Karnataka Times
Trending Stories, Viral News, Gossips & Everything in Kannada

2024 T20 World Cup: ಈ ಬಾರಿಯ T20 ವಿಶ್ವಕಪ್ ನಲ್ಲಿ ಈ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲ!

advertisement

ಸಮಯದ ಜೊತೆಗೆ ಟಿ ಟ್ವೆಂಟಿ ಫಾರ್ಮೆಟ್ ಅನ್ನು ಆಡುವಂತಹ ವಿಧಾನ ಕೂಡ ಬದಲಾವಣೆ ಆಗುತ್ತಿದ್ದು ಪ್ರತಿಯೊಬ್ಬರು ಕೂಡ ಇದೇ ಕಾರಣಕ್ಕಾಗಿ T20 ವಿಶ್ವಕಪ್ಗಾಗಿ (2024 T20 World Cup) ಎದುರು ನೋಡುತ್ತಿದ್ದಾರೆ. ರೋಮಾಂಚನಕಾರಿ ರೀತಿಯಲ್ಲಿ ಆಡುವಂತಹ ಟಿ ಟ್ವೆಂಟಿ ಫಾರ್ಮೆಟ್ ನ ಈ ವಿಶ್ವಕಪ್ ನಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವಂತಹ ಕುತೂಹಲ ಪ್ರತಿಯೊಬ್ಬರಲ್ಲಿ ಕೂಡ ಇದೆ.

ಈ ಬಾರಿ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಘೋಷಣೆ ಕೂಡ ಏಪ್ರಿಲ್ 30 ರಂದು ನಡೆದಿರುವುದು ನಿಮಗೆಲ್ಲರಿಗೂ ತಿಳಿದಿರಬಹುದು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ (2024 T20 World Cup) ಅನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವಂತಹ ಆಟಗಾರರ ಲಿಸ್ಟ್ ಅನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ತಂಡದ ಆಯ್ಕೆಯ ಕುರಿತಂತೆ ಕೆಲವೊಂದು ಅಸಮಾಧಾನಗಳು ಇದ್ದರೂ ಕೂಡ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಕಪ್ ಗೆಲ್ಲುವಂತಹ ಫೇವರೆಟ್ ತಂಡಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ ಎನ್ನುವ ಮಾತುಗಳು ಕೂಡ ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಜೂನ್ 1 ರಿಂದ ಪ್ರಾರಂಭವಾಗುವಂತಹ ಟಿ ಟ್ವೆಂಟಿ ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ದೇಶಗಳಲ್ಲಿ ನಡೆಯುತ್ತಿದೆ.

ಈ ತಂಡವನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲ?

advertisement

ಈ ಬಾರಿ ರೆಗುಲರ್ ತಂಡಗಳ ಜೊತೆಗೆ ಸಾಕಷ್ಟು ಹೊಸ ತಂಡಗಳು ಕೂಡ ಟಿ20 ವಿಶ್ವಕಪ್ (2024 T20 World Cup) ಆಡೋದಕ್ಕೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಗೆ ಕಾಲಿಡುತ್ತಿವೆ. ಕಾಂಪಿಟೇಶನ್ ಕೂಡ ನೆಕ್ಸ್ಟ್ ಲೆವೆಲ್ ನಲ್ಲಿ ಇದೆ ಎಂದು ಹೇಳಬಹುದು ಆಗಿದೆ. ಆದರೆ ಈ ಬಾರಿಯ ಟೂರ್ನಮೆಂಟ್ನ ಅತ್ಯಂತ ಕಠಿಣ ತಂಡ ಯಾವುದು ಎಂಬುದನ್ನು ಕೇಳೋದಾದ್ರೆ ಪ್ರತಿಯೊಬ್ಬರೂ ಕೂಡ ನೀಡುವಂತಹ ಒಂದೇ ಒಂದು ಉತ್ತರ ಅದು ಆಸ್ಟ್ರೇಲಿಯಾ. ಇದಕ್ಕೆ ಪ್ರಮುಖವಾಗಿ ಕಾರಣ ಅಂದ್ರೆ ಭಾರತದ ನೆಲದಲ್ಲಿ ನಡೆದಿರುವಂತಹ ಏಕದಿನ ವಿಶ್ವಕಪ್ ನಲ್ಲಿ ಕೂಡ ಆಸ್ಟ್ರೇಲಿಯಾ ತಂಡ ಟೂರ್ನಮೆಂಟ್ ಇಂದ ಹೊರಹೋಗುವ ಪರಿಸ್ಥಿತಿಯಿಂದ ಟೂರ್ನಮೆಂಟ್ ಅನ್ನು ಗೆಲ್ಲುವವರೆಗೂ ಕೂಡ ತನ್ನ ಪ್ರಾಬಲ್ಯವನ್ನು ತೋರ್ಪಡಿಸಿದೆ.

 

Image Source: Sporting News

 

ಪ್ಯಾಟ್ ಕಮಿನ್ಸ್ (Pat Cummins) ರವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈಗಾಗಲೇ ಅತ್ಯಂತ ಬಲಿಷ್ಠ ತಂಡ ಎಂಬುದನ್ನು ಸಾಕಷ್ಟು ಬಾರಿ ಸಾಬೀತುಪಡಿಸಿದೆ. ಮಾರ್ಕ್ಸ್ ಸ್ಟಾಯ್ನಿಸ್ (Marcus Stoinis), ಟ್ರಾವಿಸ್ ಹೆಡ್ (Travis Head), ಕ್ಯಾಮರನ್ ಗ್ರೀನ್ (Cameron Green) ಅವರಂತಹ ಬಲಿಷ್ಠ ಆಲ್ ರೌಂಡರ್ ಗಳನ್ನು ತಂಡ ಹೊಂದಿದೆ.

ತಂಡದ ತುಂಬೆಲ್ಲ ಕೊನೆವರೆಗೂ ಕೂಡ ಮ್ಯಾಚ್ ವಿನ್ನರ್ ಆಟಗಾರರನ್ನು ನೀವು ಕಾಣಬಹುದಾಗಿದೆ. ಕಳೆದ ವರ್ಷವಷ್ಟೇ ಒಂದು ವಿಶ್ವಕಪ್ ಗೆದ್ದಿರುವಂತಹ ಈ ತಂಡ ಮತ್ತೆ ಈಗ 2024ರಲ್ಲಿ ಮತ್ತೊಂದು ವಿಶ್ವ ಕಪ್ ಗೆಲ್ಲೋದಕ್ಕೆ ಸಜ್ಜಾಗಿ ನಿಂತಿದೆ.

ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಆಯ್ಕೆ ಆಗಿರುವಂತಹ ಆಟಗಾರರನ್ನು ಗಮನಿಸುವುದಾದರೆ ಮಿಚಲ್ ಮಾರ್ಷ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ತಾರೆ. ಆಸ್ಟನ್ ಆಗರ್, ಪ್ಯಾಟ್ ಕಮಿನ್ಸ್, ನಥನ್ ಎಲೀಸ್, ಟಿಮ್ ಡೇವಿಡ್, ಕ್ಯಾಮೆರೂನ್ ಗ್ರೀನ್, ಹೆಜಲ್ವುಡ್, ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಮಿಚಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಸ್ಟಾಯ್ನಿಸ್, ಡೇವಿಡ್ ವಾರ್ನರ್ ಹಾಗೂ ಆಡಂ ಜಂಪ ಅವರನ್ನು ಆಯ್ಕೆ ಮಾಡಲಾಗಿದೆ.

advertisement

Leave A Reply

Your email address will not be published.