Karnataka Times
Trending Stories, Viral News, Gossips & Everything in Kannada

Crop Loss Compensation: ಬೆಳೆ ನಷ್ಟ ಪರಿಹಾರದ ಬಗ್ಗೆ ಸರ್ಕಾರದ ಹೊಸ ಸುತ್ತೋಲೆ! ಇಲ್ಲಿದೆ ಲಿಸ್ಟ್

advertisement

ರೈತರಿಗೆ ಆರ್ಥಿಕ ವಾಗಿ ಬೆಂಬಲ ನೀಡುವ ನಿಟ್ಟಿನಲ್ಲಿ ಸರಕಾರವು ಬರ ಪರಿಹಾರವನ್ನು ನೀಡಲು ಈಗಾಗಲೇ ಸರಕಾರ ಮುಂದಾಗಿದೆ.‌ಈ ಭಾರಿ ಕೃಷಿಯಲ್ಲಿ ಬಹಳಷ್ಟು ನಷ್ಟ ವಾಗಿದ್ದು ರೈತರಿಗೆ ಕೃಷಿಗೆ ಮಾಡಿದ ಸಾಲವನ್ನು‌ ತೀರಿಸಲು ಸಹ ಕಷ್ಟ ವಾಗಿದೆ. ಹಾಗಾಗಿ ಸರಕಾರಕ್ಕೆ ಬರ ಪರಿಹಾರ‌ವನ್ನು ನೀಡಲು ರೈತರು ಮನವಿ ಮಾಡಿದ್ದರು.‌ ಈಗಾಗಲೇ ನೋಂದಣಿ ಮಾಡಿದ ರೈತರಿಗೆ ಮೊದಲ ಕಂತಿನ ಹಣವನ್ನು ರಾಜ್ಯ ಸರಕಾರ ಬಿಡುಗಡೆ ‌ಮಾಡಿದ್ದು ಕೆಲವು ರೈತರಿಗೆ‌ ಹಣ ಜಮೆ ಯಾಗಿದೆ.‌ ಇದೀಗ ಕೇಂದ್ರ ಸರಕಾರದಿಂದ ಹಣ ಜಮೆ ಯಾಗುವ ಬಗ್ಗೆ ಆಪ್ಡೆಟ್ ‌ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ರೈತರು ಈ ಮಾಹಿತಿ ತಿಳಿಯಲೇ ಬೇಕು.

ಆದೇಶ ನೀಡಿದೆ:

ರಾಜ್ಯದಲ್ಲಿ ‌ಮುಂಗಾರು ಹಂಗಾಮಿನಲ್ಲಿ ಮಳೆ ‌ಸಮಸ್ಯೆಯಿಂದ ಬೆಳೆ ನಷ್ಟ ಪರಿಹಾರ (Crop Loss Compensation) ನೀಡಲು ಮುಂದಾಗಿದ್ದು ‌ ಇದೀಗ ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ ಮೂಲಕ ಬಿಡುಗಡೆ ಮಾಡಿರುವ 3,454.22 ಕೋಟಿ ರೂ.ಗಳನ್ನು ಅರ್ಹ ರೈತರಿಗೆ ನೀಡುವ ಸಲುವಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿ ರಾಜ್ಯ ಸರಕಾರ ಆದೇಶ ನೀಡಿದೆ.

ಹಣ ಬಿಡುಗಡೆ:

 

Image Source: Deccan Chronicle

 

ಈಗಾಗಲೇ ರಾಜ್ಯ ಸರಕಾರ ‌ ರೈತರಿಗೆ2 ಸಾವಿರ ರೂ.ವರೆಗೆ ಮಧ್ಯಂತರ ಮೊತ್ತ ನೀಡಿದ್ದು ಬಾಕಿ ಇರುವ ಮೊತ್ತ ಜಮಾ ಮಾಡಲು ಇದೀಗ ಮುಂದಾಗಿದೆ. ಕೇಂದ್ರದಿಂದ ಬಂದಿರುವ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಹಾಕಲು ಚುನಾವಣಾ ಆಯೋಗದ ಅನುಮತಿ ಸಹ ಪಡೆಯಲಾಗಿದೆ.

advertisement

ಯಾವತ್ತು ರೈತರ ಖಾತೆಗೆ ಹಣ ಜಮೆ?

ಬೆಳೆ ನಷ್ಟ ಪರಿಹಾರದ (Crop Loss Compensation) ಕುರಿತಾಗಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಯಾಗಬಾರದು.‌ ಇದಕ್ಕಾಗಿ ರೈತರಿಗೆ ಅಗತ್ಯ ಮಾಹಿತಿ ನೀಡಲು ಡಿಸಿ, ತಹಶೀಲ್ದಾರ್‌ ಕಚೇರಿಗಳಲ್ಲಿ ಹೆಲ್ಪ್‌ ಡೆಸ್ಕ್‌ಗಳನ್ನು ತೆರೆಯಲು ಕೂಡ ಅವಕಾಶ ನೀಡಲಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಎಲ್ಲ ರೈತರ ಖಾತೆಗಳಿಗೆ ಈ ಹಣ ಜಮೆಯಾಗಬಹುದು.

ಎಷ್ಟು ಬಿಡುಗಡೆ?

 

Image Source: Amar Ujala

 

ಎನ್‌ಡಿಆರ್‌ಎಫ್‌ ಪ್ರಕಾರ ಗರಿಷ್ಠ 2 ಹೆಕ್ಟೇರ್‌ ಪ್ರದೇಶದ ಮಿತಿಗೆ ಬೆಳೆ ನಷ್ಟ ಪರಿಹಾರ ನಿಗದಿ ಪಡಿಸಲಾಗಿದ್ದು ಮಳೆಯಾಶ್ರಿತ ಬೆಳೆಗೆ ರೂ 8,500 ರೂ, ನೀರಾವರಿ ಪ್ರದೇಶದ ಬೆಳೆಗೆ 17,000 ರೂ. ದೀರ್ಘಾವಧಿ ಬೆಳೆ ಗೆ 22,500 ರೂ. ನೀಡಲಿದೆ.

ಈ ಕೆಲಸ ಕಡ್ಡಾಯ:

ಈ ಹಣ ಖಾತೆಗೆ‌ ಬರಬೇಕಿದ್ದಲ್ಲಿ ರೈತರು ಎಫ್ಐಡಿಯನ್ನು ಮಾಡಿಸಿ ಕೊಳ್ಳುವುದು ಕಡ್ಡಾಯ. ತಮ್ಮ ಪಹಣಿಯ ದಾಖಲೆ ವಿವರದೊಂದಿಗೆ‌ ಎಫ್ ಐಡಿ ಮಾಡಿಸಿಕೊಳ್ಳಿ.

advertisement

Leave A Reply

Your email address will not be published.