Karnataka Times
Trending Stories, Viral News, Gossips & Everything in Kannada

Loan: ಲೋನ್ ತಗೆದುಕೊಳ್ಳುವವರಿಗೆ ಅಕ್ಟೋಬರ್ 1 ರಿಂದ ಹೊಸ ರೂಲ್ಸ್!

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಭಾರತ ದೇಶದ ಪ್ರತಿಯೊಂದು ಬ್ಯಾಂಕ್ ಹಾಗೂ NBFC ಕಂಪನಿಗಳ ಪ್ರಮುಖ ಕೇಂದ್ರೀಯ ಕಾರ್ಯನಿರ್ವಹಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ, ಹಣಕಾಸಿನ ವಿಚಾರಗಳ ಕುರಿತಂತೆ ಸಾಲ (Loan) ಸೌಲಭ್ಯಗಳ ವಿಚಾರ ಕುರಿತಂತೆ ಯಾವುದೇ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತರುವ ಹಾಗೂ ಇರುವ ನಿಯಮಗಳನ್ನು ಬದಲಾಯಿಸುವ ಅಥವಾ ತೆಗೆದುಹಾಕುವಂತಹ ಸಂಪೂರ್ಣ ಅಧಿಕಾರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿದೆ. ಇನ್ನು ನಾವು ನಮ್ಮ ಅಗತ್ಯತೆಗಳನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪೂರೈಸಿಕೊಳ್ಳಲು ಬ್ಯಾಂಕುಗಳಿಂದ ಲೋನ್ ಪಡೆದುಕೊಳ್ಳುತ್ತೇವೆ. ಅದಕ್ಕೆ ನಿರ್ದಿಷ್ಟವಾಗಿರುವಂತಹ ಬಡ್ಡಿ ದರವನ್ನು ಕೂಡ ವಿಧಿಸಲಾಗುತ್ತದೆ.

 

Image Source: Mint

 

ಒಂದು ವೇಳೆ ನೀವು ಕೂಡ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅತಿ ಶೀಘ್ರದಲ್ಲಿ ಯಾವುದಾದರೂ ಲೋನ್ ಪಡೆದುಕೊಳ್ಳುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ ಸ್ವಲ್ಪ ಮಟ್ಟಿಗೆ ಕಾಯುವುದು ಒಳ್ಳೆಯದು. ಯಾಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿಯಮವನ್ನು ಅಕ್ಟೋಬರ್ ಒಂದನೇ ತಾರೀಖಿನ ನಂತರ ಜಾರಿಗೆ ತರುವುದಕ್ಕೆ ಹೊರಟಿದ್ದು ಇದರಿಂದ ನಿಮಗೆ ಸಾಕಷ್ಟು ಲಾಭವಾಗಲಿದೆ. ಹಾಗಿದ್ರೆ ಬನ್ನಿ ಜಾರಿಗೆ ತರಲು ಹೊರಟಿರುವಂತಹ ಹೊಸ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ KFS:

 

advertisement

Image Source: Times of India

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ 1ರಿಂದ ಪ್ರಾರಂಭ ಆಗುವಂತೆ KFS ಅಂದರೆ Key Facts Statement ನೇಮವನ್ನು ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳಲ್ಲಿ ಜಾರಿಗೆ ತರುವುದು ಬಹುತೇಕ ಖಾತ್ರಿಯಾಗಿದೆ.

ಈ ಹಿಂದೆ ನಿಮಗೆ ತಿಳಿದಿರಬಹುದು ಬ್ಯಾಂಕುಗಳು ಕೇವಲ ಲೋನ್ ಅಗ್ರಿಮೆಂಟ್ (Loan Agreement) ನಲ್ಲಿ ಇರುವಂತೆ ಲೋನಿನ ಮೇಲೆ ವಿಧಿಸುವಂತಹ ಚಾರ್ಜಸ್ ಗಳನ್ನು ಮಾತ್ರ ಹೇಳ್ತಾ ಇದ್ರು. ಆದರೆ ಕೆಲವೊಂದು ಹೆಚ್ಚಿನ ಚಾರ್ಜಸ್ ಗಳನ್ನು ಕೂಡ ವಿಧಿಸುತ್ತಾ ಇದ್ದರೂ ಆದರೆ ಅವುಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿರಲಿಲ್ಲ. ಇನ್ಮುಂದೆ ಅಂದರೆ ಅಕ್ಟೋಬರ್ ಒಂದರಿಂದ ಆ ಸಂಶಯಗಳು ಇನ್ಮುಂದೆ ನಿಮ್ಮ ಮನಸ್ಸಿನಲ್ಲಿ ಇರೋದಿಲ್ಲ ಯಾಕೆಂದರೆ KFS ನೀವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತರುತ್ತಿದೆ.

ಇದರ ಮೂಲಕ ಗ್ರಾಹಕರಿಗೆ ಲೋನ್ (Loan) ವಿಚಾರದಲ್ಲಿ ಪಾರದರ್ಶಕ ಸೇವೆಯನ್ನು ನೀಡುವಂತಹ ಗುರಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಂದಿದ್ದು ಪ್ರತಿಯೊಂದು ಬ್ಯಾಂಕುಗಳು ಕೂಡ ಇದನ್ನ ಪಾಲಿಸಲಿವೆ. ಉದಾಹರಣೆಗೆ ಇನ್ಮುಂದೆ ನೀವು ಪಡೆದುಕೊಳ್ಳುವಂತಹ ಲೋನ್ ನಲ್ಲಿ ಇರುವಂತಹ ಥರ್ಡ್ ಪಾರ್ಟಿ ಚಾರ್ಜಸ್ ಗಳು, ಇನ್ಸೂರೆನ್ಸ್ ಹಾಗೂ ಲೀಗಲ್ ಚಾರ್ಜಸ್ ಗಳನ್ನು ಕೂಡ ಸಂಪೂರ್ಣ ವಿವರವಾಗಿ ಗ್ರಾಹಕರಿಗೆ ಕಾಣುವ ರೀತಿಯಲ್ಲಿ ತೋರಿಸಲಾಗುತ್ತದೆ. ಇನ್ಮುಂದೆ ಲೋನ್ ಪಡೆದುಕೊಳ್ಳುವಂತಹ ಪ್ರತಿಯೊಬ್ಬ ಗ್ರಾಹಕರು ಕೂಡ ಇದನ್ನು ತಿಳಿದುಕೊಳ್ಳುವಂತಹ ಅಧಿಕಾರವನ್ನು ಹೊಂದಿರುತ್ತಾರೆ.

advertisement

Leave A Reply

Your email address will not be published.