Karnataka Times
Trending Stories, Viral News, Gossips & Everything in Kannada

Tire Blast: ವಾಹನ ಚಲಾಯಿಸುವಾಗ ಸಡನ್ ಆಗಿ ಟೈಯರ್ ಬ್ಲಾಸ್ಟ್ ಆಗಲು ಕಾರಣ ಏನು ಗೊತ್ತಾ?

advertisement

ಇತ್ತೀಚಿನ ದಿನದಲ್ಲಿ ವಾಹ‌ನ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಹೇಳಬಹುದು ಅದರಲ್ಲಿಯೂ ಕಾರು, ಬೈಕ್ ಇತರ ಖಾಸಗಿ ವಾಹನ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೈನಿಕ ಕೆಲಸ ಕಾರ್ಯದಿಂದ ಹಿಡಿದು ನಿತ್ಯ ಕಚೇರಿ ಓಡಾಟಕ್ಕೂ ಈಗ ಪರ್ಸನಲ್ ವಾಹನದ ಬೇಡಿಕೆ ಅಧಿಕವಾಗುತ್ತಿದೆ. ವಾಹನದ ಬೇಡಿಕೆ ಅಧಿಕವಾಗುತ್ತಿದ್ದಂತೆ ಅನೇಕ ಕಂಪೆನಿಗಳು ಜನರ ಮನಸ್ಥಿತಿಗೆ ಅನುಗುಣವಾಗಿ ಹೊಸ ಹೊಸ ವಾಹನ ಬಿಡುಗಡೆ ಮಾಡುತ್ತಲೇ ಇವೆ.

ನೂತನ ಫೀಚರ್ಸ್:

ಈಗ ಕಾರು, ಸ್ಕೂಟಿ, ಬೈಕ್ ಇತರ ವಾಹನದಲ್ಲಿ ಅನೇಕ ಹೊಸ ಹೊಸ ಫೀಚರ್ಸ್ ಬರುವುದು ಸಾಮಾನ್ಯ ಸಂಗತಿಯಾಗಿದೆ. ಅವುಗಳ ಫೀಚರ್ಸ್ ಅಧಿಕವಾದಂತೆ ಮಾರುಕಟ್ಟೆಯಲ್ಲಿ ಕೂಡ ಸ್ಪರ್ಧಾತ್ಮಕ ಬೆಲೆ ಕಾಯಲಾಗುತ್ತಿದೆ. ಇತ್ತೀಚಿನ ವಾಹನಕ್ಕೆ ಸುರಕ್ಷತಾ ಫೀಚರ್ಸ್ ತುಂಬಾ ಅಗತ್ಯವಿದೆ. ವಾಹನ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದ್ದು ಅದರ ಸಲುವಾಗಿಯೆ ಪಾರ್ಕಿಂಗ್ ಸೆನ್ಸರ್ ಅತ್ಯುತ್ತಮ ಗುಣಮಟ್ಟದ ಟೈಯರ್ ಗೆ ಅಧಿಕ ಪ್ರಾತಿನಿಧ್ಯ ನೀಡಲಾಗುತ್ತಿದೆ.

ಟೈಯರ್ ಬ್ಲಾಸ್ಟ್ ಸಂಖ್ಯೆ ಹೆಚ್ಚಳ:

 

advertisement

Image Source: DriveSpark

 

ಇತ್ತೀಚಿನ ದಿನಗಳಲ್ಲಿ ಕಾರು ಬೈಕ್ ಎಲ್ಲ ತರದ ವಾಹನಗಳ ಟೈಯರ್ ಬ್ಲಾಸ್ಟ್ (Tire Blast) ಆಗುವ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ವಾಹನ ಚಲಾಯಿಸುವ ಸಂದರ್ಭದಲ್ಲಿ ಟೈಯರ್ ಬ್ಲಾಸ್ಟ್ ಆಗಿ ಅಪಾರ ಪ್ರಮಾಣದಲ್ಲಿ ಹಾನಿಯಾದ ಅನೇಕ ಪ್ರಕರಣ ನಾವು ಕಾಣಬಹುದು ಹಾಗಾದರೆ ಟಯರ್ ಬ್ಲಾಸ್ಟ್ (Tire Blast) ಆಗಲು ಕಾರಣ ಏನು ಎಂಬ ಕುತೂಹಲ ನಿಮಗೆ ಇದ್ದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.ಈ ಬಗ್ಗೆ ನಾವು ನಿಮಗೆ ಮಾಹಿತಿ ತಿಳಿಸಲಿದ್ದೇವೆ.

ಕಾರಣ ಏನು?

ಟೈಯರ್ ಬ್ಲಾಸ್ಟ್ (Tire Blast) ಆಗಲು ಅನೇಕ ತರನಾದ ಕಾರಣ ಇದೆ. ನೀವು ಟಯರ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಒಂದು ಸಂಖ್ಯೆ ಇರಲಿದೆ. ಅದನ್ನು ಕೋಡ್ ಎಂದು ಕೂಡ ಕರೆಯುತ್ತಾರೆ. ಅದರ ಪ್ರಕಾರ ಇಂತಿಷ್ಟೇ ಸ್ಪೀಡ್ ನಲ್ಲೇ ವಾಹನ ಓಡಿಸಬಹುದು ಎಂದು ಇರಲಿದೆ ಅದಕ್ಕಿಂತ ಹೆಚ್ಚಾದ ಸ್ಪೀಡ್ ಗೆ ವಾಹನ ಚಲಾಯಿಸಿದರೆ ಆಗ ಟೈಯರ್ ಬ್ಲಾಸ್ಟ್ (Tire Blast) ಆಗಲಿದೆ. ಅದರಲ್ಲಿ ಸ್ಪೀಡ್ ರೇಟಿಂಗ್ ಕೂಡ ಇರಲಿದೆ. ಅದರಲ್ಲಿ ಇಂಗ್ಲಿಷ್ ಆಲ್ಫಾಬೆಟ್ಟಿಂಗ್ ಆಧಾರದ ಮೇಲೆ ಸ್ಪೀಡ್ ರೇಟ್ ಕೂಡ ಇರುತ್ತದೆ. ಉದಾ: W ನಲ್ಲಿ 270 KPH ಹಾಗೂ 168MPH ಎಂದು ಇರಲಿದೆ. Y ನಲ್ಲಿ 300 KPH ಹಾಗೂ 186 MPH ಎಂದು ಕಾಣಿಸಲಿದೆ.

ಹೀಗಾಗಿ ಇಷ್ಟೇ ಸ್ಪೀಡ್ ನಲ್ಲಿ ಹೋದರೆ ಸೇಫ್ ಎನ್ನಬಹುದು. ಅದೇ ರೀತಿ ಈಗ ಬಿಸಿಲು ಕೂಡ ತುಂಬಾ ಹೆಚ್ಚಾಗಿ ಇದೆ. ಹಾಗಾಗಿ ನೀವು ತುಂಬಾ ಹೊತ್ತು ಬಿಸಿಲಿನಲ್ಲಿ ಗಾಡಿ ಇಟ್ಟು ಹೋದರೆ ಆಗ ನಿಮಗೆ ಕೂಡಲೇ ವಾಹನ ಚಲಾಯಿಸಿ ಹೋಗುವುದು ಕೂಡ ಟೈಯರ್ ಬ್ಲಾಸ್ಟ್ ಆಗುವ ಸಾಧ್ಯತೆ ಕೂಡ ಇರಲಿದೆ. ಹಾಗಾಗಿ ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದರಿಂದ ಸಾಕಷ್ಟು ಅನುಕೂಲ ನಿಮಗೆ ಆಗಲಿದೆ.

advertisement

Leave A Reply

Your email address will not be published.