಕ್ಸರ್ ಗಳನ್ನು ಸಿಡಿಸಿ 20 ರನ್ಗಳನ್ನು ಕಲೆ ಹಾಕಿದರು. ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಅದೇ 20 ರನ್ಗಳ ಜಯ ಸಾಧಿಸಿದರು.

ಮತೀಶ ಪತಿರಾಣಾ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ಸೋಲು:

ಕೇವಲ 63 ಬಾಲ್ಗಳಲ್ಲಿ 11 ಫೋರ್ & 5 ಸಿಕ್ಸರ್ ಗಳನ್ನು ಸಿಡಿಸುತ್ತಾ 105 ರನ್ಗಳನ್ನು ಕಲೆ ಹಾಕಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮ (Rohit Sharma) ಅವರೊಂದಿಗೆ ಅದ್ಭುತ ಪಾರ್ಟ್ನರ್ಶಿಪನ್ನು ಕಲೆ ಹಾಕುತ್ತಿದ್ದ ಇಶಾನ್ ಕಿಶನ್ ಅವರನ್ನು ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮತೀಷಾ ಪತಿರಾಣಾ ಔಟ್ ಮಾಡಿದರು. ಜೊತೆಗೆ ನಾಲ್ಕು ಓವರ್ ಗಳಲ್ಲಿ ಕೇವಲ 28 ರನ್ಗಳನ್ನು ನೀಡುವುದರೊಂದಿಗೆ 4 ವಿಕೆಟ್ಗಳನ್ನು ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಆರ್ಭಟವನ್ನು ನಿಲ್ಲಿಸಿದರು.

advertisement

Leave A Reply

Your email address will not be published.